Breaking News

ಶಾಲೆಯ ಮುಖಾಂತರ ಕರ್ತವ್ಯ ನಿರ್ವಹಣೆ ಬೇಡಾ- ಕರಾಪ್ರಾಶಾಶಿಸಂಘದ ಗೌರವ ಅಧ್ಯಕ್ಷ ಎಲ್ .ಐ. ಲಕ್ಕಮ್ಮನವರ ಆಗ್ರಹ

Spread the love


ಹುಬ್ಬಳ್ಳಿ; ಕೋವೀಡ್ ಹಾವಳಿ ಸಂದರ್ಭದಲ್ಲಿ ಶಿಕ್ಷಕರು ಆತಂಕದಲ್ಲಿದ್ದು ಇನ್ನಷ್ಟು ದಿನಗಳ ಕಾಲ ಮನೆಯಿಂದಲೇ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂದು
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಎಲ್ ಐ ಲಕ್ಕಮ್ಮನವರ ಆಗ್ರಹಿಸಿದರು..
ಮಂಗಳವಾರ ನಗರದ ಮನೋಜ್ ಪಾರ್ಕ್ ಬಳಿ ಮಾಧ್ಯಮ ಪ್ರತಿ‌ನಿಧಿಗಳ ಜೊತೆಗೆ ಮಾತನಾಡಿದ ಅವರು,
ಸಾರಿಗೆ ಆರಂಭವಾಗದ ಇಂತಹ ‌ಸಂದರ್ಭದಲ್ಲಿ ಶಿಕ್ಷಕರು ಶಾಲೆಗಳಿಗೆ ತೆರಳಲು ಅನಾನುಕೂಲ ಇದೆ ಇನ್ನಷ್ಟು ದಿನ ಶಿಕ್ಷಕರಿಗೆ ಮನೆಯ ಮುಖಾಂತರವೇ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು.
ಸಾಕಾಷ್ಟು ಶಿಕ್ಷಕರಿಗೆ ವ್ಯಾಕ್ಸೀನ್ ಹಾಕಿಲ್ಲ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೋವಿದ ಪಾಸಿಟಿವ್ ಪ್ರಕರಣಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಸಂದರ್ಭದಲ್ಲಿ ಶಾಲೆ ಆರಂಭ ಮಾಡಿದರೇ ತೀವ್ರ ಸ್ವರೂಪದ ತೊಂದರೆ ಆಗುತ್ತದೆ. ಕೋವಿಡ್ -19 ಎರಡನೇ ಅಲೆಯ ಪ್ರಭಾವದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಹಾಗೂ ಕೆಲವೆಡೆ ಸೆಮಿ ಲಾಕ್ ಡೌನ್ ಇದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನಾಳೆಯಿಂದಲೇ ಶಿಕ್ಷಕರು ಶಾಲೆಗೆ ಹಾಜರಾಗಿ ಶೈಕ್ಷಣಿಕ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿದ ಸುತ್ತೋಲೆ‌ ವಾಪಾಸ್ ‌ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.


Spread the love

About gcsteam

    Check Also

    25 ಲಕ್ಷ ರೂ.‌ಮೌಲ್ಯದ ಅಕ್ರಮ ಸ್ಪಿರಿಟ್ ವಶ

    Spread the loveಹುಬ್ಬಳ್ಳಿ : ಸಮೀಪದ ಕಲಘಟಗಿ ತಾಲೂಕಿನ ದೇವಿಕೊಪ್ಪ ಬಳಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ್ ವಶಕ್ಕೆ ಪಡೆದ …

    Leave a Reply