Breaking News

ಕತಾರ್ ನಲ್ಲಿ ೬೭ ನೆ ಕನ್ನಡ ರಾಜ್ಯೋತ್ಸವದ ಆಚರಣೆ

Spread the love

ಕತಾರ್- ಕರ್ನಾಟಕ ಸಂಘ ಕತಾರ್, ೬೭ ನೆ ಕನ್ನಡ ರಾಜ್ಯೋತ್ಸವನ್ನು ೦೪ ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಆಚರಿಸಿತು. ದೋಹಾದ ಡಿ ಪಿ ಎಸ್ ಶಾಲೆಯ ೧೦೦೦ ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಬಾರಿಸು ಕನ್ನಡ ದಿಂಡಿಮವ ಗಾನ ಮತ್ತು ಸಂಘದ ಅಧ್ಯಕ್ಷರಾದ ಶ್ರೀ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾದ ಕಾರ್ಯಕ್ರಮವು ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ತುಳುಕೂಟ ಕತಾರ್, ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್, ಬಿಲ್ಲವಾಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ರಾಜ ಮನೆತನ, ದೇಶ ಪ್ರೇಮ ಹಾಗೂ ಅಪ್ಪು ಸ್ಮರಣಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಂತ್ಯಗೊಂಡಿತು.
ಸಭೆಯನ್ನು ಸ್ವಾಗತ ಮಾಡುತ್ತ ಮಹೇಶ್ ಗೌಡ ಅವರು ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಆನ್ಲೈನ್ ಗೆ ಸೀಮಿತವಾಗಿದ್ದ ಕಾರ್ಯಕ್ರಮಗಳು ಈ ವರ್ಷ ಎಲ್ಲರ ಸಮ್ಮುಖದಲ್ಲಿ ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿ, ಕತಾರ್ ನಲ್ಲಿ ಪ್ರಪಂಚದ ಅತಿ ಪ್ರತಿಷ್ಟಿತ ಪಂದ್ಯಾವಳಿ ಫಿಫಾ ನೆಡೆಯುತ್ತಿರುವ ಸಂದರ್ಭದಲ್ಲಿ ಸಂಘವು ರಾಜ್ಯೋತ್ಸವ ಆಚರಿಸಿರವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಟಿ ಎಸ್ ನಾಗಾಭರಣ, ಪತ್ರಕರ್ತ ರವಿ ಹೆಗ್ಡೆ, ನಿರ್ದೇಶಕರು ಅನೂಪ್ ಭಂಡಾರಿ, ಪ್ರಸಿದ್ದ ಮಿಮಿಕ್ರಿ ಕಲಾವಿದರುಯೋಗಿ ಗೌಡ, ಭಾರತ ರಾಯಭಾರಿ ಕಚೇರಿಯ ಪ್ರತಿನಿಧಿ ಶ್ರೀಮತಿ ಏಂಜೆಲಿನ ಪ್ರೇಮಲತ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಹಾಗೂ ಉಪಾಧ್ಯಕ್ಷರು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಪಾಲ್ಗೊಂಡಿದ್ದರು.
ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತ ಮೂಲಕ ಅತಿಥಿಗಳ ಸ್ವಾಗತ ಮಾಡಲಾಯಿತು, ಈ ಡೊಳ್ಳು ಕುಣಿತವನ್ನು ಶ್ರೀಮತಿ ಸುಮಾ ಮಹೇಶ್ ಗೌಡರವರು ಸಂಯೋಜಿಸಿದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ಗೌರವಾನ್ವಿತ ಅತಿಥಿಗಳು ಶ್ರೀ ನಾಗಾಭರಣ ಅವರಿಂದ ಕೂಡ ಮೆಚ್ಚುಗೆ ಪಡೆಯಿತು.
ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿ ಶ್ರೀಮತಿ ಏಂಜೆಲಿನ ಪ್ರೇಮಲತ ಅವರು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೆಡೆಸುತ್ತಾ ಬಂದಿರುವ ಕರ್ನಾಟಕ ಸಂಘ ಕತಾರ್ ನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿ, ಮುಂದಿನ ದಿನಗಳ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು. ಶ್ರೀ ಟಿ ಎಸ್ ನಾಗಾಭರಣ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂಘವು ನೆಡೆಸುತ್ತಿರುವ ಕನ್ನಡ ಶಾಲೆಯ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೆಡೆಸುತ್ತಿರುವ ಅಭಿಯಾನಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು. ಶ್ರೀ ರವಿ ಹೆಗ್ಡೆ ಅವರು ತಮ್ಮ ಭಾಷಣದಲ್ಲಿ ಸಂಘದ ಕಾರ್ಯಗಳಿಗೆ ಅವರ ಮಾಧ್ಯಮದಿಂದ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸುತ್ತಾ, ತಂತ್ರಜ್ಞಾನದ ಉಪಯೋಗದಿಂದ ಹೇಗೆ ಭಾಷಾ ಬೆಳೆವಣಿಗೆ ಸಾದ್ಯ ಎಂದು ತಿಳಿಸಿದರು.
ಯೋಗಿ ಗೌಡ ಅವರ ಚಿತ್ರ ನಟರು, ರಾಜಕೀಯ ವ್ಯಕ್ತಿಗಳು ಹಾಗೂ ಪತ್ರಿಕಾ ಮಾಧ್ಯಮದ ದಿಗ್ಗಜರ ಮಿಮಿಕ್ರಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.
ಸಂಘವು ಈ ವರ್ಷ ನಡೆಸಿದ ಅದ್ದೂರಿ ೬೭ ನೆ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ನಾಡಿನ ರಂಗಭೂಮಿ, ನಾಟಕ ಕ್ಷೇತ್ರ, ಕಲಾತ್ಮಕ ಹಾಗೂ ವಾಣಿಜ್ಯ ಚಲನಚಿತ್ರಗಳ ಹೆಸರಾಂತ ಕಲಾವಿದರು , ನಿರ್ಮಾಪಕರು , ನಿರ್ದೇಶಕರು , ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಅಸಂಖ್ಯಾತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಕನ್ನಡ ನಾಡು-ನುಡಿಗೆ ಕಟಿಬದ್ಧರಾಗಿರುವ, ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಅಭ್ಯುದಯಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಕನ್ನಡಿಗರ ಹೆಮ್ಮೆಯ, ಶ್ರೀ ಯುತ “ಟಿ.ಎಸ್. ನಾಗಾಭರಣ” ರವರನ್ನು “ಕತಾರ್ ಕನ್ನಡ ಸಮ್ಮಾನ್ ”
ಪ್ರಶಸ್ತಿ ಪ್ರದಾನ ಮಾಡಿ, ಗೌರವಾದರಗಳೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಘದ ಸದಸ್ಯರು ಶ್ರೀ ಅನೂಪ್ ಭಂಡಾರಿ ಹಾಗೂ ಶ್ರೀ ಟಿ ಎಸ್ ನಾಗಾಭರಣ ಅವರ ಹಾಡುಗಳ ನೃತ್ಯ ಪ್ರದರ್ಶನ ಮಾಡಿದರು. ಕನ್ನಡ ಉಳಿಸಿ ಬೆಳೆಸಿ ಎಂಬ ನೀತಿ ಕಥೆಯ ನಾಟಕ ಪ್ರದರ್ಶನ ಮಾಡಿದರು. ಸಂಘದ ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಸಂಜನಾ ಜೀವನ್ ಅವರು ಸಂಯೋಜಿಸಿದ ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತಿರುವ ಕನ್ನಡ ಚಿತ್ರ ಕಾಂತಾರದ ವರಾಹ ರೂಪಂ ನೃತ್ಯವು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಸುಶೀಲ ಸುನಿಲ್ ಅವರು ನೆರವೇರಿಸಿದರು.


Spread the love

About gcsteam

    Check Also

    ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ

    Spread the loveಹುಬ್ಬಳ್ಳಿ: 2023-24 ನೇ ಸಾಲಿನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ …

    Leave a Reply