https://youtu.be/Sz9SdWRgHts
ಹುಬ್ಬಳ್ಳಿ; ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿದ ದರ ಇಳಿಕೆ ಮಾಡಿ ಪೆಟ್ರೋಲ್, ಡಿಸೈಲ್ ನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದಲ್ಲಿ
ಪ್ರತಿಭಟನೆ ಮಾಡಲಾಯಿತು.
ದಿನದಿಂದ ದಿನಕ್ಕೆ ತೈಲ ಬೆಲೆ
ಹೆಚ್ಚಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ರೀತಿಯ ಕಡಿವಾಣಕ್ಕೆ ಮುಂದಾಗುತಿಲ್ಲ.
ಪೆಟ್ರೋಲ್, ಡೀಸೆಲ್, ಜೆಟ್ ಇಂಧನ (ಎಟಿಎಫ್) ಹಾಗೂ ನೈಸರ್ಗಿಕ ಅನಿಲಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರುವ ಪ್ರಸ್ತಾವನೆ ಜಾರಿಯಾಗಿಲ್ಲ.
2017 ರಲ್ಲಿ ಜಿಎಸ್ ಟಿ ಜಾರಿಗೆ ತಂದಾಗ, 5 ತೈಲಗಳನ್ನು ಜಿಎಸ್ ಟಿ ವ್ಯಾಪ್ತಿಯಿಂದ ಹೊರಗೆ ಇಟ್ಟು, ರಾಜ್ಯ, ಕೇಂದ್ರ ಸರ್ಕಾರಗಳ ಆದಾಯಕ್ಕೆ ಇವುಗಳಿಂದ ದಾರಿ ಮಾಡಿಕೊಡಲಾಗಿತ್ತುಎಂದು ಆರೋಪಿಸಲಾಯಿತು.
ತೈಲವನ್ನು ಜಿಎಸ್ ಟಿ ವ್ಯಾಪ್ತಿಗೆ ತರದೇ ಇರುವುದರಿಂದ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಧಿಸಲು ಅವಕಾಶವಿದ್ದರೆ, ವ್ಯಾಟ್ ನ್ನು(ಮೌಲ್ಯ ವರ್ಧಿತ ತೆರಿಗೆ) ವಿಧಿಸುವುದಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. ಈ ತೆರಿಗೆಗಳಿಂದಾಗಿ ತೈಲ ದರ ಗಗನಕ್ಕೇರುತ್ತಿದೆ ಈ ಕುರಿತು ರಾಷ್ಟ್ರಪತಿಗಳಿಗೆ ತಹಸೀಲ್ದಾರ ಮೂಲಕ ಮನವಿ ರವಾನಿಸಲಾಯಿತು.
ಒಂದೆಡೆ ರಾಜ್ಯ, ಕೇಂದ್ರ ಸರ್ಕಾರಗಳು ಹಾಕುತ್ತಿರುವ ತೆರಿಗಳನ್ನು ಇಳಿಕೆ ಮಾಡುತ್ತಿಲ್ಲ ಮತ್ತೊಂದೆಡೆ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ತತ್ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ದರಗಳು ಸಾರ್ವಕಾಲಿಕ ದಾಖಲೆಯ ಏರಿಕೆ ಕಾಣುತ್ತಿದ್ದು, ಇವುಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಮಾಡಲಾಯಿತು. ಧಾರವಾಡ ಜಿಲ್ಲಾ ಮುಖಂಡರಾದ ರೇವಣಸಿದ್ದಪ್ಪ ಹೊಸಮನಿ, ದೇಸಾಯಿ ,ನಿಸಾರ್ ಅಹಮದ್ ಮುಲ್ಲಾ, ಅಬ್ಜಲ್ ಕರಮಡಿ ಜಾಫರ ಮುಜಾಹಿದ,ಯಾಸೀನ ಮೇಘಡೆ,ಮದರಾಸಾಬ ಮಕಾಂದಾರ ಸಮೀರ ಶಿರೂರ,ಸಮೀರ ದೊಡ್ಡಮನಿ ಹಾಗೂ ಪಕ್ಷದ ಪದಾಧಿಕಾರಿಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
Check Also
ಒಂದು ದೇಶ ಒಂದು ಚುನಾವಣೆ ಇದು ಪ್ರಜಾಪ್ರಭುತ್ವಕ್ಕೆ ಕಳಂಕ-ಪರಿಶಿಷ್ಟ ಜಾತಿ ಮಾಧ್ಯಮ ವಕ್ತಾರ ಬಸವರಾಜ ಮಾದರ
Spread the loveಹುಬ್ಬಳ್ಳಿ ಡಿ.13: ಒಂದು ದೇಶ ಒಂದು ಚುನಾವಣೆ ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ಧಾರವಾಡ ಜಿಲ್ಲೆಯ ಕಾಂಗ್ರೆಸ್ …