Breaking News

ಗೋವಾದ ಬಿಚ್ಚೋಲಿಯಂನಲ್ಲಿ ಕನ್ನಡಿಗರ14ನೇ ಸಾಂಸ್ಕೃತಿಕ ಸಮ್ಮೇಳನಕ್ಕೆ ಅದ್ದೂರಿ ಸಿದ್ಧತೆ

Spread the love

ಗೋವಾದ ಬಿಚ್ಚೋಲಿಯಂನಲ್ಲಿ ಕನ್ನಡಿಗರ14ನೇ ಸಾಂಸ್ಕೃತಿಕ ಸಮ್ಮೇಳನಕ್ಕೆ ಅದ್ದೂರಿ ಸಿದ್ಧತೆ

ನಾಡಿನ ವಿವಿಧೆ ಕಡೆಗಳ ಕನ್ನಡಿಗರಿಗೆ ಆಹ್ವಾನ

ಗೋವಾ; ನಗರದ ಬಿಚ್ಚೋಲಿಯಂ ನ ಹೀರಾಬಾಯಿ ಸಭಾಂಗಣದಲ್ಲಿ ನವೆಂಬರ್13 ರಂದು
ನಡೆಯುವ ಕನ್ನಡಿಗರ 14ನೇ
ಸಾಂಸ್ಕೃತಿಕ ಸಮ್ಮೇಳನವನ್ನು
ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉದ್ಘಾಟನೆ ಮಾಡುವರು.
ದಿವ್ಯ ಸಾನಿಧ್ಯವನ್ನು ಶ್ರೀ ಚಂದ್ರಶೇಖರ್ ಶಿವಾಚಾರ್ಯರು ಹಿರೇಮಠ ಹುಕ್ಕೇರಿ ವಹಿಸುವರು
ಹೋರನಾಡ ಕನ್ನಡಿಗರ ಏಳನೇ ಸಾಂಸ್ಕೃತಿಕ ಸಮಾವೇಶವನ್ನು
ಕೇಂದ್ರ ಸಚಿವ ಶ್ರೀಪಾದ್ ನಾಯಕ
ಅವರು ಉದ್ಘಾಟಿಸುವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗು ಗಣಿ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಅವರು ಕರ್ನಾಟಕ ಪ್ರವಾಸಿ ತಾಣಗಳ ಕುರಿತು ಮಾಹಿತಿ ಕೋಶವನ್ನು ಬಿಡುಗಡೆ ಮಾಡುವರು
ಗೋವಾ ಸರ್ಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನೆಯ ಸಚಿವ ನೀಲಕಂಠ ಕಾಲೋಕರ ರವರು ಸಾಧಕರಿಗೆ ಸನ್ಮಾನ ಮಾಡುವರು
ಬಿಜೆಪಿ ಹಿರಿಯ ಮುಖಂಡ ಶ್ರೀ C T ರವಿಯವರು ಕರ್ನಾಟಕ ವೈಭವ ಚಿತ್ರಕಲ ಪ್ರದರ್ಶನವನು ಉದ್ಘಾಟಿಸುವರು ಕನಾ೯ಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸಿ. ಸೋಮಶೇಖರ್ ಅವರು ಸ್ಮರಣ ಸಂಚಿಕೆಯನ್ನ ಬಿಡುಗಡೆಗೊಳಿಸುವವರು.
ವಿಶೇಷ ಅಹ್ವಾನಿತರಾಗಿ ಕಲಂಗುಟ್ ಶಾಸಕ ಮೈಕಲ್ ಲೋಬೂ. ಬಿಚೋಲಿಯ ಶಾಸಕರಾದ ಚಂದ್ರಕಾoತ ಶೇಟಿ ಇತರರ ಗೋವಾದ ಜನಪ್ರತಿನಿಧಿಗಳು ಹಾಗೂ ಕರ್ನಾಟಕದ ಅಧಿಕಾರಿಗಳು ಉಪಸ್ಥಿತರಿರುವರು.
ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿಯಂ ಜoಟಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ
ನಡೆಯುವ ಕನ್ನಡಿಗರ
14ನೇ ಸಾಂಸ್ಕೃತಿಕ ಸಮ್ಮೇಳನದ
ಸರ್ವಾಧ್ಯಕ್ಷರಾದ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಕರ್ನಾಟಕ ಡೀಜಿಟಲ್ ಗ್ರಂಥಾಲಯದ ರೂವಾರಿ ಸತೀಶ್ ಕುಮಾರ್ ಹೊಸಮನಿ
ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ.
ಬೆಜೋಲಿಯ ಶಾಂತದುರ್ಗ ದೇವಸ್ಥಾನ ದಿಂದ ಪೂರ್ಣ ಕುಂಭದ 200 ಮಹಿಳೆಯರೊಂದಿಗೆ ಸಾಂಸ್ಕೃತಿಕ ಕಲಾತಂಡಗಳ ಜೊತೆ ಸಮ್ಮೇಳನ ಅಧ್ಯಕ್ಷರ
ಮೆರವಣಿಗೆ ಹೀರಾ ಬಾಯಿ ವರೆಗೂ ನಡೆಯಲಿದ್ದು
ಕರ್ನಾಟಕದ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾತಂಡಗಳ ನೃತ್ಯ ಪ್ರದರ್ಶನಗಳು ನಡೆಯಲಿವೆ
ಅಂತರ ರಾಜ್ಯ ಕವಿಗೋಷ್ಠಿ ಚಿತ್ರಕಲಾ ಪ್ರದರ್ಶನ ಕರ್ನಾಟಕದ ಪ್ರವಾಸಿ ತಾಣಗಳ ಪ್ರದರ್ಶನ
ಸಾಧಕರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಪ್ರಧಾನ
ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳು ನಡೆಯಲಿವೆ
ಎಂದು ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷರಾದ ಹನುಮಂತಪ್ಪ ರೆಡ್ಡಿ ಸಿರೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌ಈ ಕುರಿತು ಗೋವಾದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯ ಚರ್ಚೆಯಲ್ಲಿ
ಕನ್ನಡ ರಜ್ಯೋತ್ಸವ ಸಮಯದಲ್ಲಿ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನವನ್ನು ಅತ್ಯಂತ ಅದ್ದೂರಿಯಿಂದ ನಡೆಸಲು ನಿರ್ಣಯಿಸಲಾಯಿತು.
ಸಮ್ಮೇಳನದ ಸಂಚಾಲಕರಾದ ಮಹೇಶ್ ಬಾಬು ಸುರುವೇ ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷರಾದ ವೀರೇಶ್ ರವರು ಸಭೆಯಲ್ಲಿ ಹಾಜರಿದ್ದ ಕರ್ಮ ಭೂಮಿ ಕನ್ನಡ ಸಂಘದ ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಗೋವಾ ಕನ್ನಡ ಮಹಾಸಂಗದ ಅಧ್ಯಕ್ಷರಾದ ಹನುಮಂತಪ್ಪ ರೆಡ್ಡಿ ಶಿರೂರವರು ಕಾರ್ಯಕ್ರಮ ಅದ್ದೂರಿಯಾಗಿ ನಡೆಸಬೇಕೆಂದು ರೂಪವೇಷಗಳನ್ನು ವಿವರಿಸಿ ವಿನಂತಿಸಿದರು ಸಂದರ್ಭದಲ್ಲಿ
ಅಖಿಲ ಗೋವಾ ಕನ್ನಡ ಮಹಾಸಂಗದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಶಿರೂರು ಮತ್ತು ಕರ್ಮಭೂಮಿ ಕನ್ನಡ ಸಂಘದ ಪದಾಧಿಕಾರಿಗಳು ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಪದಾಧಿಕಾರಿಗಳು ಉಪಸ್ಥೀತರಿದ್ದರು.
ಎಂದು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.


Spread the love

About Karnataka Junction

    Check Also

    ಉಸ್ತುವಾರಿಯನ್ನಾಗಿ ಸದಾನಂದ ಡಂಗನವರ ನೇಮಕ

    Spread the loveಹುಬ್ಬಳ್ಳಿ: ವಿಧಾನ ಪರಿಷತ್ತಿನ ಮೂರು ಪದವೀಧರರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಬರುವ ಜೂನ್ 3 ರಂದು …

    Leave a Reply

    error: Content is protected !!