ಹುಬ್ಬಳ್ಳಿ : ಭಾರತದ ಪ್ರಮುಖ ಚಿನ್ನಾಭರಣಗಳ ತಯಾರಕ ಹಾಗೂ ಮಾರಾಟಗಾರರಾದ ಜೋಯಾಲುಕ್ಕಾಸ್‌ನ ಇಲ್ಲಿನ ನವೀಕೃತ ಶೋರೂಮ್ ನ್ನು ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರ ಈರೇಶ ಅಂಚಟಗೇರಿ ಅವರು ಜೋಯಾಅಲೂಕ್ಕಾಸ ಮಹಾನಗರದಲ್ಲಿ ದಶಕಗಳಿಗಿಂತ ಹಚ್ಚಿನ ಕಾಲದಿಂದ ಉತ್ತಮ ಸೇವೆ ನೀಡುತ್ತಾ ಬಂದಿದೆ, ಈ ಶಾಖೆಯಲ್ಲಿ ಗುಣಮಟ್ಟದ ವಜ್ರ, ಬಂಗಾರ ಹಾಗೂ ಬೆಳ್ಳಿಯ ಆಭರನಗಳು ದೊರೆಯಲಿದ್ದು, ಸಾಕಷ್ಟು ಗಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ವಿಶ್ವದರ್ಜೆಯ ಮಟ್ಟದಲ್ಲಿ ವಿನ್ಯಾಸಗೊಳಿಸಲಾದ ಇಲ್ಲಿನ ಸ್ಟೇಷನ್ ರಸ್ತೆಯಲ್ಲಿನ ಈ ಅತ್ಯಾಧುನಿಕ ಸೋರೂಮ್ ಪ್ರಿಮಿಯಂ ಸೌಲಭ್ಯ ಮತ್ತು ಸೌಕರ್ಯಗಳನ್ನು ಒಳಗೊಂಡಿದ್ದು ಆಭರಣ ಪಿಯರಿಗೆ ಆನಂದದಾಯಕ ಮತ್ತು ಶ್ರೀಮಂತ ಶಾಪಿಂಗ್ ಅನುಭವ ನೀಡಲಿದೆ.
ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ವಿಶಾಲ ಜಾಗದಲ್ಲಿ ಪಾರ್ಕಿಂಗ್ ಹಾಗೂ ಸಾಕಷ್ಟು ಶಾಪಿಂಗ್ ಸ್ಥಳಾವಕಾಶವನ್ನು ಒಳಗೊಂಡ ಈ ಮಳಿಗೆ ಅತ್ಯಾಧುನಿಕತೆಯನ್ನು ಹೊತ್ತು ನಿಂತಿದೆ. ಗ್ರಾಹಕರು ಈ ಉದ್ಘಾಟನೆಯ ಲಾಭ ಪಡೆಯುವಂತಾಗಲು ಪ್ರತಿ ಖರೀದಿಯ ಮೇಲೆ ಖಚಿತ ಉಡುಗರೆಗಳ ಲಾಭ ಪಡೆಯಬಹುದಾಗಿದೆ.
ಶಾಖೆಯ ಸಹಾಯಕ ವ್ಯವಸ್ಥಾಪಕ ಗುರುರಾಜ್ ಮಾತನಾಡಿ, ಕಳೆದ ೧೧ ವರ್ಷಗಳಿಂದ ಈ ಭಾಗದ ಗ್ರಾಹಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಇದಕ್ಕಾಗಿ ನಾವು ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆ. ಇದೀಗ ಶೋರೂಂನ್ನು ಈಗಿನ ಪೀಳಿಗೆಗೆ ತಕ್ಕಂತೆ ರೂಪಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಸಿಪಿ(ದಕ್ಷಿಣ) ಕೆಆರ್ ಪಾಟೀಲ, ಮಾಜಿ ಮಹಾಪೌರರಾದ ಪೂರ್ಣಾ ಪಾಟೀಲ, ಜೋಯಾಲುಕ್ಕಾಸ್ ರಿಟೇಲ್ ಮ್ಯಾನೇಜರ್ ರಾಜೇಶ ಕೃಷ್ಣನ್,ಪ್ರಾದೇಶಿಕ ವ್ಯವಸ್ಥಾಪಕ ಜಿನೇಶ್, ಶಾಖಾ ವ್ಯವಸ್ಥಾಪಕ ಚಂದ್ರಶೇಖರ್, ಮಾರ್ಕೆಟಿಂಗ್‌ನ ಸಜು ಪೌಲ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಹಕರ ಪ್ರತಿ ಅಗತ್ಯಗಳನು ಪೂರೈಸುವ ಸದಾವಕಾಸ ಕಲ್ಲಿಸುವ ಗುvರಿ ಹೊಂದಿದ್ದೇವೆ ಎಂದು ಜೋಯಾಲುಕ್ಕಾಸ್ ಸಮೂಹದ ವ್ವಸ್ಥಾಪಕ ನಿದೇಶಕರಾದ ಜಾಯ್ ಅಲೂಕ್ಕಾಸ್ ತಿಳಿಸಿದ್ದಾರೆ,
ಈ ಮಳಿಗೆಯಲ್ಲಿ ಅತ್ಯತ್ತಮ ಎನ್ನಲಾದ ಸಹಸ್ರಾರು ಬಗೆಯ ಎಲ್ಲ ಆಭರಣಗಳ ವ್ಯಾಪಕ ಶ್ರೇಣಿಯನ್ನು ಕಾಣಬಹುದಾಗಿದೆ.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …