Breaking News

ರೋಟರಿಯನ್ ಹಿರಿಯ ಸಮಾಜ ಸೇವಕಿ ಸಂಜನಾ ನಿವಾಸದಲ್ಲಿ ತುಳಸಿ ಪೂಜೆ

Spread the love

ಹುಬ್ಬಳ್ಳಿ: ನಗರದಲ್ಲಿ ಕೇಶ್ವಾಪುರ ಸುವಿಧಾ ವಿಲ್ಲಾ ದಲ್ಲಿನ ರೋಟರಿಯನ್ ಹಿರಿಯ ಸಮಾಜ ಸೇವಕಿ ಸಂಜನಾ ನಿವಾಸದಲ್ಲಿ
ತುಳಸಿ ಪೂಜಾ (ವಿವಾಹ) ಶನಿವಾರ ಸಂಜೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ತುಳಸಿ ಕಟ್ಟೆ ಶುಚಿಗೊಳಿಸಿ, ಬಣ್ಣ ಹಚ್ಚಲಾಯಿತು. ಕಬ್ಬು, ಮಾವಿನ ತಳಿರು- ತೋರಣ ಹಾಗೂ ಹೂ ದಂಡೆ, ಮಾಲೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.
ಮೇಣದ ಬತ್ತಿ, ಹಣತೆಯ ದೀಪಗಳಿಂದ ಆವರಣ ಬೆಳಗಿಸಲಾಗಿತ್ತು. ವಿವಿಧ ರಂಗು-ರಂಗಾದ ರಂಗವಲ್ಲಿ ಎಲ್ಲರ ಮನೆ ಮುಂದೆ ರಾರಾಜಿಸುತ್ತಿದ್ದವು. ಗಣೇಶ ಪೂಜೆ ಬಳಿಕ ಶ್ರೀಕಷ್ಣನ ಮೂರ್ತಿಗೆ ಅಭಿಷೇಕ ಪೂಜೆ ನೆರವೇರಿಸಿ, ತುಳಸಿ ಮಾತೆಗೆ ಪೂಜಿಸಲಾಯಿತು.
ದೀಪ-ಧೂಪ, ತುಪ್ಪದಾರುತಿ ಬೆಳಗಿ, ರಾಧಾ- ಕೃಷ್ಣ ಭಕ್ತಿ ಗೀತೆಗಳೊಂದಿಗೆ ಆರತಿ ಮಾಡಲಾಯಿತು. ನಗರದ ಶಿಕ್ಷಕರ ಕಾಲೋನಿಯಲ್ಲಿನ ಪೂಜೆಯಲ್ಲಿ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.


Spread the love

About Karnataka Junction

    Check Also

    ರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ

    Spread the loveರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ ಹುಬ್ಬಳ್ಳಿ: ರಂಜಾನ್‌ ಹಬ್ಬದ ನಿಮಿತ್ತ …

    Leave a Reply

    error: Content is protected !!