ಹುಬ್ಬಳ್ಳಿ: ಕುರಿ ಕಳ್ಳರನ್ನು ಬೆನ್ನಟ್ಟಿ ಹೋದ ಪೊಲೀಸರನ್ನೇ ಅಡ್ಡಗಟ್ಟಿದ ಕಳ್ಳರು ಚಾಕು ಇರಿದು ಪರಾರಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದ ದುಂದೂರ ಬಳಿ ನಡೆದಿದೆ.
ಪಿಎಸ್ಐ ಉಮಾ ಹಾಗೂ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ.. ಕುರಿ ಕಳ್ಳರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಹೊರಟಿದ್ದರು ಎಂದು ತಿಳಿದುಬಂದಿದೆ.. ಐದು ಜನ ಕಳ್ಳರ ಪೈಕಿ ಓರ್ವ ಮಾತ್ರ ಪೊಲೀಸರ ಗಾಳಕ್ಕೆ ಬಿದ್ದಿದ್ದು, ಇನ್ನುಳಿದ ನಾಲ್ವರು, ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ….ಪರಾರಿಯಾದವರ ಪತ್ತಗೆ ಪೊಲೀಸರು ಬಲೆ ಬೀಸಿದ್ದಾರೆ…..