Breaking News

ನಮ್ಮ ಸಂವಿಧಾನವೇ ವಿಶ್ವಗುರು ಎಂದು ಗುರುತಿಸಿಕೊಳ್ಳಲು ಮೂಲ ಕಾರಣ- ಕಾಂಗ್ರೆಸ್ ವಕ್ತಾರ ಗಂಗಾಧರ ದೊಡವಾಡ

Spread the love

ಹುಬ್ಬಳ್ಳಿ: ಭಾರತವು ಬುದ್ಧ ಬಸವಾದಿ ಶರಣರ, ಜಾತ್ಯಾತೀತೆ, ರಾಜಾರಾಮ್ ಮೋಹನ್ ರಾಯ್ ಶಾಹು ಮಹಾರಾಜರಂತಹ ಮಹಿಳಾ ಚಿಂತಕರಿಂದ ಪ್ರೇರಣೆ ಪಡೆದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಂದ ರಚಿಸಲ್ಪಟ್ಟ ಸಂವಿಧಾನವು ಜಗತ್ತಿನಲ್ಲಿಯೇ ಅನುಕರಣೀಸುವ ಆಧರಣೀಯ ಗ್ರಂಥವಾಗಿದೆ 250 ವರ್ಷಕ್ಕೂ ಹೆಚ್ಚುಕಾಲ ಭಾರತದಲ್ಲಿ ಆಡಳಿತ ನಡೆಸಿದ ಬ್ರಿಟಿಷರು ಜನಜೀವನಕ್ಕಾಗಿ ಒಂದು ಮಾನದಂಡ ರೂಪುರೇಷೆಯನ್ನು ಸಿದ್ಧಪಡಿಸಿರಲಿಲ್ಲ ಮನಬಂದಂತೆ ಮಸೂದೆಗಳನ್ನು ತಯಾರಿಸಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರು ಜನರ ಶಾಪವೇ ಅವರಿಗೆ ಎದುರಾಳಿ ಶಕ್ತಿಯಾಗಿ 15 ಆಗಸ್ಟ್ 1947 ರಂದು ಭಾರತದಿಂದ ಅವರು ಕಾಲಕೀಳಲು ಕಾರಣವಾಯಿತು ಬದಲಾದ ಭಾರತದ ಚಿತ್ರಣವನ್ನು ಅಭಿವೃದ್ಧಿಪಡಿಸಿದ ಕೀರ್ತಿ ನಮ್ಮ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಹುಬ್ಬಳ್ಳಿಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಗಂಗಾಧರ ದೊಡ್ಡವಾಡ ಹೇಳಿದರು . ಉಣಕಲ್ ಸಾಯಿ ನಗರದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನಿವೃತ್ತ ನೌಕರರ ಚರ್ಚಾಕೂಟದಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ ಸರ್ವಶ್ರೀ ಹನುಮಂತಪ್ಪ ಭೋವಿ ಡಾ ಎಂ ಎಸ್ ಹುಲ್ಲೋಳಿ ಮೌಲಾಸಾಬ ಅಗಸಿಮನಿ ಪ್ರಕಾಶ ಕಬಾಡಗಿ ವೀರಯ್ಯ ಹಿರೇಮಠ ಶ್ರೀಮತಿ ನಜಬೂನ್ ಮುಲ್ಲಾ ಜರೀನಾ ನಧಾಪ ದಿವಾಕರ ದಾಟನಾಳ ಸಿದ್ದೇಶ್ವರ ಜಯರಾಂ ಸಹದೇವ ಬಾರಕೇರ ಮುಂತಾದವರು ಭಾಗವಹಿಸಿದ್ದರು ಉದ್ದಿಮೆದಾರ ರಾಜು ಕೊಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು ವೀರಭದ್ರ ಆಲದಕಟ್ಟಿ ವಂದಿಸಿದರು.


Spread the love

About Karnataka Junction

    Check Also

    ಉಸ್ತುವಾರಿಯನ್ನಾಗಿ ಸದಾನಂದ ಡಂಗನವರ ನೇಮಕ

    Spread the loveಹುಬ್ಬಳ್ಳಿ: ವಿಧಾನ ಪರಿಷತ್ತಿನ ಮೂರು ಪದವೀಧರರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಬರುವ ಜೂನ್ 3 ರಂದು …

    Leave a Reply

    error: Content is protected !!