Breaking News

ಮಾಜಿ ಸಿಎಂ ಜಗದೀಶ ಶೆಟ್ಟರ್ ನಿವಾಸದ ಸಮೀಪ ಕಾಂಗ್ರೇಸ್ ಕಾರ್ಯಕರ್ತರಿಂದ ಭಜನೆ ಹಾಸ್ಯಾಸ್ಪದ- ರವಿ ನಾಯಕ ಟೀಕೆ

Spread the love

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ ಧಾರವಾಡ
ಸೆಂಟ್ರಲ್ ಕ್ಷೇತ್ರದ ಶಾಸಕರಾದ ಜಗದೀಶ ಶೆಟ್ಟರ ರವರ ನಿವಾಸದ ಸಮೀಪ ಕೆಲವು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ರಾತ್ರಿ ಸಮಯದಲ್ಲಿ ಕೆಲವೇ ಕಾರ್ಯಕರ್ತರೊಡನೆ ಸೇರಿ ಭಜನೆ ಮಾಡಿ ನಾಟಕ ಮಾಡಿದ್ದು ಖಂಡನೀಯ ಹಾಗೂ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ರವಿ ನಾಯಕ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಹಿಂದೆAದೂ ಕಾಣದ ವಿಪರೀತ ಮಳೆಯಾಗಿದ್ದು, ಕ್ಷೇತ್ರದ ಕೇಲ ಭಾಗದಲ್ಲಿ ಸ್ವಲ್ಪ ಅಡಚಣೆಯಾಗಿದ್ದು ನೀಜ, ಆದರೆ ಮಾನ್ಯ ಶಾಸಕರು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲಸ ಕಾರ್ಯಗಳ ಬಗ್ಗೆ ಆ ದಿನ ಸಲಹೆ-ಸೂಚನೆ ನಿಡುತ್ತಾ ಬಂದಿರುತ್ತಾರೆ. ಇದ್ಯಾಗಿಯೂ ಕೂಡಾ ಶಾಸಕರ ನಿರ್ಲಕ್ಷ ಎಂದು ಕಾಂಗ್ರೇಸ್‌ನ ಪದಾಧಿಕಾರಿ ಹೇಳಿದ್ದು, ಮೂರ್ಖತನದ ಪರಮಾವಧಿ. ಪೊಲೀಸ್ ಠಾಣೆಯಲ್ಲಿ ಶಾಕರು ಕಾಣೆಯಾಗಿದ್ದಾರೆಂದು ದೂರು ನಿಡುವುದು ವಿಕೃತ ಮನಸ್ಸಿನ ಸೂಚನೆಯಾಗಿದೆ. ಅಲ್ಲಿದ್ದ ಶಾಸಕರ ಸಹಾಯಕರು ನಿಮ್ಮ ಮನವಿ ಏನಿದೆ ನೀಡಿ, ನಾವು ನಿಡುತ್ತೇವೆಂದು ಹೇಳಿದರು ಅದನ್ನು ಕೇಳದೇ ಪ್ರಚಾರಕ್ಕೊಸ್ಕರ ಇಂತಹ ಕಪಟ ನಾಟಕ ಮಾಡುವುದು ಎಷ್ಟು ಸಮಂಜಸ? ಎಂದು ಪ್ರಶ್ನೆ ಹಾಕಿದ್ದಾರೆ. ಕ್ಷೇತ್ರದಲ್ಲಿ ಕೆಲಸಗಳು ಈ ಹಿಂದೆಯೂ ನಡೆದಿವೆ ಈಗಲೂ ನಿರಂತರವಾಗಿ ಅಭಿವೃದ್ದಿ ನಡೆಯುತ್ತಿವೆ ಇಂತಹ ಸಂದರ್ಭದಲ್ಲಿ ಬಾಲೀಶ ತನದ ಹೇಳಿಕೆಗಳು ಏನು ಕೆಲಸ ಮಾಡುವುದಿಲ್ಲ. ಈಗ ಚುನಾವಣೆಯನ್ನು ಹಿತದೃಷ್ಠಿಯಲ್ಲಿಟ್ಟುಕೊಂಡು ಕೇಲವರು ಈ ರೀತಿ ಮಾಡುವುದರಿಂದ ಏನು ಪ್ರಯೋಜನವಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಈ ಭಾಗದ ಜನರೇ ತಕ್ಕ ಉತ್ತರವನ್ನು ನಿಡಲಿದ್ದಾರೆ. ಇದೇ ರೀತಿ ಮುಂದುವರೆದರೆ ಕಾರ್ಯಕರ್ತರು ಎದ್ದುನಿಂತು ಪ್ರತಿಹೋರಾಟ ನಡೆಸಬೇಕಾಗುತ್ತದೆ ೆಎಂದು ರವಿ ನಾಯಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಪವನ ಬಿಜವಾಡ ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಆಗಿ ನೇಮಕ

Spread the loveಹುಬ್ಬಳ್ಳಿ; ನಗರದ ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪವನ ಪರಶುರಾಮ ಬಿಜವಾಡ ಅವರನ್ನ ಪ್ರಧಾನ ಕಾರ್ಯದರ್ಶಿಯನಾಗಿ ನೇಮಕ …

Leave a Reply

error: Content is protected !!