ಕನ್ನಡದ ಪ್ರತಿ ಶಾಲೆಯಲ್ಲಿ ಪಾಠಶಾಲಾ ಕ್ಲಿನಿಕ್ ಆರಂಭಿಸಿ- ಗಂಗಾಧರ ದೊಡವಾಡ

Spread the love

ಕನ್ನಡದ ಪ್ರತಿ ಶಾಲೆಯಲ್ಲಿ ಪಾಠಶಾಲಾ ಕ್ಲಿನಿಕ್ ಆರಂಭಿಸಿ- ಗಂಗಾಧರ ದೊಡವಾಡ

ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಂದೇಶ

ಹುಬ್ಬಳ್ಳಿ ; ಪರಭಾಷಾ ಹಾವಳಿಯಿಂದ ಕನ್ನಡ ಭಾಷೆ ತತ್ತರಿಸುತ್ತಿದ್ದು ಕನ್ನಡ ಭಾಷೆ ಉಳಿವಿಗಾಗಿ ಕನ್ನಡತನದ ಬೆಳವಣಿಗೆಗಾಗಿ ಕರ್ನಾಟಕದ ಸರ್ಕಾರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪಾಠಶಾಲಾ ಕ್ಲಿನಿಕ್ ಎಂಬ ಹೊಸ ಯೋಜನೆ ರೂಪಿಸಿ ನುರಿತ ಎಂ ಬಿ ಬಿ ಎಸ್ ಗ್ರೇಡಿನ ವೈದ್ಯರನ್ನು‌ ನೇಮಕ ಮಾಡಿ ಎಲ್ಲಾ ಮಕ್ಕಳು ಕನ್ನಡ ಶಾಲೆಯತ್ತ ಆಕರ್ಷಣೆ ಆಗುವಂತೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.‌ 67ನೇ ಕರ್ನಾಟಕ ರಾಜ್ಯೋತ್ಸವದಂಗವಾಗಿ ಶ್ರೀ ಉಳವಿ ಚನ್ನಬಸವೇಶ್ವರ 196 ಅಡಿ ಎತ್ತರದ ಪುತ್ತಳಿ ಪ್ರತಿಷ್ಠಾಪನಾ ಸಮಿತಿಯು ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಪ್ರತಿ ಶಾಲೆಯಲ್ಲಿ ಎಂಬಿಬಿಎಸ್ ಪದವಿಯ ಒಬ್ಬ ವೈದ್ಯರ ಜೊತೆಗೆ ಔಷಧಿಯ ಒಂದು ಪ್ರತ್ಯೇಕ ಕೊಠಡಿ ಮಾಡಿ ಕನ್ನಡ ಭಾಷೆಯ ಶಾಲೆಗಳಿಗೆ ಆಕರ್ಷಣೆಯ ಶಕ್ತಿ ತುಂಬಲು ಒತ್ತಾಯಿಸಿದ್ದಾರೆ ಇದರಿಂದ ಕನ್ನಡ ಭಾಷೆಯ ಕಲಿಯುವಿಕೆ ನೂರಾರು ಪಟ್ಟು ಹೆಚ್ಚಾಗುವದೆಂದು ಹೇಳಿದ್ದಾರೆ ಈ ಸಂದರ್ಭದಲ್ಲಿ ಗಣ್ಯರಾದ ರಾಜುಕೊಟಗಿ, ಶಿವಾನಂದ ಮಾಯಕಾರ, ಈಶ್ವರ ಸಿರಸಂಗಿ, ವೀರಭದ್ರಪ್ಪ ಅಮ್ಮಿನಬಾವಿ, ಬಸನಗೌಡ ಪಾಟೀಲ, ಭೀಮಣ್ಣ ಬಡಿಗೇರ, ಕುಮಾರ ಕುಂದನಹಳ್ಳಿ, ಅನ್ನಪೂರ್ಣ ಪಾಟೀಲ, ಹನುಮಂತಪ್ಪ ಭೋವಿ, ಈರಯ್ಯ ಮಠಪತಿ, ರಾಮು ನಂದಳ್ಳಿ, ಮಂಜುನಾಥ ಬೈಲವಾಡ, ಮುಂತಾದವರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ

    Spread the loveರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ ಹುಬ್ಬಳ್ಳಿ: ರಂಜಾನ್‌ ಹಬ್ಬದ ನಿಮಿತ್ತ …

    Leave a Reply

    error: Content is protected !!