ಹುಬ್ಬಳ್ಳಿ ತಾಲೂಕಿನ ಮಾವನೂರು ಗ್ರಾಮದ ಹಳ್ಳದಲ್ಲಿ ಕಾರ್ಮಿಕನೋರ್ವ ಸಿಲುಕಿ ಹಾಕಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸೋಮವಾರ ಸಾಕಷ್ಟು ಮಳೆಯಾಗಿದ್ದು ಮಳೆ ರಭಸಕ್ಕೆ ಹುಬ್ಬಳ್ಳಿ ಮಾವನೂರು ನಡುವಿನ ಹಳ್ಳದಲ್ಲಿ ಪ್ರವಾಹ ಏಕಾಏಕಿ ಹೆಚ್ಚಾಗಿದ್ದು ಹಳ್ಳದಲ್ಲಿ ದಾಟಿ ಹೋಗುವಾಗ ನೀರಿನ ರಭಸಕ್ಕೆ ಸಿಲುಕಿ ಹಳ್ಳದ ನಡುವೆ ಮರದಲ್ಲಿ ಆಶ್ರಯದಲ್ಲಿ ನಿಂತಿದ್ದಾನೆ. ನಂತರ ಅಂಚಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗ್ರಹಾರ ತಿಮ್ಮಸಾಗರ ಗ್ರಾಮದ ಮುಖಂಡ ಹಾಗೂ ಅಂಚಟಗೇರಿ ಗ್ರಾಮ ಪಂಚಾಯತಿ ಸದಸ್ಯರಾದ ಎಸ್ .ಡಿ. ಮಾಳಗಿ ಅವರು ಕಾರ್ಮಿಕ ಪರಿಚಯದವರಿಗೆ ಸಂಪರ್ಕ ಮಾಡಿ ಸುರಕ್ಷಿತವಾಗಿ ಪ್ರವಾಹದಿಂದ ತರಲು ಸಹಾಯ ಮಾಡಿದರು.
