ಹುಬ್ಬಳ್ಳಿ; ನಗರದ ಹಳೆ ಹುಬ್ಬಳ್ಳಿಯಲ್ಲಿನ ಭಾಪನಾ ನಗರದಲ್ಲಿನ ಆರೂಢ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಹುಬ್ಬಳ್ಳಿ ರೋಟರಿ ಕ್ಲಬ್ ಆಫ್ ಸೆಂಟಲ್ ವತಿಯಿಂದ ಆನಿ ಬ್ರೈಲ್ ಸ್ಮಾರ್ಟ್ ಕ್ಲಾಸ್ ಉಪಕರಣಗಳನ್ನ ವಿತರಣೆ ಮಾಡಲಾಯಿತು.
ರೋಟರಿ ಕ್ಲಬ್ ಆಪ್ ಬ್ರೇಕ್ ಫಾಸ್ಟ್ ಕೌಂಟಿ, ಪಿಎ,ಯುಎಸ್ ಮತ್ತು 57 ಇತರ ರೋಟರಿ ಕ್ಲಬ್ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿಕಟಪೂರ್ವ ಡಿಸ್ಟ್ರಿಕ್ಟ್ ಗೌರ್ನರ್ ರೋಟರಿನ್ ಗೌರಿಶ್ ದೋಂಡ ಹಾಗೂ ರೋಟರಿಯನ್ ಪ್ರತಿಮಾ ಮಾತನಾಡಿ ಇದೊಂದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇದು ಮೊದಲ ಕಾರ್ಯವಾಗಿದ್ದು ಅಂಧ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ಹಾಗೂ ರೋಟರಿಯನ್ ಸಂಜನಾ ಮಹೇಶ್ವರಿ ಮಾತನಾಡಿ, ಪ್ರಪ್ರಥಮವಾಗಿ ಹುಬ್ಬಳ್ಳಿಯ ಶ್ರೀ ಆರೂಢ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಈ ಆನಿ ಭ್ರೈಲ್ ಲಿಪಿಯನ್ನು ವಿತರಣೆ ಮಾಡಿದ್ದು ಎಲ್ಲ ರೋಟರಿಯನ್ ಹಾಗೂ ರೋಟರಿ ಕ್ಲಬ್ ಬ್ರೇಕ್ ಪಾಸ್ಟ್ ಕೌಂಟಿ,ಪಿಎ ಸೇರಿದಂತೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ರೋಟರಿ ಕ್ಲಬ್ ಆಪ್ ಹುಬ್ಬಳ್ಳಿ ಸೆಂಟ್ರಲ್ ಕಾರ್ಯದರ್ಶಿ ಅಂಜನಾ ಬಸನಗೌಡರ, ಹುಬ್ಬಳ್ಳಿ ಸೆಂಟ್ರಲ್ ರೋಟರಿಯನ್ ಅಧ್ಯಕ್ಷ ನೀಪ ಮೆಹತ,ಕಾರ್ಯದರ್ಶಿ ಡಾ.ನಾಗರೇಖ ಹೆಬಸೂರು, ರೋಟರಿ ಕ್ಲಬ್ ಹುಬ್ಬಳ್ಳಿ ಸೆಂಟರ್ ರೋಟರಿಯನ್ ಗಳು , ಆರೂಢ ಅಂಧ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯನಿ ಲಕ್ಷ್ಮಿ ಬದ್ದಿ ಮುಂತಾದವರು ಭಾಗವಹಿಸಿದ್ದರು.
Check Also
ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರಾಂಕ್: ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿ ಮಹತ್ವದ ಸಾಧನೆ
Spread the loveಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ. ಈ ಸಂಸ್ಥೆ ಒಂದಿಲ್ಲೊಂದು ರೀತಿಯಲ್ಲಿ ಸಾಧನೆ ಮಾಡುತ್ತ ಬಂದಿದೆ. …