ಹುಬ್ಬಳ್ಳಿ; ಅರ್ಬನ್ ಕ್ರೂಸರ್ ಹೈರೈಡರ್’ ಕಾರು ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಕಾರು ಮಾದರಿ ಯಾಗಿದ್ದು, ಇದು ಬೆಲೆ ವಿಚಾರದಲ್ಲೂ ಗಮನಸೆಳೆದಿದ್ದು ಹ್ಯುಂಡೈ ಕ್ರೆಟಾ ಮತ್ತು ಸ್ಕೋಡಾ ಕುಶಾಕ್‌ಗಳಿಗೆ ಕಠಿಣ ಪೈಪೋಟಿ ನೀಡಲಿದೆ ಎಂದು ಶೋಧಾ ಟೊಯೋಟಾ ಕಂಪನಿಯ ನಿರ್ದೇಶಕ ಕಾರ್ತಿಕ ನಾಯಕ ಹೇಳಿದರು.
ಶೋಧ ಟೊಯೋಟಾದಿಂದ ಅರ್ಭನ್ ಕ್ರುಸರ್ ಹೈರೈಡರ್ ವಾಹನವನ್ನು ನಗರದಲ್ಲಿ ಹುಬ್ಬಳ್ಳಿ ಮಾರುಕಟ್ಟೆಗೆ ಅನಾವರಣ ಸಂದರ್ಭದಲ್ಲಿ ಮಾತಾಡಿದರು.ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಿದ್ದು
ಮುಂಬರುವ ಹಬ್ಬಗಳ ಋತುವಿನಲ್ಲಿ ಈ ವಾಹನವು ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದು ಹುಂಡೈ ಕ್ರೇಟಾ, ಕಿಯಾ ಸೆಲ್ಟೊಸ್‌ನಂತಹ ವಾಹನಗಳ ಜೊತೆ ಪೈಪೋಟಿಗೆ ಇಳಿಯಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಒಂದು ಗೇಮ್ ಚೇಂಜ್ ಎಸ್ ಯುವಿಯಾಗಿದೆ. ಕಾರಿನ ಎಕ್ಸ್ ಶೋರೋಂ ಬೆಲೆ 10.48 ಲಕ್ಷ ಆಗಿದ್ದು ಪ್ರತಿ ಲೀಟರ್ ಪೆಟ್ರೋಲಿಗೆ27.97 ಕೀಲೋ ಮೀಟರ್ ಮೈಲೇಜ್ ಕೊಡುತ್ತದೆ
ಇದು ನಿಯೊ ಡ್ರೈವರ್ ಹಾಗೂ ಸ್ವಯಂ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ನಿಯೊ ಡ್ರೈವ್ ಮಾದರಿಯು 1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಸ್ವಯಂ ಚಾರ್ಜ್ ಆಗುವ ಹೈಬ್ರಿಡ್ ಎಲೆಕ್ಟ್ರಿಕ್ ಮಾದರಿಯಲ್ಲಿ 1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಇದರಲ್ಲಿದೆ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, 360 ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ವಾಹನದಲ್ಲಿ ಇರಲಿವೆ ಎಂದು ಕಂಪನಿ ತಿಳಿಸಿದರು.
ಶೋಧಾ ಟೊಯೋಟಾ ಕಂಪನಿಯ ಉಪಾಧ್ಯಕ್ಷ ಸಂತೋಷ ಕುಮಾರ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಇದೊಂದು ಟೊಯೋಟಾ ಕಂಪನಿ ಮುಂದಾಗಿದೆ ಎಂದರು.
ಶೋಧಾ ಟೊಯೋಟಾ ಕಂಪನಿಯ ಉಪಾಧ್ಯಕ್ಷರಾದ ಸಂತೋಷಕುಮಾರ ಮಾತನಾಡಿ, ಈ ಕಾರು ಹೈಬ್ರಿಡ್ ಎಂಜಿನ್, ಗೇರ್ ಬಾಕ್ಸ್, ವೈಶಿಷ್ಟ್ಯತೆಗಳು..
ಹೊಸ ಕಾರು ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಕಾರು ಮಾದರಿಯಾಗಿದ್ದು, ಇದು ಬೆಲೆ ವಿಚಾರದಲ್ಲೂ ಗಮನಸೆಳೆಯಲಿದೆ. ಇದೀಗ ಕಾರಿನ ಅನಾವರಣದೊಂದಿಗೆ ಗ್ರಾಹಕರ ನಿರೀಕ್ಷೆಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ತನ್ನ ಹೊಸ ಎಸ್‍ಯುವಿಯೊಂದಿಗೆ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ ಮತ್ತು ಸ್ಕೋಡಾ ಕುಶಾಕ್‌ಗಳಿಗೆ ಕಠಿಣ ಸ್ಪರ್ಧೆ ಸ್ಪರ್ಧೆ ನೀಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ಮುಂಡರಗಿ ಗ್ರಾಹಕರಿಗೆ ಕಾರ ಖರೀದಿ ಮಾಡಿದಕ್ಕೆ ಕೀ ನೀಡಿ ಸಂತಸಪಟ್ಟರು. ಕಂಪನಿಯ ಸಿಬ್ಬಂದಿ ವರ್ಗ, ಹಿತೈಷಿಗಳು ಭಾಗವಹಿಸಿದ್ದರು.
Check Also
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ
Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …