ಹುಬ್ಬಳ್ಳಿ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ, ಬಾಲಾಜಿ ನರರೋಗ ವಿಜ್ಞಾನ ಮತ್ತು ಟ್ರಾಮಾ ಸಂಸ್ಥೆ ವತಿಯಿಂದ, ನಗರದಲ್ಲಿ ಶನಿವಾರ ಪಾರ್ಶ್ವವಾಯು ಜಾಗೃತಿ ಮ್ಯಾರಾಥಾನ್ ಜರುಗಿತು. ಮೂರು ಸಾವಿರ ಮಠದ ಜಗದ್ಗುರು ಗಂಗಾಧರ ಪ್ರೌಢಶಾಲೆ ಆವರಣದಲ್ಲಿ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಮ್ಯಾರಾಥಾನ್ಗೆ ಚಾಲನೆ ನೀಡಿದರು.
ಸಂಸ್ಥೆಯ ಡಾ. ಕ್ರಾಂತಿಕಿರಣ ಮಾತನಾಡಿ, ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ಅ. 29 ಅನ್ನು ವಿಶ್ವ ಪಾರ್ಶ್ವವಾಯು ದಿನವಾಗಿ ಘೋಷಿಸಿದೆ. ರೋಗಕ್ಕೆ ಚಿಕಿತ್ಸೆ ನೀಡುವ ಜೊತೆಗೆ ಈ ಕುರಿತು ಜನಜಾಗೃತಿಯ ಅಗತ್ಯವಿದೆ ಎಂದರು.
ಅತಿಯಾದ ಒತ್ತಡ, ವ್ಯಾಯಾಮ ರಹಿತ ಜೀವನ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಿದುಳು, ಕೈ-ಕಾಲು ಸೇರಿದಂತೆ ಇತರ ಅಂಗಗಳಿಗೆ ಪಾರ್ಶ್ವವಾಯು ತಲುಪುತ್ತದೆ. ಇತ್ತೀಚೆಗೆ ಈ ರೋಗ ಸಾಮಾನ್ಯವಾಗಿದ್ದು, ಪ್ರತಿ ನಾಲ್ವರ ಪೈಕಿ ಒಬ್ಬರು ಇದರಿಂದ ಬಳಲುತ್ತಿದ್ದಾರೆ. ಹಾಗಾಗಿ, ಜನರು ಈ ಕಾಯಿಲೆಯ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ ಮಾಡದೆ, ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಶಾಲೆಯ ಆವರಣದಿಂದ ಆರಂಭಗೊಂಡ ಮ್ಯಾರಾಥಾನ್ ಮಹಾವೀರ ಗಲ್ಲಿ, ಪೆಂಡಾರ ಗಲ್ಲಿ, ಮೈಸೂರು ಸ್ಟೋರ್ಸ್, ದುರ್ಗದ ಬೈಲ್, ಮರಾಠ ಗಲ್ಲಿ, ಬ್ರಾಡ್ ವೇ, ವಿಕ್ಟೋರಿಯಾ ರಸ್ತೆ, ಪದ್ಮಾ ಟಾಕೀಸ್ ಮಾರ್ಗವಾಗಿ ವಾಪಸ್ ಶಾಲೆ ತಲುಪಿತು.
ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ, ವಿವಿಧ ಸಂಘ- ಸಂಸ್ಥೆ, ಕ್ಲಬ್ ಗಳ ಸದಸ್ಯರು ಹಾಗೂ ಬಿಜೆಪಿ ಸದಸ್ಯರು ಜಾಗೃತಿ ಫಲಕಗಳೊಂದಿಗೆ ಭಾಗವಹಿಸಿದ್ದರು. ಬಿಜೆಪಿ ಮುಖಂಡರಾದ ಪ್ರಭು ನವಲಗುಂದ, ರಂಗಾ ಬದ್ದಿ, ಡಿ.ಕೆ. ಚವಾಣ, ಸಂದೀಪ ಬೂದಿಹಾಳ ಹಾಗೂ ಇತರರು ಇದ್ದರು.
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …