Breaking News

ಸಕಲ ಕಾರ್ಯಕ್ಕೂ ಗುರುವಿನ ಮಾರ್ಗದರ್ಶನ ಅವಶ್ಯ

Spread the love

ಹುಬ್ಬಳ್ಳಿ: ಗುರುವಿನ ಮಾರ್ಗದರ್ಶನದಿಂದ ಮಾತ್ರ ಸಕಲ ಕಾರ್ಯಗಳು ಯಶಸ್ಸು ಕಾಣಲು ಸಾಧ್ಯ ಎಂದು ತಾವರಗೇರಿ ಸಿದ್ಧಾರೂಢ ಮಠದ ನಿರ್ಗುಣಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ತಾವರಗೇರಿ ಗ್ರಾಮದ ಸಿದ್ಧಾರೂಢ ಮಠದ ಸಭಾಭವನದಲ್ಲಿ ಕಲಘಟಗಿ
ಶ್ರೀ ಸಿದ್ಧಾರೂಢ ಸತ್ಸಂಗ ಬಳಗದ ವತಿಯಿಂದ ಭಾನುರಾತ್ರಿ ನಡೆದ ಬೀದರನ ಚಿದಾಂಬರ ಆಶ್ರಮದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ೭೮ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸನ್ಮಾರ್ಗದತ್ತ ಸಾಗಲು ಗುರು ತೋರುವ ದಾರಿಯನ್ನು ನಾವೆಲ್ಲ ಅನುಸರಿಸಬೇಕು. ಅಧುನಿಕತೆ ಮಧ್ಯೆ ಮಾನಸಿಕ ನೆಮ್ಮದಿ ಹದೆಗೆಡುತ್ತಿದೆ. ಪುರಾಣ ಹಾಗೂ ಪುಣ ಕಥೆಗಳನ್ನು ಆಲಿಸುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬೇಕು ಎಂದರು.
ಬೀದರ ಚಿದಂಬರಾಶ್ರಮದ ಡಾ.ಶಿವಕುಮಾರ ಸ್ವಾಮೀಜಿಗಳು ಅಗಾದವಾದ ಜ್ಞಾನ ಸಂಪಾದನೆ ಮಾಡಿದ್ದಾರೆ. ಕಾಶಿ, ಮುಂಬೈನಲ್ಲಿ ಜ್ಞಾನರ್ಜನೆ ಮಾಡಿರುವ ಶಿವಕುಮಾರ ಸ್ವಾಮೀಜಿಗಳು ಭಕ್ತರ ಜ್ಞಾನದ ಹಸಿವು ಇಂಗಿಸಿದ್ದಾರೆ. ಇಂತಹ ಗುರು ತೋರುವ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದರು.
ಬೀದರನ ಬಸವನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶತಾಯುಷಿ ಕಲ್ಲಮ್ಮ ಮಲ್ಲಪ್ಪ ತಿಪ್ಪಣ್ಣವರ ಅಧ್ಯಕ್ಷ ಸ್ಥಾನ ವಹಿಸಿದ್ದರು. ಚಿಂಚಲಿಯ ವೈ.ಎಂ.ಬಾಲರಡ್ಡಿ, ಕೆಎಂಸಿಯ ಲ್ಯಾಬ್ ಟೆಕ್ನಿಷಿಯನ್ ಸಿದ್ದನಗೌಡ.ಕೆ.ಜಿ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಗುರುಸಂಗಪ್ಪ ಮುತ್ತಗಿ, ರಾಮಪ್ಪ ಮುಕ್ಕಲ, ಗುರಯ್ಯ ಹಿರೇಮಠ, ಪುಟ್ಟಪ್ಪ ಗ್ಯಾನಪ್ಪನವರ, ಸಂಗನಗೌಡ ಪಾಟೀಲ, ಶೇಖಯ್ಯ ನಡುವಿನಮನಿ, ಈರಯ್ಯ ಕುರಡಿಕೇರಿ, ಬಸಪ್ಪ ಇಂದೂರ ಬಸನಗೌಡ ಪಾಗದ, ಬಸಪ್ಪ ಟವಳಿ, ಉಳವಪ್ಪ ಗಳಗಿ, ಕಲ್ಲಪ್ಪ ಹರಿಜನ, ಮಣ್ಣಪ್ಪ ಕಾಮಧೇನು, ಚಂದ್ರಹಾಸ ಜಾಯನಗೌಡ್ರ, ಶಂಕರಗೌಡ ಪಾಟೀಲ, ಗುರುನಾಥಗೌಡ್ರ ಬಸನಗೌಡ್ರ, ತಮ್ಮಣ್ಣ ಕೆಲಗೇರಿ, ಶಂಕ್ರಯ್ಯ ಪೂಜಾರ, ಬಸಪ್ಪ ಸಾದರ, ಭರಮಪ್ಪ ಹುಲ್ಲಂಬಿ ಇದ್ದರು.
ಶಿಕ್ಷಕ ಪ್ರಭು ಗ್ಯಾನಪ್ಪನವರ ನಿರೂಪಿಸಿದರು. ಕಲಘಟಗಿ ಶ್ರೀ ಸಿದ್ಧಾರೂಢ ಸತ್ಸಂಗ ಬಳಗದ ಅಧ್ಯಕ್ಷ ಡಾ.ಎಸ್.ಬಿ.ಹುಲಿಕಟ್ಟಿ ವಂದಿಸಿದರು.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!