Breaking News

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಿ ಶಾಸಕ ಸಿ.ಎಂ.ನಿಂಬಣ್ಣವರ ಒತ್ತಾಯ

Spread the love

ಹುಬ್ಬಳ್ಳಿ;ಕಬ್ಬು ಬೆಳೆಗಾರರ ಸಮಸ್ಯೆ ದಿನೇ ದಿನೇ ಉಲ್ಬಣಗೂಳ್ಳುತ್ತಿದ್ದು ಸರ್ಕಾರ ಗಟ್ಟಿ ನಿರ್ಧಾರ ತಗೆದುಕೂಳ್ಳವಂತೆ ಶಾಸಕ ಸಿಎಂ ನಿಂಬಣ್ಣವರ ಒತ್ತಾಯ ಮಾಡಿದರು.
ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಾರ್ಖಾನೆ ಇರುವುದಿಲ್ಲ ಪಕ್ಕದ ಹಳಿಯಾಳ ಪ್ಯಾರಿ ಶುಗರ್ಸ್ ಕಾರ್ಖಾನೆಯು ಬಂದ್ ಆಗಿರುವುದರಿಂದ ಮತ ಕ್ಷೇತ್ರದ ರೈತರಿಗೆ ತೊಂದರೆಯಾಗಿದೆ ಕೂಡಲೇ ಎಪ್ ಆರ್ ಪಿ ದರವನ್ನು ಹೆಚ್ಚಿಸಿ ಕಾರ್ಖಾನೆ ಪುನಃ ಪ್ರಾರಂಭಿಸ ಬೇಕೆಂದು ಶಾಸಕ ಸಿಎಂ ನಿಂಬಣ್ಣವರ ಹೇಳಿದರು.
ಅವರು ಪತ್ರಿಕಾಗೋಷ್ಠಿ ಕರೆದು ಮಾತನಾಡಿ ಕಾರ್ಯನಿರ್ವಹಿಸುತ್ತಾ ಬಂದಿದೆ ಈ ಅವಧಿಯಲ್ಲಿ ಈ ಕಾರ್ಖಾನೆ ಕಬ್ಬು ನುರಿಸಲು ಪ್ರಾರಂಭಿಸಿಲ್ಲ ರೈತರು ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಾ ಕಾರ್ಖಾನೆಯನ್ನು ಬಂದ್ ಮಾಡಿದ್ದಾರೆ ಹೋರಾಟ ನಿರತ ರೈತರ ಬೇಡಿಕೆಗಳು ನ್ಯಾಯುತವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಒಂದು ಗಟ್ಟಿ ನಿಲವು ತಾಳುವುದು ತೀರಾ ಅವಶ್ಯವಿದೆ ಎಂದರು .
ರೈತರು ಎಪ್ ಆರ್ ಪಿ ದರವನ್ನು ಹೆಚ್ಚಿಸಬೇಕೆಂದು ಸಾರಿಗೆ ಮತ್ತು ಕಟಾವು ಚಾರ್ಜಗಳನ್ನು ಕಡಿಮೆಗೊಳಿಸಿಬೇಕೆಂದು ಮತ್ತು ತೂಕದಲ್ಲಿ ರೈತರಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕೆಂದರು ಈಗ ಆಗಲೇ ಕಲಘಟಗಿಯ ಕ್ಷೇತ್ರದಲ್ಲಿ ಎರಡು ಮೂರು ರೈತರ ಸಭೆಗಳನ್ನ ಮಾಡಿದ್ದೇನೆ ಬೆಂಗಳೂರಿಗೆ ಹೋಗಿ ಸಕ್ಕರೆ ಸಚಿವರೂಂದಿಗೆ ಸುದೀರ್ಘ ಚರ್ಚೆ ಮಾಡಲಾಗಿದೆ ಎಂದರು.
ಧಾರವಾಡ ಜಿಲ್ಲೆಯಲ್ಲಿ ವಿಶೇಷವಾಗಿ ಕಲಘಟಗಿ ಮತಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆದು ನಿಂತಿದೆ ಈ ಬೆಳೆ ಹೊರತುಪಡಿಸಿ ಅತಿವೃಷ್ಟಿಯಿಂದ ಬೇರೆ ಯಾವ ಬೆಳೆಗಳು ರೈತರ ಪಾಲಿಗೆ ಸಿಕ್ಕಿಲ್ಲ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದೆ ಕೂಡಲೇ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ರೈತರ ಬೇಡಿಕೆಗೆ ಸ್ಪಂದಿಸಿ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ರೈತರು ಸಾಕಷ್ಟು ತೊಂದರೆಯಲ್ಲಿ ಇದ್ದಾರೆ ಆದ್ದರಿಂದ ಕೂಡಲೇ ಅವರ ಬೇಡಿಕೆ ಈಡೇರಿಕೆಗೆ ಶಾಸಕ ಸಿ.ಎಂ. ನಿಂಬಣ್ಣವರ ಒತ್ತಾಯ ಮಾಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ
ಸಿ ಬಿ ಹೋನ್ನಳ್ಳಿ ಎಸ್ ಎನ್ ರಾಯನಾಳ ನಿಂಗಪ್ಪ ಸುತಗಟ್ಟಿ ಉಪಸ್ಥರಿದ್ದರು.
ಯಾವುದೇ ರಾಜಕೀಯ ಇಲ್ಲ;ಧಾರವಾಡ ಜಿಲ್ಲೆಯಲ್ಲಿ ಸಹ ಯಥೇಚ್ಛವಾಗಿ ಕಬ್ಬು ಬೆಳೆಯನ್ನ ಬೆಳೆಯಲಾಗುತ್ತದೆ ಆದರೆ ರೈತರ ಬೇಡಿಕೆಗೆ ಅವರ ನೋವಿಗೆ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಆಗಲಿ ರಾಜ್ಯ ಸರ್ಕಾರವಾಗಲಿ ಸರಿಯಾಗಿ ಸ್ಪಂದಿಸುತಿಲ್ಲ ಎಂಬುವುದು ಈಗಿನ ರೈತರ ಹೋರಾಟ ನೋಡಿದಾಗ ಗೊತ್ತಾಗುತ್ತದೆ.
ಕಷ್ಟಪಟ್ಟು, ಸಾಲ‌ಮಾಡಿ, ಬೆವರು ಸುರಿಸಿ ರೈತರು ಬೆಳೆದ ಕಬ್ಬು ಇನ್ನೆನು ಸಿಹಿ ಸಿಹಿ ಮೂಟೆಯಾಗಬೇಕು. ಈಗ ಇದರಲ್ಲಿ ರಾಜಕೀಯ ಕಹಿ ಬೆರೆಸಲಾಗುತ್ತಿದೆ. ಪ್ರಸ್ತುತ ವರ್ಷ
ಧಾರವಾಡ ಜಿಲ್ಲೆಯ 50 ಸಾವಿರ ರೈತರು, 1.57 ಲಕ್ಷ ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. 10 ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತದೆ.
ರೈತರು ಈಗ ಧಾರವಾಡ ಡಿಸಿ ಕಚೇರಿಯಲ್ಲಿ ಮುಂದೆ ಧರಣಿ ನಡೆಸಿದ್ದಿ ಅಹೋರಾತ್ರಿ ಹೋರಾಟ ಮುಂದುವರಿದಿದೆ. ಈ ಹೋರಾಟ ಯಾವ ಹಂತಕ್ಕೆ ಹೋಗುತ್ತದೆ ನೋಡಬೇಕು.


Spread the love

About Karnataka Junction

    Check Also

    ತಾವು ಬೇಸಿಗೆಯ ರಜೆಗಾಗಿ ವಿಶೇಷ ರೈಲುಗಳ ಸಂಚಾರ ಮಾಹಿತಿ ಇಲ್ಲಿದೆ

    Spread the loveಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ …

    Leave a Reply

    error: Content is protected !!