https://youtu.be/7a3qTiV_g1M
ಹುಬ್ಬಳ್ಳಿ:ಕಣ್ಣೂರುನಿಂದ ಆಗಮಿಸಿದ್ದ ಇಂಡಿಗೋ ವಿಮಾನ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಟೈರ್ ಸ್ಫೋಟ ಗೊಂಡ ಘಟನೆ, ಸೋಮವಾರ ರಾತ್ರಿ8:30ರ ಸುಮಾರಿಗೆ ನಡೆದಿದೆ, ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ.
15 ಪ್ರಯಾಣಿಕರನ್ನು ಹೊತ್ತುಕೊಂಡು ಬಂದಿದ್ದ ವಿಮಾನವನ್ನು, ಪೈಲಟ್ ಮೊದಲು ರನ್ ವೇ ದಲ್ಲಿ ಇಳಿಸಲು ಪ್ರಯತ್ನಿಸಿದ್ದಾನೆ. ಆಗದಿಂದಾಗ ಎರಡನೇ ಬಾರಿ ಇಳಿಸಲು ಯತ್ನಿಸಿದಾಗ ಟಾಯರ್ ಬ್ಲಾಸ್ಟ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಕಣ್ಣೂರಿನಿಂದ ಆಗಮಿಸಿದ್ದ ವಿಮಾನ ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಿತ್ತು. 26 ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸುವವರಿದ್ದರು. ವಿಮಾನ ಹಾರಾಟ ರದ್ದಾಗಿದ್ದರಿಂದ ಕಂಪನಿಯವರು ಅವರಿಗೆಲ್ಲ ಪರ್ಯಾಯ ವ್ಯವಸ್ಥೆ ಮೂಲಕ ಬೆಂಗಳೂರಿಗೆ ಕಳುಹಿಸಿದರು ಎಂದು ಮೂಲಗಳು ತಿಳಿಸಿವೆ.
