Breaking News

ಮನುಷ್ಯರು ಸತ್ತರೂ ಇಲ್ಲ ಅಂತ್ಯಕ್ರಿಯೆಗೆ ಜಾಗೆ ಇಲ್ಲ, ಸುಡಗಾಡಕ್ಕಾಗಿ ಹೆತ್ತ ಹೆಣ ಇರಿಸಿಕೊಂಡು ಗ್ರಾಮಸ್ಥರ ಪ್ರತಿಭಟನೆ

Spread the love

ಹುಬ್ಬಳ್ಳಿ: ‌ ಇದು ಅತ್ಯಂತ ಅಭಿವೃದ್ಧಿ ಹೊಂದಿದೆ ಗ್ರಾಮ ಜೊತೆಗೆ ಮೂರು ಸಲ ಮಹಾತ್ಮ ಗಾಂಧೀಜಿ ಪುರಸ್ಕಾರ ಪಡೆದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿ. ‌ಆದರೆ ಈಗ ಈ ಗ್ರಾಮದಲ್ಲಿ ಯಾರಾದರೂ ಸತ್ತರೆ ಅವರ ಅಂತ್ಯಕ್ರಿಯೆಗೆ ಜಾಗೆ ಇಲ್ಲ.‌ ಕಾರಣ ಸ್ಮಶಾನಕ್ಕೆ ಭೂಮಿ ನೀಡುವಂತೆ ಶವ ವಿಟ್ಟು ಆಕ್ರೋಶ ಹೊರ ಹಾಕಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆದಿದೆ. ಇನ್ನು ಈ ಕುರಿತು ತಹಶೀಲ್ದಾರ್, ಎಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕ್ಕೊಂಡರು ಅಧಿಕಾರಿಗಳು, ಸಚಿವರು ತಲೆ ಕೆಡಸಿಕ್ಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಲಾಳ ಗ್ರಾಮದಲ್ಲಿ 4000 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಯಾರಾದ್ರೂ ತಿರಿಕ್ಕೊಂಡರೆ ಶವ ಹೂಳಲು ಜಾಗವಿಲ್ಲ ಎಂದು ಗ್ರಾಮಸ್ಥರು ಸ್ವಂತ ಸ್ಮಶಾನ ಭೂಮಿಗಾಗಿ ಹೋರಾಟ ಮಾಡುತ್ತಿದ್ದರು. ಶವ ಸಂಸ್ಕಾರ ಮಾಡಲು ಜಾಗವಿಲ್ಲ. ಇದಕ್ಕಾಗಿ ಆ ಗ್ರಾಮದ ಗ್ರಾಮಸ್ಥರು ಪರದಾಡುವಂತಾಗಿದೆ, ಶವವನ್ನಿಟ್ಟುಕ್ಕೊಂಡು ಹೋರಾಟ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶವವನ್ನ ಇಟ್ಟುಕ್ಕೊಂಡು ಮಹಿಳೆಯರು, ಗ್ರಾಮಸ್ಥರು ಕಣ್ಣೀರು ಹಾಕಿದರು. ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರು ಶವವನ್ನ ಹೂಳಲು ಜಾಗವಿಲ್ಲ ಎಂದು ಕೈ ಕೈ ಮಿಲಾಯಿಸಿ ಜಗಳವಾಡಿಕೊಂಡರು. ಆದರೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿನಿಧಿಸುವ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಬಾ ಕ್ಷೆತ್ರದ ಗುಮ್ಮಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬ್ಯಾಲಾಳ ಗ್ರಾಮದಲ್ಲಿಯ ಜನರ ಸಮಸ್ಯೆ ಕೇಳೋರಿಲ್ಲ.
ಕಳೆದ 50 ವರ್ಷಗಳಿಂದ ಆ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಸ್ವಂತ ಜಮೀನು ಇಲ್ಲದಕ್ಕೆ ಗ್ರಾಮಸ್ಥರ ಯಾರಾದ್ರೂ ಸಾವನ್ನಪ್ಪಿದ್ರೆ ಹಳ್ಳ, ಬೇರೆ ಬೇರೆಯವರ ಹೊಲದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಆದರೆ ಸದ್ಯ ಆ ಗ್ರಾಮಕ್ಕೆ ಶ್ವಾಶ್ವತವಾಗಿ ಸ್ಮಶಾನ ಭೂಮಿ ಬೇಕು ಅಂತ ಈಗಾಗಲೇ ಹೋರಾಟ ಮಾಡಿದ ಬೆನ್ನಲ್ಲಿ ಸರಕಾರ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಆದರೆ ತಹಶಿಲ್ದಾರ ನಿರ್ಲಕ್ಷ್ಯದಿಂದ ಆ ಜನರಿಗೆ ಬಿಡುಗಡೆಯಾದ 18 ಲಕ್ಷ ಹಣದಲ್ಲಿ ಜಮೀನು ಖರೀದಿ ಮಾಡಿಸಿ ಜನರಿಗೆ ಅನೂಕೂಲ ಮಾಡಲು ಗ್ರಾಮದ ಕೆಲ ಪ್ರಭಾವಿ ಜನರು ಮಾತು ಕೇಳಿ ಖರೀದಿಗೆ ದಿನಾಂಕ 09 11 2022 ರಂದು ನವಲಗುಂದ ತಹಶಿಲ್ದಾರ ಕಚೇರಿಗೆ ಕರೆಯಿಸಿ ಖರೀದಿ ಮಾಡಿಸಿಕ್ಕೊಳ್ಳದೆ ಅವರನ್ನ ಹಾಗೆ ಕಳುಹಿಸಿ ಕೊಟ್ಟಿದ್ದಾರೆ.
ಇನ್ನು ಗ್ರಾಮದ ಕೆಲವನ್ನ ಕರೆಯಿಸಿ ಗ್ರಾಮದ ರುದ್ರಗೌಡರ್ ಎಂಬುವರು ಈಗಾಗಲೆ ಭೂಮಿ ಕೊಡಲು ಒಪ್ಪಿಕ್ಕೊಂಡಿದ್ದಾರೆ ಆದರೆ ಅವರು ಒಪ್ಪಿ 8 ತಿಂಗಳು ಕಳೆದು ಹೋಗಿದೆ ಆದರೆ ತಹಶಿಲ್ದಾರ ಅವರ ನಿರ್ಲಕ್ಷ್ಯದಿಂದ ಖರೀದಿ ಕೆಲಸ ಪೆಂಡಿಂಗ್ ಇರೋದಕ್ಕೆ ಜನರು ಪರದಾಡುತ್ತಿದ್ದಾರೆ.
ಇನ್ನು ಗ್ರಾಮದ ಪುಂಡಲಿಕ್ ಎಂಬುವರು ಸಾವನ್ನಪ್ಪಿದ್ರು ಆದರೆ ಸ್ಮಶಾನ ಭೂಮಿ ಖರೀದಿ ಮಾಡಿಸಿ ಕೊಡೋವರೆಗೂ ಶವವಿಟ್ಡು ತಹಶಿಲ್ದಾರ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ್ರು ಬಳಿಕ ತಹಶಿಲ್ದಾರ ಗ್ರಾಮಕ್ಕೆ‌ ಬಂದಾಗ ನಮಗೆ ಜಾಗ ಇದೆ, ಸರಕಾರದಿಂದ ಎರಡು ತಿಂಗಳ ಹಿಂದೆ ಹಣ ಬಿಡುಗಡೆಯಾಗಿದೆ ಯಾಕೆ ನೀವು ಹಿಂದೇಟು ಹಾಕುತ್ತಿದ್ದಿರಿ ಎಂದು ತಹಶಿಲ್ದಾರ ಅವರನ್ನ ತರಾಟಗೆ ತೆಗೆದುಕ್ಕೊಂಡರು. ಆದರೆ ಈ ಗ್ರಾಮಸ್ಥರ ರಿಗೆ ದೇವರು ವರ ಕೊಟ್ರೆ ಪೂಜಾರಿ ವರ ಕೊಡ್ತಿಲ್ಲ ಅನ್ನೋ ಹಾಗೆ ಆಗಿದೆ ಗ್ರಾಮಸ್ಥರ ಸದ್ಯದ ಪರಿಸ್ಥಿತಿ. ಇನ್ನು ಗ್ರಾಮದಲ್ಲಿ ಮಾಧ್ಯಮದವರನ್ನ ನೋಡುತ್ಲೇ ತಹಶಿಲ್ದಾರ ಅನಿಲ ಬಡಿಗೆರ ಸ್ಥಳಕ್ಕೆ ಬಂದು ನಾಲ್ಕು ದಿನದಲ್ಲಿ ಖರೀದಿ ಮಾಡಿಸಿ ಕೊಡುತ್ತೆನೆ ಎಂದು ಭರವಸೆ ಕೊಟ್ಡಿದ್ದಾರೆ.
ಒಟ್ಟಿನಲ್ಲಿ ಆ ಬ್ಯಾಲಾಳ ಗ್ರಾಮಕ್ಕೆ ಎರಡು ಎಕರೆ ಜಮೀನು ಖರೀದಿಗೆ ಸರಕಾರದಿಂದ ಹಣ ಬಿಡುಗಡೆಯಾದ್ರೆ ತಹಶಿಲ್ದಾರರ ನಿರ್ಲಕ್ಷ್ಯದಿಂದ ಖರೀದಿ‌ ಕೆಲಸ ವಿಳಂಬ ವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು..ತಹಶಿಲ್ದಾರ ಅನಿಲ ಬಡಿಗೇರ ಅವರು ಕೊಟ್ಟ ಮಾತಿನಂತೆ ನಡೆದುಕ್ಕೊಂಡು ಭೂಮಿ ಖರೀದಿ ಮಾಡಿ ಮನುಷ್ಯರು ಸತ್ತ ಮೇಲೆ ಮುಕ್ತಿ ಕಾಣಲು ಉಳಿದಿರುವ ಸ್ಮಶಾನದ ವ್ಯವಸ್ಥೆ ಮಾಡತಾರಾ ಎಂಬುದನ್ನು ಕಾಲವೇ ಉತ್ತರ ನೀಡಬೇಕಾಗಿದೆ.


Spread the love

About Karnataka Junction

    Check Also

    ಉಸ್ತುವಾರಿಯನ್ನಾಗಿ ಸದಾನಂದ ಡಂಗನವರ ನೇಮಕ

    Spread the loveಹುಬ್ಬಳ್ಳಿ: ವಿಧಾನ ಪರಿಷತ್ತಿನ ಮೂರು ಪದವೀಧರರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಬರುವ ಜೂನ್ 3 ರಂದು …

    Leave a Reply

    error: Content is protected !!