ಹುಬ್ಬಳ್ಳಿ: ತನ್ನ ಸಹೋದ್ಯೋಗಿಯಿಂದಲೇ ಹಲ್ಲೆಗೊಳಗಾಗಿದ್ದ ಶಿಕ್ಷಕಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಗದಗ ಜಿಲ್ಲೆಯಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ಅಥಿತಿ ಶಿಕ್ಷಕ ಮುತ್ತಪ್ಪ ಎಂಬುವವನಿಂದ ಹಲ್ಲೆ ಮಾಡಲಾಗಿತ್ತು. ಹಲ್ಲೆ ಬಳಿಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಶಿಕ್ಷಕಿ ಗೀತಾ ಬಾರಕೇರನ್ನ ದಾಖಲು ಮಾಡಲಾಗಿತ್ತು.
ಡಿಸೆಂಬರ್ 19 ಸೋಮವಾರ 11:30 ಸುಮಾರಿಗೆ ಶಾಲೆಯ 10 ವರ್ಷದ ಮಗು ಭರತ್ ಹಾಗೂ ಭರತ್ ತಾಯಿ ಗೀತಾ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾಗ ಘಟನೆಯಲ್ಲಿ 10 ವರ್ಷದ ಭರತ್ ಸಹ ಮೃತಪಟ್ಟಿದ್ದ. ಗೀತಾ ಬಾರಕೇರ್ ಅವರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಶಾಲೆಯ ಮೊದಲ ಮಹಡಿಯಲ್ಲಿದ್ದ ಭರತ್ ಕ್ಲಾಸ್ ಗೆ ಹೋಗಿ ಹೊರಗಡೆ ಕರೆದುಕೊಂಡು ಬಂದು ಅಲ್ಲಿ ಹಲ್ಲೆ ಮಾಡಿ.. ಮೊದಲ ಮಹಡಿಯಿಂದ ಕೆಳಗಡೆ ಎಸೆದಿದ್ದ.
ಗಾಯಗೊಂಡಿದ್ದ ಭರತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಹ ಮೃತಪಟ್ಟಿದ್ದ .
ನಂತರ ಶಾಲೆಯ ಶಿಕ್ಷಕಿ, ಭರತ್ ತಾಯಿಯ ಗೀತಾ ಬಾರಕೇರ ಮೇಲೋ ಹಲ್ಲೆ ಮಾಡಿದ್ದ ಶಿಕ್ಷಕ ಮತ್ತಪ್ಪ ಪರಾರಿಯಾಗಿದ್ದ.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …