ಕಸಬಾಪೇಟೆ ಪೊಲೀಸ್ ಠಾಣೆ ಪಿಐ ಅಡೆಪ್ಪ ಬನ್ನಿ ಎತ್ತಂಗಡಿ

Spread the love

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಜಂಗ್ಲೀಪೇಟೆ ನಿವಾಸಿ ಸಂತೋಷ ಮುರುಗೋಡ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಪೊಲೀಸರ ಕೈವಾಡ ಇದೆ ಎಂದು ಆರೋಪಿಸಿ ಕಸಬಾಪೇಟೆ ಪೊಲೀಸ್ ಠಾಣೆ ಮುಂದೆ ಭಾನುವಾರ ಶವ ಇಟ್ಟು ಪ್ರತಿಭಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಸಬಾಪೇಟೆ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಡೆಪ್ಪ ಬನ್ನಿ ಅವರನ್ನು
ಹುಬ್ಬಳ್ಳಿ ಧಾರವಾಡ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.‌ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್
ಆರ್ ಎಚ್ ಹಳ್ಳೂರು ಅವರನ್ನು ಕಸಬಾಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸಂತೋಷ ಮುರುಗೋಡನನ್ನ ಆತನ ಸ್ನೇಹಿತ ಶಿವಾನಂದ ನಾಯಕ ಶುಕ್ರವಾರ ರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿದು ಕೊಲೆ ಮಾಡಿದ್ದನು. ಸಂತೋಷ ಮುರುಗೋಡ ಕೊಲೆ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಜಂಗ್ಲೀಪೇಟೆ ನಿವಾಸಿಗಳು ಹಾಗೂ ಸಂತೋಷ ಕುಟುಂಬಸ್ಥರು ಭಾನುವಾರ ಪ್ರತಿಭಟನೆ ಮೃತದೇಹ ಕಸಬಾ ಪೊಲೀಸ್ ಠಾಣೆಗೆ ತಂದು ಆಕ್ರೋಶ ವ್ಯಕ್ತಪಡಿಸಿದ್ದರು.‌ ಶಿವಾನಂದ ನಾಯ್ಕಗೆ ಪೊಲೀಸರ ಬೆಂಬಲ ಇದೆ ಅಂತಾ ಸಹ ಆರೋಪಿಸಲಾಗಿತ್ತು.


Spread the love

About Karnataka Junction

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply