ಬಾಗಲಕೋಟೆ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರ ನಡುವಿನ ಸಂಧಾನ ಸಭೆ ವಿಫಲವಾಗಿದ್ದು
ಬಾಗಲಕೋಟೆಯ ಜಿಲ್ಲಾಡಳಿತಭವನದಲ್ಲಿ ಮಂಗಳವಾರ ನಡೆದ ಸಂಧಾನ ಸಭೆ ನಡೆಸಲಾಗಿತ್ತು .
ಬಾಗಲಕೋಟೆ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ,ಸಚಿವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ನಡೆದ ಸಭೆಯ ನೇತೃತ್ವ ವಹಿಸಿದ್ದರು.
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಾಗು ಸಕ್ಕರೆ ಇಲಾಖೆ ನಿರ್ದೇಶಕ ಶಿವಾನಂದ ಕಲಕೇರಿ ಸೇರಿ ಅಧಿಕಾರಿಗಳು ಭಾಗಿಯಾಗಿ ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿದರು.
ಪ್ರತೀ ಕ್ವಿಂಟಾಲ್ ಕಬ್ಬಿಗೆ ₹2900 ಕೊಡುವಂತೆ ಕಬ್ಬು ಬೆಳೆಗಾರರಿಗೆ ಕೊಡಬೇಕು ಎಂದು ಮನವಿ ಮಾಡಿದರು. ಆದರೆ ಇದುವರೆಗೆಇದಕ್ಕೆ ಒಬ್ಬದ ಸಕ್ಕರೆ ಕಾರ್ಖಾನೆ ಕಾರ್ಖಾನೆ ಮಾಲೀಕರು ಕೊಡಲ್ಲ ಅಂತಾ ಸಚಿವರ ಎದುರೇ ಕಡ್ಡಿ ಮುರಿದ ಹಾಗೇ ಹೇಳಿದರು.
ಹೀಗಾಗಿ ವಿಫಲಗೊಂಡ ಸಂಧಾನದಿಂದ ರೈತರು ಹೊರ ಬಂದ ರಸ್ತೆ ತಡೆ ನಡೆಸಿ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇಂದು ಮುಧೋಳ ಬಂದ್ ಗೆ ಕಬ್ಬು ಬೆಳೆಗಾರರು ಕರೆ ನೀಡಿದ್ದು ಈಗ ಬಂದ್ ಸಹ ಇನ್ನೇನು ಕೇಲ ಹೊತ್ತಿನಲ್ಲಿ ಪ್ರತಿಭಟನೆ ನಡೆಯಲಿದೆ.
