ಧಾರವಾಡ: ವಿಧಾನ ಪರಿಷತ್ ಸಭಾಪತಿ ಸ್ಥಾನದ ಅಭ್ಯರ್ಥಿ ವಿಚಾರವಾಗಿ ಭಾರತೀಯ ಜನತಾ ಪಕ್ಷದ ನಾಯಕ ರವಿಕುಮಾರ್ ನನಗೆ ಪೋನ್ ಕರೆ ಮಾಡಿದ್ದು ತಾವೇ ಅಭ್ಯರ್ಥಿ ಎಂದು ಹೇಳಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ, ವಿಧಾನ ಪರಿಷತ್ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು
ಸುದ್ದಿಗಾರರು ವಿಧಾನ ಪರಿಷತ್
ಸಭಾಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.
ನೀವು ಅಭ್ಯರ್ಥಿಗಳಾಗಿದ್ದೀರಿ ಎಂದು ಹೇಳಿದ್ದು ನೋಡೋಣ ಎಂದ ಅವರು ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು. ಇನ್ನು
ಅಧಿಕೃತವಾಗಿ ಇವತ್ತು ಅನೌನ್ಸ್ ಮಾಡುತ್ತೇವೆ ಸಹ ಎಂದಿದ್ದಾರೆ ಎಂದರು.
*ಧರಣಿ ಮಾಡುವುದು ಬೇಡ*
ನಾನು ಪ್ರತಿ ಬಾರಿಯೂ ನಾನು ಹೇಳುತ್ತೇನೆ ಬೆಳಗಾವಿಯಲ್ಲಿ ಅಧಿವೇಶನ ಆದಾಗ ನಾನು ಸಾಕಷ್ಟು ಬಾರಿ ಹೇಳಿದ್ದೇನೆ ಅನಗತ್ಯವಾಗಿ
ರಣಿ ಮಾಡುವುದು ಬೇಡ ಅಂತಾ ಕಳೆದ ಬಾರಿ ನಾನು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ಎರಡು ದಿನ ಅದಕ್ಕೇ ಮೀಸಲಿಟ್ಟಿದ್ದೆ ಆದ್ದರಿಂದ ಉತ್ತರ ಕರ್ನಾಟಕದ ಸಮಸ್ಯೆಗೆ ಪ್ರತಿಫಲ ಬೇಕು ಇದು ಅದನ್ನೇ ಹೇಳುವುದು ಅಲ್ಲಾ
ಸಮಗ್ರ ಕರ್ನಾಟಕ ನಮ್ಮದು ಬೇರೆ ಮಾತಿಲ್ಲ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ, ಸದಸ್ಯರು ಮುಂದಾಗಬೇಕು ಯಾವುದೇ ರೀತಿಯ ಹಿಂದೆ ಮುಂದೆ ನೀಡಬಾರದು ಎಂದರು. ಬರುವ ಡಿಸೆಂಬರ್ ದಿನದಲ್ಲಿ 19 ರಿಂದ 30 ರ ವರೆಗೆ ನಡೆಯುವ ಸದನದಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
*ಮೀಸಲಾತಿಗೆ ಹೋರಾಟ ಮಾಡುವುದು ಅವರ ಹಕ್ಕು*
ವಿವಿಧ ಜಾತಿ ಧರ್ಮಗಳಿಗೆ
ಮೀಸಲಾತಿ ವಿಚಾರ ಕುರಿತು ಮಾತನಾಡಿದ ಅವರು,
ನಮ್ಮ ದೇಶ ಜ್ಯಾತ್ಯಾತೀತ ರಾಷ್ಟ್ರ. ಮೀಸಲಾತಿಗೆ ಹೋರಾಟ ಮಾಡುವುದು ಅವರ ಹಕ್ಕು
ಅವರು ಮಾಡುವ ಹೋರಾಟ ಶಾಂತಿಯುತವಾಗಿ ನಡೆಯಲಿ ಎಂಬುದಷ್ಟೇ ನಮ್ಮ ಉದ್ದೇಶ ಎಂದರು.
ಭಾರತೀಯ ಜನತಾ ಪಕ್ಷದ ನಾಯಕರು, ಕಾರ್ಯಕರ್ತರಿದ್ದರು.
Check Also
ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …