ಹುಬ್ಬಳ್ಳಿ: ಬೆಂಗಳೂರಿನ ಯು.ಎಸ್. ಕಮ್ಯುನಿಕೇಷನ್ಸ್ ವತಿಯಿಂದ, ಬ್ಯಾಂಕ್ ಆಫ್ ಬರೋಡಾ ಸಹ ಪ್ರಾಯೋಜಕತ್ವದಲ್ಲಿ ನಗರದ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ‘ಬಿಲ್ಡ್ ಟೆಕ್-2022’ ಬೃಹತ್ ವಸ್ತು ಪ್ರದರ್ಶನಕ್ಕೆ ಹುಬ್ಬಳ್ಳಿ ಧಾರವಾಡ
ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಚಾಲನೆ ನೀಡಿದರು.
ಗುಣಮಟ್ಟ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನ ಹಾಗೂ ಕಟ್ಟಡ ಸಾಮಗ್ರಿಗಳ ಬಗ್ಗೆ ಒಂದೇ ಸೂರಿನಡಿ ಹೆಚ್ಚಿನ ಮಾಹಿತಿ ನೀಡುವುದು ಪ್ರದರ್ಶನದ ಪ್ರಮುಖ ಉದ್ದೇಶ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ವಿವಿಧ ಹೊಸ ಕಂಪನಿಗಳ ಆಕರ್ಷಕ ಮಳಿಗೆಗಳು ಇಲ್ಲಿದ್ದು, ಸಾರ್ವಜನಿಕರಿಗೆ ಭರಪೂರ ಮಾಹಿತಿ ಸಿಗಲಿದೆ’ ಎಂದು ಆಯೋಜಕರಾದ ಕಲ್ಮೇಶ ತೋಟದ ಹಾಗೂ ಉಮಾಪತಿ ಎಸ್.ಎಂ. ತಿಳಿಸಿದರು.
ಎಸ್.ಎಸ್. ಶೆಟ್ಟರ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್,
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ ಸೆಂಟರ್ ಅಧ್ಯಕ್ಷ ಆನಂದ ಪಾಂಡುರಂಗಿ, ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಮುಖ್ಯಸ್ಥ ಪ್ರದೀಪ ದೇಸಾಯಿ, ಕ್ರೆಡಾಯ್ ಅಧ್ಯಕ್ಷ ಸಾಜೀದ ಫಾರೇಶ, ಲಿಂಟೆಲ್ ಬಿಲ್ಡಿಂಗ್ ಸೂಲ್ಯೂಷನ್ಸ್‌ನ ಸಮರ್ಥ ನಾಡಿಗೇರ ಮತ್ತು ಸುಮಂತ ಹೆಗಡೆ, ನೀತಾ, ಮುಂತಾದವರಿದ್ದರು.
