ಹುಬ್ಬಳ್ಳಿ; ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.17.09 ರಷ್ಟಿದ್ದು, ಅದು ಶೇ.05 ಕ್ಕೆ ಬಂದರೆ ರಾಜ್ಯವನ್ನು ಅನಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿಯ ಸವಾಯ್ ಗಂಧರ್ವ ಹಾಲ್‌ನಲ್ಲಿ ಇಂದು ಮುಖ್ಯಮಂತ್ರಿಯವರಾದ ಬಿ.ಎಸ್.ಯಡಿಯೂರಪ್ಪ ಅವರು ಧಾರವಾಡ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಪರಿಶೀಲನೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ಇಲ್ಲಿನ ಜಿಲ್ಲಾಡಳಿತ ಕೋವಿಡ್ ನಿಯಂತ್ರಣದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದೆ, ಪ್ರತಿ ತಾಲೂಕಿಗೆ ಮೂರು ಆಂಬ್ಯೂಲೆನ್ಸ್ ನೀಡಿದ್ದಾರೆ. ಹಳ್ಳಿಗಳಲ್ಲಿ ಕೋವಿಡ್ ಕೇರ್ ಗಳನ್ನು ತೆರೆದು ಚಿಕಿತ್ಸೆ ಕೊಡಲಾಗುತ್ತಿದೆ. ಪ್ರತಿಯೊಬ್ಬ ಅಧಿಕಾರಿಗಳು ಅಷ್ಟೇ ಅಲ್ಲದೇ ನಾಗರಿಕರು ಕೂಡಾ ಕೊರೋನಾ ನಿಯಂತ್ರಣದಲ್ಲಿ ಕೈಕೋಡಿಸಬೇಕೆಂದರು.
ಇನ್ನೂ ದೆಹಲಿಯಿಂದ ಈಗಾಗಲೇ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್ ಗೆ 9 ಸಾವಿರ ಅಂಪೋಟೆರಿಸನ್ ಬಿ ಔಷಧಿ ಬಂದಿದ್ದು, ಅದನ್ನು ಎಲ್ಲರಿಗೂ ಕೊಡುವ ವ್ಯವಸ್ಥೆ ಮಾಡಲಾಗುವುದು. ಇನ್ನೂ ಮೂರನೇ ಅಲೆ ಬಂದರೆ ಅದಕ್ಕೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ದತೆ ಬಗ್ಗೆ ಕೂಡಾ ಚರ್ಚೆ ಮಾಡಲಾಗಿದೆ.
ಮೈಸೂರಿನಲ್ಲಿ ಅಧಿಕಾರಿಗಳ ಮಧ್ಯೆ ಗೊಂದಲ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗೊಂದಲ ಇರುವುದು ನಿಜ. ಇಂದು ಸಂಜೆ ಬೆಂಗಳೂರಿಗೆ ಹೋಗಿ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದರು.