ಹುಬ್ಬಳ್ಳಿ: ನಗರದ ಕುಂದಗೋಳ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ
ರೈತರ ಕೃಷಿ ಚಟುವಟಿಕೆಯಲ್ಲಿ ಆರ್ಥಿಕತೆಯ ಸಬಲಿಕರಣದ ಸದುದ್ದೇಶದೊಂದಿಗೆ ರೈತಮಿತ್ರ ಸೋಶಿಯಲ್ ಟ್ರಸ್ಟ್ ಕಛೇರಿಯ ಅಂಗ ಸಂಸ್ಥೆಯಾದ ನ್ಯಾಟನ್ ಟೆಕ್ನಾಲಜಿ ಪೈವೆಟ್ ಲಿಮಿಟೆಡ್ ಕಂಪನಿ ಲೋಕಾರ್ಪಣೆ ಮಾಡಲಾಯಿತು.
ಪರಮಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮೀಜಿಗಳು ರುದ್ರಾಕ್ಷಿ ಮಠ ಅವರ ದಿವ್ಯ ಸಾನಿದ್ಯದಲ್ಲಿ ನೇರವೆರಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀಗಳು ರೈತರು ದೇಶಕ್ಕೆ ಅನ್ನ ಹಾಕುವ ಮಹತ್ ಕಾರ್ಯ ಮಾಡುತಿದ್ದ ಅಂತಹ ಅನ್ನದಾತರ ಶ್ರಯೋಬದ್ಧರಿಗೆ ರೈತಮಿತ್ರ ಸೋಶಿಯಲ್ ಟ್ರಸ್ಟ್ ಕಛೇರಿಯ ಅಂಗ ಸೌoಸ್ಥೆಯಾದ ನ್ಯಾಟನ್ ಟೆಕ್ನಾಲಜಿ ಪೈವೆಟ್ ಲಿಮಿಟೆಡ್ ಕಂಪನಿ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ರೈತಮಿತ್ರ ಸೋಶಿಯಲ್ ಟ್ರಸ್ಟ್ ನ ಅಧ್ಯಕ್ಷರಾದ ವೀರೇಶ ಇಂಗಳಹಳ್ಳಿ, ನಿರ್ದೇಶಕರಗಳಾದ ನಾಗರಾಜ ಸಗರದ, ಮುದಿಯಪ್ಪ
ನಾಗರಡ್ಡಿ, ಸಿದ್ದಲಿಂಗಯ್ಯಾ ಭಾಗಲಕೋಟಮಠ, ಬಸವರಾಜ ಖಾನಾಪುರ್, ಜಯದೇವ. ಕೋಟಿ
ಟ್ರಸ್ಟ್ ನ ಹಿತೈಷಿಗಳಾದ
ಮೃತ್ಯoಜಯ ಹಿರೇಮಠ, ಮೃತ್ಯoಜಯ.ಸಿ.ಕೆ. ಅನೀಲ್ ಕುಮಾರ ಕುಲರ್ಗೇರಿ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.