ಭವಿಷ್ಯದಲ್ಲಿ ಪ್ರಕೃತಿ ವಿಕೋಪದಿಂದ ಅಲ್ಲೋಲ ಕಲ್ಲೋಲವಾಗಲಿದೆ- ಕೋಡಿಮಠ ಶ್ರೀಗಳು

Spread the love

ಧಾರವಾಡ : ಇನ್ನೂ ಮುಂದೆ ಮತ್ತೆ ಭಾರಿ ಮಳೆಯಾಗುವ ಲಕ್ಷಣ ಇದ್ದು ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಲಿವೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ತೋರುತ್ತಿದೆ. ಮಳೆಯಿಂದ, ರೋಗದಿಂದ ಭೂಮಿಯಿಂದ ದೇಶಕ್ಕೆ ಗಂಡಾಂತರವಿದ್ದು ಮತ್ತೆ ತೊಂದರೆಯಾಗುತ್ತದೆ ಎಂದು ಧಾರವಾಡದಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.

ಪ್ರಾರಂಭದಲ್ಲೇ ನಾನು ಹೇಳಿದ್ದೆ. ಮಳೆ, ಗಾಳಿ, ಗುಡುಗು ಇದೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ
ಅವಾಂತರ ಸೃಷ್ಟಿಸಲಿದೆ ಎಂದು ಹೇಳಿದ್ದೆ. ಬೆಂಕಿಯಿಂದ ಕಾಟ, ಮತಾಂದತೆ ಹೆಚ್ಚಳ, ಸಾವು ನೋವುಗಳಾಗುತ್ತವೆ ಎಂದು ಮೊದಲೇ ಹೇಳಿದ್ದೆ. ಅಲ್ಲದೇ ಜನ ಅಶಾಂತಿಯಿಂದ ಇರುತ್ತಾರೆ ಎಂದು ತಿಳಿಸಿದ್ದೆ ಎಂದು ಕೋಡಿ ಶ್ರೀಗಳು ಹೇಳಿದ್ದರು. ‌

ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಎಂದು ಎಚ್ಚರಿಕೆ ಕೂಡ ನೀಡಿದ್ದೆ ಎಂದರು.

ಈಗಲೂ ಅಂತಹ ಪರಿಸ್ಥಿತಿದೆ . ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಲಿದೆ ಎಂದು ಶ್ರೀಗಳು ಹೇಳಿದರು.

ಈ ಸಂವತ್ಸರದ ಕಡೆವರೆಗೂ ರಾಜ್ಯದಲ್ಲಿ ತೊಂದರೆ ಇರಲಿವೆ. ಅಚ್ಛರಿಯ ಅವಘಡ ಕಾದಿದೆ ಎಂದು ಈ ಹಿಂದೆ ಹೇಳಿದ್ದೆ. ಅದು ಕೂಡ ಆಗುತ್ತದೆ ಕಾದು ನೋಡಿ ಎಂದು ಶ್ರೀ ಹೇಳಿದರು. ಅಲ್ಲದೇ ಬೆಂಕಿಯಿಂದ ಹೆಚ್ಚು ಸಮಸ್ಯೆ ಉಂಟಾಗಲಿದೆ. ಅಪಮೃತ್ಯು ಹೆಚ್ಚಾಗಲಿದೆ. ಅಲ್ಲದೇ ರಾಜ್ಯದಲ್ಲಿ ಅಶಾಂತಿಯಾಗಿ ಕಲಹಗಳು ಹೆಚ್ಚಾಗುತ್ತವೆ. ಇದರಿಂದ ರಾಜ್ಯಾದ್ಯಂತ ಅಶಾಂತಿ ಹೆಚ್ಚಾಗಲಿವೆ ಎಂದರು. ಒಂದೆಡೆ ಪ್ರಕೃತಿ ವಿಕೋಪ, ಮತಾಂದತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ ಎಂದು ಹೇಳಿದರು.

ರಾಜಕೀಯ ಭವಿಷ್ಯ ಹಿನ್ನೆಲೆ ಈಗ ಚೆನ್ನಾಗಿ ನಡೆಯುತ್ತಿದೆ. ಚುನಾವಣೆ ಕಾಲದಲ್ಲಿ ಹೇಳುತ್ತೇನೆ. ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಈ ಬಗ್ಗೆ ಹೇಳಿದ್ದೆ. ಕೊರೊನಾ ಹೋಗುತ್ತದೆ. ಹೋಗುವಾಗ ಜಗತ್ತಿಗೆ ವಿಪರೀತ ಕ್ಷಾಮ ಕೊಟ್ಟು ಹೋಗುತ್ತದೆ. ದುಃಖ ಕೊಟ್ಟು ಹೋಗುತ್ತದೆ, ಕುಡಿಯಲು ನೀರು ಇಲ್ಲದಂತೆ ಮಾಡುತ್ತದೆ. ಅಂತಹ ಪ್ರಸಂಗ ಈಗ ನಿರ್ಮಾಣವಾಗಿದೆ ಎಂದರು.

ಭವಿಷ್ಯ ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿಲ್ಲ. ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ ಮಂದಿರ ಎನ್ನುತ್ತಾರೆ. ಆದರೆ ಈ ಕೊರೊನಾ ಮೊದಲು ಬಂದಿದ್ದೇ ದೇವರ ಮೇಲೆ. ಮೊದಲು ಮಠ, ಮಾನ್ಯಗಳ ಮೇಲೆ ಬಂತು ಆ ಮೇಲೆ ಮನುಷ್ಯರ ಮೇಲೆ ಬಂತುಜನೆವರಿವರೆಗೂ ಕೊರೊನಾ ಹೆಚ್ಚು ಹರಡುವ ಕಾಲವಿದೆ. ಇದು ಮತ್ತೊಂದು ರೂಪವಾಗುವ ಲಕ್ಷಣವೂ ಇದೆ. ಬಹಳ ಕಷ್ಟ ಕೊಟ್ಟು ಹೋಗುತ್ತದೆ ಎಂದು ಶ್ರೀಗಳು ಹೇಳಿದರು.

ರಾಜಕೀಯ ಬದಲಾವಣೆ ಬಗ್ಗೆ ಏನೂ ಹೇಳಲು ಹೋಗೋದಿಲ್ಲ ಎಂದು ನಸುನಕ್ಕ ಸ್ವಾಮೀಜಿ. ಎಲ್ಲರಿಗೂ ಒಳ್ಳೆಯದಾಗಲಿ ಸರ್ಕಾರ ಚೆನ್ನಾಗಿ ನಡೆಯುತ್ತಿದೆ
ಅದಕ್ಕೇಕೆ ನಾನು ಅಪಶಕುನ ನುಡಿಯಬೇಕು ಎಂದರು. ಅದನ್ನು ಯುಗಾದಿ ಫಲದ ಮೇಲೆ ಹೇಳುತ್ತೇನೆ ಎಂದು ಹೇಳಿದರು.

ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ. ಇದು ಶುಭ ಆಗೋದಿಲ್ಲ ಅಶುಭವಾಗುತ್ತದೆ. ಮನುಷ್ಯನಿಗೆ ಪ್ರಕೃತಿ, ಮಳೆಯಿಂದ ಸಮಸ್ಯೆಗಳಾಗುತ್ತವೆ. ಗುಡ್ಡಗಳು ಕುಸಿತ. ಭೂಕಂಪ ಹೆಚ್ಚಾಗೋ ಲಕ್ಷಣ ಇದೆ. ಪ್ರಾಣಿಗಳು, ವಿಷಜಂತುಗಳಿಂದ ಮನುಷ್ಯನಿಗೆ ನೋವಾಗುತ್ತದೆ ಎಂದರು. ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು ಎಂದು ಶ್ರೀಗಳು ಎಚ್ಚರಿಕೆ ನೀಡಿದರು. ಅದು ಸಂರಕ್ಷಣೆಯಾಗುತ್ತದೆ. ಆಶ್ವಿಜ ಕೊನೆಯಿಂದ ಯುಗಾದಿ ಕೊನೆಯವರೆಗೂ ಅಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ
ಇದೆ. ಕೊರೊನಾ ಈ ವರ್ಷದಲ್ಲಿ ಬಿಡುಗಡೆಯಾಗತ್ತದೆ
ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.


Spread the love

About gcsteam

    Leave a Reply