Breaking News

ದೀಪಕ ಪಟದಾರಿ ಕೊಲೆ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಐಡಿ ತಂಡ

Spread the love

 

ಹುಬ್ಬಳ್ಳಿ: ರಾಯನಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನ ಸಿಐಡಿ ಅಧಿಕಾರಿಗಳು ಶುಕ್ರವಾರ ಬಾಗಲಕೋಟೆ ಸಮೀಪದಲ್ಲಿ ವಶಕ್ಕೆ ಪಡೆದಿದ್ದಾರೆ.
ರುದ್ರಪ್ಪ ಮೇಟಿ ಹಾಗೂ ಯಲ್ಲಪ್ಪ ಮೇಟಿಯನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಜು. 4ರಂದು ರಾತ್ರಿ ರಾಯನಾಳ ಬಳಿ ಗಂಗಿವಾಳದ ದೀಪಕ ಪಟದಾರಿ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ಆರು ಜನರನ್ನು ಬಂಧಿಸಿದ್ದರು. ಆದರೆ, ಈ ಹತ್ಯೆಗೆ ಪ್ರಮುಖ ಕಾರಣ ಮೇಟಿ ಕುಟುಂಬದ ಇನ್ನು ಮೂವರು ಕಾರಣವೆಂದು ಆರೋಪಿಸಿ ಅವರ ಪತ್ನಿ ಪುಷ್ಪಾ ಪಟದಾರಿ ಹಳೇಹುಬ್ಬಳ್ಳಿ ಠಾಣೆ ಎದುರು ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸಿದ್ದರು.ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಮುಖ್ಯಮಂತ್ರಿ ಮತ್ತು ಡಿಐಜಿ ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದರು. ರಾಜ್ಯ ಸರಕಾರ ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು.
ಅಧಿಕಾರಿಗಳ ತಂಡವು ಪ್ರಕರಣದ ವಿಚಾರಣೆ ನಡೆಸುತ್ತಿರುವಾಗಲೇ ಸೆ. 28ರಂದು ರಾತ್ರಿ ಪುಷ್ಪಾ ಪಟದಾರಿ ನವನಗರದ ಸಿಟಿ ಪಾರ್ಕ್ ನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಹತ್ಯೆಗೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಮೇಟಿ ಕುಟುಂಬದ ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!