ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಇಲಾಖೆ( ರಾಜ್ಯ) ಗುಪ್ತ ವಾರ್ತೆ) ಯ ಸಿಬ್ಬಂದಿಯೊಬ್ಬರು ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಮೇಶ ಉದ್ದಪ್ಪನವರ( 39) ಪೊಲೀಸ್ ಕಾನ್ಸ್ಟೇಬಲ್ ಆಗಿದ್ದು ಇ.ಮೂಲತ: ಸಿಎಆರ್ ನಿಂದ ಗುಪ್ತ ವಾರ್ತೆ ವಿಭಾಗಕ್ಕೆ ಎರವಲು ಸೇವೆಯಿಂದ ಬಂದವರು. ಮನೆಯಲ್ಲಿ ಫಿನಾಯಿಲ್ ಕುಡಿದು ಅಸ್ವಸ್ಥನಾಗಿದ್ದು ರಮೇಶ ಮನೆಯಲ್ಲಿ ಅವರ ಕುಟುಂಬಸ್ಥರು 112 ಸಹಾಯವಾಣಿಗೆ ಕರೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಒಂದದ ಮೂಲದ ಪ್ರಕಾರ ಮೇಲಾಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಯತ್ನಕ್ಕೆ ಕಾರಣ ಎಂದು ಆರೋಪಿಗಳು ಕೇಳಿಬರುತ್ತಿವೆ. ಇನ್ನು ಮನೆಯಲ್ಲಿ
ಕೌಟುಂಬಿಕ ಸಮಸ್ಯೆಗಳೂ ಸಹ ಇದ್ದವು ಎನ್ನಲಾಗಿದ್ದು ಮುಂಜಾನೆಯಿಂದ ಗ್ರಹಣವಿರುವ ಕಾರಣ ಉಪವಾಸವಿದ್ದ ಕಾರಣ ಯಾವುದೇ ರೀತಿಯ ಆಹಾರ ಸೇವನೆ ಮಾಡದೇ ಉಪವಾಸವಿದ್ದು ಮಧ್ಯಸೇವನೆಯಿಂದಲೂ ಅಸ್ವಸ್ಥನಾದ ಬಗ್ಗೆ ಅನುಮಾನ ಪಡಲಾಗಿದೆ.
