ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಅವರ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಜಗದೀಶ್ ಶೆಟ್ಟರ್ ಹುಟ್ಟು ಹಬ್ಬದ ಅಂಗವಾಗಿ ಶುಭಾಶಯ ಕೋರಿದರು.
ನಗರದ ಕೇಶ್ವಾಪುರದಲ್ಲಿನ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ
ರಮೇಶ್ ಜಾರಕಿಹೊಳಿ ಅವರು
ಜಗದೀಶ್ ಶೆಟ್ಟರ್ ಅವರಿಗೆ ದೇವರು ಆಯೋರ ಆರೋಗ್ಯ ದಯ ಪಾಲಿಸಲಿ ಎಂದು ಶುಭ ಕಾಮನೆ ತಿಳಿಸಿದರು. ಈ ಸಂದರ್ಭದಲ್ಲಿ
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಿವು ಪಾಟೀಲ, ಬಿಲ್ಡರ್ ಸತೀಸ್ ಶೆಠ್ ಉರ್ಫ್ ಭಾಬು ಸಾಥ್ ನೀಡಿದರು.
*ಗೌಪ್ಯ ಚರ್ಚೆ* ಸುಮಾರು ಒಂದೂವರೆ ಗಂಟೆ ಕಾಲ ಉಭಯ ನಾಯಕರು ಗೌಪ್ಯ ಮಾತುಕತೆ ನಡೆಸಿದರು ಎನ್ನಲಾಗಿದೆ. ಪ್ರಮುಖವಾಗಿ ನೆನೆಗುದಿಗೆ ಬಿದ್ದ ಸಚಿವ ಸಂಪುಟ ವಿಸ್ತರಣೆ, ಪ್ರಚಲಿತ ರಾಜಕೀಯ ವಿದ್ಯಾಮಾನ ಕುರಿತು ಚರ್ಚೆ ಹಾಗೂ ಇತರ ವಿಷಯಗಳ ಕುರಿತು ಸಹ ಮಾತುಕತೆ ನಡೆಸಿದರು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
![](https://karnatakajunction.com/wp-content/uploads/2022/12/IMG-20221217-WA0057-660x330.jpg)