Breaking News

ಎರಡನೇ ದಿನವೂ ಕಾರ್ಯಾಚರಣೆ: ಗೋರಿ ತೆರವಿಗೆ ಸರ್ಪಗಾವಲು..

Spread the love

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮೂರು ಗೋರಿಗಳ ತೆರವು ಕಾರ್ಯ ಅಂತ್ಯಗೊಂಡಂತಾಗಿದೆ.

ಹೌದು..ಸತತ 24 ಗಂಟೆಗಳ ಕಾಲ ನಡೆದ ತೆರವು ಕಾರ್ಯಾಚರಣೆಯಲ್ಲಿ ಧಾರ್ಮಿಕ ವಿಧಿ ವಿಧಾನ ಪೂರೈಸಿ ಸಮಾಧಿಗಳ ತೆರವು ಮಾಡಲಾಗಿದೆ. ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ಗೋರಿ ಮತ್ತು ಇಬ್ಬರು ಸೇವಕರ ಗೋರಿಗಳ ತೆರವು ಮಾಡಲಾಯಿತು.

ಇನ್ನೂ ಯಂತ್ರದ ಮೂಲಕ ಮೂರೂ ಗೋರಿ ತೆಗೆದ ಸಿಬ್ಬಂದಿ, ದರ್ಗಾ ಮಂಡಳಿ ಸೂಚಿಸುವ ಸ್ಥಳಕ್ಕೆ ಗೋರಿಗಳ ಸ್ಥಳಾಂತರಕ್ಕೆ ತೀರ್ಮಾನ ಮಾಡಲಾಗಿದೆ. ಮತ್ತೊಂದೆಡೆ ಮಸೀದಿಯ ಅರ್ಧ ಭಾಗ ನೆಲಸಮಗೊಳಿಸಿದ್ದು, ಬೈರಿದೇವರಕೊಪ್ಪದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ.
*ನಾಳೆ ಬೆಳಿಗ್ಗೆ 6 ವರೆಗೂ ನಿಷೇಧಾಜ್ಞೆ ಮುಂದುವರಿಕೆ*
ಭೈರಿದೇವರಕೊಪ್ಪ ಬಳಿಯ ಐತಿಹಾಸಿಕ ಹಜರತ್ ಸೈಯದ್ ಮೊಹಮ್ಮದ್ ಖಾದ್ರಿ ಶಾ ದರ್ಗಾ ತೆರವು ಇನ್ನಷ್ಟು ಬಾಕಿ ಇದ್ದು ಈ
ಹಜರತ್ ಸೈಯದ್ ಮೊಹಮ್ಮದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಸುಗಮವಾಗಿ ನಡೆಯಲು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನಾಳೆವರೆಗೂ ನಿಷೇಧಾಜ್ಞೆ ಮುಂದುವರಿಕೆ ಮಾಡಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆದೇಶ ಮತ್ತೆ ಇನ್ನೊಂದು ಇಂದು ಹೊರಡಿಸಿದ್ದಾರೆ‌.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದ್ದು ಯಾವುದೇ ಸಂತೆ, ಜಾತ್ರೆ, ಆಚರಣೆ, ಮಹೋತ್ಸವ ವಿಜಯೋತ್ಸವ ,ರಾಜಕೀಯ ಸಭೆ ಸಮಾರಂಭ ಮಾಡಬಾರದು ‌ಜೊತೆಗೆ ಗುಂಪು ಗುಂಪಾಗಿ ಅಡ್ಡಾಡುವುದನ್ನ ಸಹ ನಿಷೇಧಾಜ್ಞೆ ಮಾಡಲಾಗಿದೆ. ಇನ್ಙು ಕಟ್ಟು ನಿಟ್ಟಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ
144 ಕಲಂ ಜಾರಿ ಮುಂದುರಿಸಿ ಪೊಲೀಸ್ ಕಮೀಷನರ್ ಆದೇಶ ಪಾಲಿಸಲು ಸಹ ಎಚ್ಚರಿಕೆ ನೀಡಿದ್ದಾರೆ .
ಲಾಭುರಾಮ್ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ ಅವರು ಪ್ರತ್ಯೇಕ ಆದೇಶ ಸಹ ಹೊರಡಿಸಿದ್ದು ಈಗ ಮತ್ತೆ ಕಾರ್ಯಾಚರಣೆ ಸುತ್ತಲೂ ಇನ್ನಷ್ಟು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಸಹ ಮಾಡಲಾಗಿದೆ.
ಹುಬ್ಬಳ್ಳಿ, ಬಳ್ಳಾರಿ, ಬಾಗಲಕೋಟೆ, ಹೊಸಪೇಟೆ ಹಾಗೂ ವಿಜಯಪುರ, ಕಾರವಾರ ಜಿಲ್ಲಾ ಪೊಲೀಸರ ಆಗಮಿಸಿದ್ದು ರಾಪಿಡ್ ಆಕ್ಸನ್ ಫೋರ್ಸ್ ಸಿಬ್ಬಂದಿ ಬೆಳಿಗ್ಗೆಯಿಂದಲೇ ದರ್ಗಾ ಸುತ್ತಲೂ ಪಹರೆ ನಡೆಸಲಾಗಿದೆ‌.

.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!