ಹುಬ್ಬಳ್ಳಿ; ಮಕ್ಕಳ ಭವಿಷ್ಯಕ್ಕೆ, ದಂಪತಿ ಕಲಹ ನಿವಾರಣೆ, ನೆಮ್ಮದಿ ಬದುಕುಸಂತಸದ ಜೀವನ, ಶಾಂತಿ, ಉಜ್ವಲ ಭವಿಷ್ಯಕ್ಕೆ ರುದ್ರಾಕ್ಷಿ ಪ್ರದರ್ಶನ, ಮಾರಾಟದ ಪ್ರಯೋಜನ ಪಡೆಯಬೇಕು ಎಂದು ಇಂಡಸ್ ನೇಪಾಳ ರುದ್ರಾಕ್ಷಿ ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ಸಲಹೆ ನೀಡಿದರು.
ಹುಬ್ಬಳ್ಳಿ ನಗರದ ಪುಣೆ ಬೆಂಗಳೂರು ರಸ್ತೆಯಲ್ಲಿನ ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್ ಎದುರಿನ ರೇವಣಕರ್ ಕಂಫರ್ಟ್ಸ್ ನ ಎರಡನೇ ಮಹಡಿಯಲ್ಲಿನ ಸಭಾಂಗಣದಲ್ಲಿ ಇಂಡಿಸ್ ನೇಪಾಳ ರುದ್ರಾಕ್ಷಿ ಸಂಸ್ಥೆ ವತಿಯಿಂದ ನೇಪಾಳದ ರುದ್ರಾಕ್ಷಿಗಳ ಮಾರಾಟ ಪ್ರದರ್ಶನದಲ್ಲಿ ಅವರು ಮಾತನಾಡಿದರು, ಈಗ
ನವೆಂಬರ್ 17 ರ ವರೆಗೆ ವಿಸ್ತರಣೆ ಮಾಡಿದ್ದು ಗುಣಮಟ್ಟದ ಮತ್ತು ಜೀವನ ಭವಿಷ್ಯಕ್ಕೆ ಬಹು ಸಹಕಾರಿಯಾದ ರುದ್ರಾಕ್ಷಿಗಳು ಲಭ್ಯ ಇವೆ. ಈ ರುದ್ರಾಕ್ಷಿಗಳ ಮಾರಾಟವನ್ನು ನವೆಂಬರ್ 10 ರಿಂದ ಆರಂಭ ಮಾಡಿದ್ದು ಜನರ ಒತ್ತಾಯದ ಮೇರೆಗೆ ಪ್ರದರ್ಶನ ಹಾಗೂ ಮಾರಾಟದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಈ ಪ್ರದರ್ಶನ ಮತ್ತು ಮಾರಾಟದಲ್ಲಿ ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸಬೇಕು, ಯಾವ ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸದೇ ಯಾವ ಫಲಾಫಲ ಲಭ್ಯವಾಗುತ್ತದೆ. ಈ ರುದ್ರಾಕ್ಷಿಗಳಲ್ಲಿ ಅಸಲಿ ಯಾವುದೇ ನಕಲಿ ಯಾವುದು ತಿಳ ಹೇಳಲಾಗುತ್ತದೆ. ಇದೊಂದು ಜೀವನ ಸಮೃದ್ಧಿಗೆ ಬಲು ಸಹಕಾರಿಯಾಗಿದೆ ಎಂದು ಸಂಸ್ಥೆ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ತಿಳಿಸಿದರು.
ಅರ್ಧ ಚಂದ್ರಾಕೃತಿಯ ಮುಖವುಳ್ಳ ಹೊಂದಿರುವ, 21 ಮುಖವುಳ್ಳ ರುದ್ರಾಕ್ಷಿ, ವಿವಿಧ ಬಗೆಯ ಸಿದ್ಧಮಾಲಾ,ಸ್ಪಟಕ ಮಾಲೆ, ಜಪ ಮಾಲೆ,ತುಳಸಿ ಮಾಲೆ, ಶಿವ ಮಾಲೆ, ಜ್ಞಾನ ಮಾಲೆ, ಅದೃಷ್ಟದ ಹರಳು ಮಾರಾಟಕ್ಕೆ ಲಭ್ಯ ಇವೆ.