Breaking News

ಮಿದುಳು ನಿಷ್ಕ್ರಿಯ ಗೊಂಡ ಉಣಕಲ್ ನ ಇಂಜಿನಿಯರಿಂಗ್ ವಿದ್ಯಾರ್ಥಿ ಅಂಗಾಂಗ ದಾನ

Spread the love

ಹುಬ್ಬಳ್ಳಿ: ಮಿದುಳು ನಿಷ್ಕ್ರಿಯ ಗೊಂಡ ಉಣಕಲ್ ನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಅಂಗಾಂಗ ದಾನ ಪ್ರಕ್ರಿಯೆ ನಗರದ ತತ್ವಾದರ್ಶ ಆಸ್ಪತ್ರೆಯಲ್ಲಿ ವಿಜಯದಶಮಿ ದಿನವಾದ ಬುಧವಾರ ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಎರಡು ದಿನದ ದಾಖಲಾಗಿದ್ದ ಪವನ ಕಮ್ಮಾರ(೨೨), ಮಿದುಳು ನಿಷ್ಕ್ರಿಯ ಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಜೀವನ ಸಾರ್ಥಕತೆ ತಂಡ, ಪವನ ಕುಟುಂಬ ಸಂಪರ್ಕಿಸಿ ಮನವೊಲಿಸಿತು. ಕುಟುಂಬದ ಸಮ್ಮತಿ ಮೇರೆಗೆ ಒಂದು ಕಿಡ್ನಿ ಬೆಳಗಾವಿ ಕೆಎಲ್ ಇ ಆಸ್ಪತ್ರೆ, ಇನ್ನೊಂದು ಸುಚಿರಾಯು, ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಲಿವರ್, ಎರಡು ಕಣ್ಣುಗಳನ್ನು ಕಿಮ್ಸ್ ಗೆ ದಾನ ಮಾಡಲಾಗಿದೆ ಎಂದು ಮೂತ್ರಪಿಂಡ ತಜ್ಙ ಡಾ. ವೆಂಕಟೇಶ ಮೊಗೇರ ತಿಳಿಸಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಡಾ. ಭರತ ಕ್ಷತ್ರಿ, ಡಾ. ಎಸ್.ಬಿ. ಬಳಿಗಾರ, ಡಾ. ಈಶ್ವರ ಹೊಸಮನಿ, ಡಾ. ವಿದ್ಯಾ ನೇತೃತ್ವದ ವೈದ್ಯಕೀಯ ತಂಡ ಭಾಗವಹಿಸಿತ್ತು.


Spread the love

About Karnataka Junction

    Check Also

    ರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ

    Spread the loveರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ ಹುಬ್ಬಳ್ಳಿ: ರಂಜಾನ್‌ ಹಬ್ಬದ ನಿಮಿತ್ತ …

    Leave a Reply

    error: Content is protected !!