ಹುಬ್ಬಳ್ಳಿ; ನಗರದ ಕೌಲ್ ಪೇಟೆ ಬಳಿ
ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಿಫಲ್ ಪ್ರಂಟ್ ಆಫ್ ಇಂಡಿಯಾ ಮೇಲೆ ಎನ್ ಐಎ ದಾಳಿ ವಿಚಾರವಾಗಿ
ಹುಬ್ಬಳ್ಳಿಯಲ್ಲಿ ಎಸ್ ಡಿಪಿಐ ಹಾಗೂ ಪಿಎಫ್ ಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸುವ ವೇಳೆ ಒತ್ತಾಯ ಪೂರ್ವಕವಾಗಿ ರಸ್ತೆ ಬಂದ್ ಮಾಡಲು ಹೋದ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ರಸ್ತೆ ರೋಖಾ ಮಾಡಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರ ಮನವೊಲಿಸಲು ಪೊಲೀಸರು ಮುಂದಾಗಿದ್ದರು ಆದರೆ ಪೊಲೀಸರ ಮಾತನ್ನ ಕೇಳದ ಎಸ್ ಡಿಪಿಐ ಹಾಗೂ ಪಿಎಫ್ ಐ ಕಾರ್ಯಕರ್ತರನ್ನ ಸಹ ವಶಕ್ಕೆ ಪಡೆಯಲಾಗಿದೆ
ಹುಬ್ಬಳ್ಳಿಯ ಕೌಲ್ ಪೇಟೆಯಲ್ಲಿ ಪ್ರತಿಭಟನೆಗಾಗಿ ಬೆಳಿಗೆಯಿಂದಲೇ ಜಮಾವಣೆ ಆಗಿದ್ದರು. ರಾಜ್ಯಾದ್ಯಂತ ಎನ್ ಐಎ
ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಿಫಲ್ ಪ್ರಂಟ್ ಆಫ್ ಇಂಡಿಯಾ
ಕಚೇರಿ ನಾಯಕರ ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ ಇನ್ನೊಂದು ಕಡೆ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಿಫಲ್ ಪ್ರಂಟ್ ಆಫ್ ಇಂಡಿಯಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪುನಾ ಬೆಂಗಳೂರು ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರಿಗೆ ಸಾಕಷ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಸಹ ನೀಡಿದ್ದರು ಎನ್ನಲಾಗಿದೆ.
ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಲಾಗಿದ್ದು
ಗೋ ಬ್ಯಾಕ್ ಎನ್ ಐಎ ಗೋ ಬ್ಯಾಕ್ ಎನ್ ಐಎ ಎಂದು ಘೋಷಣೆ ಕೂಗಿ ಪ್ರತಿಭಟನೆ ಮಾಡಿದ ನಂತರ ಕೇಲ ಸಮಯ ತ್ವೇಷಮಯ ವಾತಾವರಣ ಸಹ ನಿರ್ಮಾಣವಾಗಿತ್ತು.
ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರನ್ಬ ಬಂಧಿಸಿದ ಪೊಲೀಸರು ಗೋಕುಲ ರಸ್ತೆಯಲ್ಲಿ ಹೊಸ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.
ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ಸಹ ಮುಂದುವರಿದಿದ್ದು
ಪ್ರತಿಭಟನಾ ನಿರತ ಕಾರ್ಯಕರ್ತರನ್ನ ಬಂಧಿಸಿ ಕರೆದೊಯ್ದ ಪೊಲೀಸರು ವಿರುದ್ಧ ಸಹ ಘೋಷಣೆ ಕೂಗಲಾಗಿದೆ. ಎಸ್.ಡಿ.ಪಿ.ಐ ಕಚೇರಿಗಳ ಮೇಲೆ ದಾಳಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸಭೆ: ಇನ್ನೊಂದುಕಡೆ ಎಸ್.ಡಿ.ಪಿ.ಐ ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಎನ್.ಐ.ಎ ದಾಳಿ ಹಿನ್ನಲೆಯಲ್ಲಿ ಎಸ್.ಡಿ.ಪಿ.ಐ ಸಂಘಟನೆಗಳಿಂದ ಹುಬ್ಬಳ್ಳಿಯಲ್ಲಿ ಸಭೆ ನಡೆಸಿರುವ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ.ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಗುಡಿಹಾಳ ರಸ್ತೆಯಲ್ಲಿರುವ ನಿಹಾಲ್ ಫಂಕ್ಷನ್ ಹಾಲ್ ನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು,ಸಭೆಯಲ್ಲಿ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭಾಗಿಯಾಗಿದ್ದರು.
ಸಭೆಯಲ್ಲಿ ಕೇಂದ್ರ ಸರ್ಕಾರದ ನಡೆ ಖಂಡಿಸಿದ ಅಬ್ದುಲ್ ಮಜೀದ್, ವಿರೋಧ ಪಕ್ಷಗಳೂ ನಮಗೆ ಬೆಂಬಲವಾಗಿಲ್ಲ ಎಂದ ಅಬ್ದುಲ್. ಉತ್ತರ ಕರ್ನಾಟಕದಲ್ಲಿ SDPI ಸಂಘಟಿಸಲು ಕರೆ ನೀಡಿದರು. ಮುಸ್ಲಿಂರನ್ನು ಎಲ್ಲಾ ಪಕ್ಷಗಳು ಮತಗಳ ಯಂತ್ರಗಳನ್ನಾಗಿ ಮಾಡಿಕೊಂಡಿವೆ. ನಮ್ಮದೇ ಸಂಘಟನೆಯಿಂದ ಉಳಿದ ಪಕ್ಷಗಳಿಗೆ ಬುದ್ಧಿ ಕಲಿಸೋಣ ಎಂದ ಅಬ್ದುಲ್, ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರಿಗೆ ಎಸ್ ಡಿಪಿಐ ಸಂಘಟಿಸುವಂತೆ ಕರೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
