Breaking News

ಚಿಟಗುಪ್ಪಿ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಬಾಣಂತಿಯರಿಗೆ, ದಾದಿಯರಿಗೆ ಹಣ್ಣು-ಹಂಪಲ ವಿತರಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಆಚರಣೆ

Spread the love

ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಾದ್ಯಮ ವಕ್ತಾರರಾದ ರವಿ ನಾಯಕ ನೇತೃತ್ವದಲ್ಲಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ, ಬಾಣಂತಿಯರಿಗೆ ಹಾಗೂ ದಾದಿಯರಿಗೆ ಹಣ್ಣು-ಹಂಪಲ ಹಾಗೂ ಬಿಸ್ಕತ್ ಗಳ ವಿತರಣೆಯನ್ನು ಮಾದ್ಯಮ ಸಮಿತಿಯಿಂದ ಇಂದು ಬೆಳಿಗ್ಗೆ ನಿಡಲಾಯಿತು.

ಈ ಸಂದರ್ಭದಲ್ಲಿ ರವಿ ನಾಯಕ ಅವರು ಮಾತನಾಡಿ ದೇಶದ ಹೆಮ್ಮೆಯ ವಿಶ್ವನಾಯಕ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀಯವರ 72ನೇ ಜನ್ಮದಿನದ ನಿಮಿತ್ತ ನಾವು ಹಣ್ಣು-ಹಂಪಲಗಳನ್ನು, ಬಿಸ್ಕತ್ ಗಳನ್ನು ತಮಗೆಲ್ಲರಿಗೆ ವಿತರಣೆ ಮಾಡುತ್ತಿದ್ದೇವೆ. ತಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಮಹಾನಗರ ಸಂಚಾಲಕರಾದ ಪ್ರಶಾಂತ ಹಾವಣಗಿ, ಹು-ಧಾ ಸೆಂಟ್ರಲ್ ಕ್ಷೇತ್ರ-73ರ ರಾಮನಾಥ ಶೆಣೈ, ಹು-ಧಾ ಪೂರ್ವ ಕ್ಷೇತ್ರ-72ರ ಲಕ್ಷ್ಮಿಕಾಂತ ಘೋಡಕೆ, ಹು-ಧಾ ಸೆಂಟ್ರಲ್ ಕ್ಷೇತ್ರ-73ರ ಲಿಂಗರಾಜ ಬೆಳಗಟ್ಟಿ, ಡಾ. ಸುರೇಶ, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಪವನ ಬಿಜವಾಡ ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಆಗಿ ನೇಮಕ

Spread the loveಹುಬ್ಬಳ್ಳಿ; ನಗರದ ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪವನ ಪರಶುರಾಮ ಬಿಜವಾಡ ಅವರನ್ನ ಪ್ರಧಾನ ಕಾರ್ಯದರ್ಶಿಯನಾಗಿ ನೇಮಕ …

Leave a Reply

error: Content is protected !!