Breaking News

ಚುನಾವಣೆ ಅಖಾಡ ಸಜ್ಜಾಗುವ ಮುನ್ನವೇ ಜೋರಾಗುತ್ತಿದೆ ಕುಕ್ಕರ್ ಸಿಟಿ

Spread the love

ಹುಬ್ಬಳ್ಳಿ; ರಾಜ್ಯ ವಿಧಾನ‌ಸಭಾ ಸಾರ್ವತ್ರಿಕ ಚುನಾವಣೆಗೆ ಐದಾರು ತಿಂಗಳು ಬಾಕಿ ಇವೆ. ಈಗಲೇ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮತದಾರರನ್ನ ಸೆಳೆಯಲು ಅನೇಕ ಕಸರತ್ತು ನಡೆದಿವೆ. ಒಂದು ಸಮುದಾಯ ಒಲಿಸುವಿಕೆ ಆಯಕಟ್ಟಿನ ಸ್ಥಳ ಹುಡುಕಾಟ, ಮತದಾರರ ಮನವೊಲಿಸಲು ಆಶೆ ಆಮಿಷ ಹೀಗೆ ಒಂದಲ್ಲಾ ಎರಡಲ್ಲ ಅನೇಕ ರೀತಿಯ ಒಲೈಕೆ ರಾಜಕಾರಣಕ್ಕೆ ನಾಂದಿಯಾಗಿದೆ ಧಾರವಾಡ ಜಿಲ್ಲೆ. ಈಗ ಜಿಲ್ಲೆಯಲ್ಲಿಯೇ ಹೈಲ್ಟೋಜ್ ಕ್ಷೇತ್ರ ಎಣಿಸಿಕೊಂಡಿರುವ ಕಲಘಟಗಿಯಲ್ಲಿ ಈಗ ಕುಕ್ಕರಿನ‌ ಸಿಟಿಯದ್ದೇ ದೊಡ್ಡ ಸದ್ದು ಕಲಘಟಗಿ ತಾಲೂಕು ಹಿರೇ ಹೊನ್ನಳ್ಳಿ ಗ್ರಾಮದಲ್ಲಿ ನಾಗರಾಜ್ ಚಬ್ಬಿ ಗೆಳೆಯರ ಬಳಗದಿಂದ ಕುಕ್ಕರ್ ವಿತರಣೆ ಮಾಡಲಾಗಿದೆ. ಕಲಘಟಗಿ ಮತಕ್ಷೇತ್ರದ ಕಲಘಟಗಿ ಮತ್ತು ಅಳ್ನಾವರ ಭಾಗಕ್ಕೆ ಸುಮಾರು 80 ಸಾವಿರ ಕುಕ್ಕರ್ ಪ್ರತಿಯೊಂದು ಹಳ್ಳಿಯಲ್ಲೂ ಮನೆಮನೆಗೂ ದೀಪಾವಳಿ ಕೊಡುಗೆ ಎಂದು ನೀಡಲಾಗಿದೆ. ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕುಕ್ಕರ್ ವಿತರಣೆಯ ಮಾಡಿದ್ದಾರೆ.


Spread the love

About Karnataka Junction

    Check Also

    ಮಹದಾಯಿ ಯೋಜನೆ ಜಾರಿಗೆ ಬಿಜೆಪಿ ಸಿದ್ಧ-‌ಪ್ರಲ್ಹಾದ್ ಜೋಶಿ

    Spread the loveಹುಬ್ಬಳ್ಳಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಭಾರತೀಯ ಜನತಾ ಪಕ್ಷ ಯಾವಾಗಲೂ ಸಿದ್ಧವಿದ್ದು ಈ …

    Leave a Reply

    error: Content is protected !!