ಹುಬ್ಬಳ್ಳಿ; ಅದು 1986 – 87ರ ಸಾಲಿನಲ್ಲಿ ಕುಂದಗೋಳ ಭಾಗದಲ್ಲಿ ಕನ್ನಡದ ಹೆಸರಾಂತ ನಟ ಡಾ ರಾಜಕುಮಾರ್ ಅಭಿಮಾನಿಗಳ ಸಂಘ ಕಟ್ಟಿಕೊಂಡು ಕ್ಷೇತ್ರದಾದ್ಯಂತ ಜನಪರ ಕಾರ್ಯಗಳನ್ನು ಮಾಡುತ್ತಾ ಜನಮನ ಗೆದ್ದ ಬಡವರ ಬಂಧುವಾಗಿ ಶೋಷಿತರ ಧ್ವನಿಯಾಗಿ ಬೆಳೆದು ಬಂದ ಮಾಜಿ ಸಚಿವ ದಿವಂಗತ ಸಿ. ಎಸ್. ಶಿವಳ್ಳಿ ಅವರ ಬದುಕೊಂದು ಯಶೋಗಾಥೆಯಾಗಿದೆ1987ರಲ್ಲಿ ಹುಬ್ಬಳ್ಳಿಯ ಶಕ್ತಿ ಡ್ರಾಮಾ ಥಿಯೇಟರ್ ನಲ್ಲಿ ನಾನು ಶಿವಳ್ಳಿಯವರು ಅಂದಿನ ಹೆಸರಾಂತ ಯುವ ನೇತಾರರಾದ ಚನ್ನು ಪಾಟೀಲರು ಬಂಗಾರದ ಲಿಂಗ ಎಂಬ ನಾಟಕದ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು ದಿ. ಸಿ ಎಸ್ ಶಿವಳ್ಳಿ ಅವರೇ ಅದರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು ಎಂದು ಕಾಂಗ್ರೆಸ್ ವಕ್ತಾರ ಗಂಗಾಧರ ದೊಡ್ಡವಾಡ ಹೇಳಿದರು.
ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಆಯೋಜಿಸಿದ್ದ ದಿ. ಸಿ ಎಸ್ ಶಿವಳ್ಳಿ ಅವರ 61ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಬಿಚ್ಚಿಟ್ಟರು. ವೇದಿಕೆ ಮೇಲೆ ಮುಕ್ತಿಮಂದಿರದ ರುದ್ರಮುನಿ ಶಿವಾಚಾರ್ಯರು ಕುಂದಗೋಳದ ಬಸವಣ್ಣಜ್ಜನವರ ಸಾನಿಧ್ಯದಲ್ಲಿ ಶಾಸಕಿ ಶ್ರೀಮತಿ ಕುಸುಮಾವತಿ ಶಿವಳ್ಳಿ ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಅರವಿಂದ್ ಕಟಗಿ ಶ್ರೀಕಂಠಗೌಡ ಹಿರೇಗೌಡ್ರು ಶ್ರೀಮುತ್ತಣ್ಣ ಶಿವಳ್ಳಿ ಅಡಿವೆಪ್ಪ ಶಿವಳ್ಳಿ ಉಮೇಶ್ ಹೆಬಸೂರ ಶಾಕೀರ ಸನದಿಗಂಗಣ್ಣ ಮೊರಬದ ಶ್ರೀ ಅಮರಶಿವ ಸಿವಳ್ಳಿ ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಕುಂದಗೋಳ ವಿಧಾನಸಭಾ ಕ್ಷೇತ್ರದ ಪ್ರಮುಖ ನೇತಾರರು ಉಪಸ್ಥಿತರಿದ್ದರು.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …