ಉಣಕಲ್ ರಾಮಲಿಂಗೇಶ್ವರ ದೇವಸ್ಥಾನದ ಜಾಗೆಯನ್ನು BRTS ವಶಕ್ಕೆ
ಹುಬ್ಬಳ್ಳಿ: ನಗರದ ಉಣಕಲ್ ಕ್ರಾಸ್ ಬಳಿ ಇರುವ ಶ್ರೀ ರಾಮಲಿಂಗೇಶ್ವರ ನಗರವನ್ನು ಭಾರೀ ಪೊಲೀಸ್ ಭದ್ರತೆಯಲ್ಲಿಂದು ಬಿಆರ್ ಟಿಎಸ್ ಸುಪರ್ದಿಗೆ ಪಡೆಯಲಾಯಿತು . ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾದ ಝುಬೇರ್ ಅಹ್ಮದ್ ಹಾಗೂ ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಅವರ
ನೇತೃತ್ವದಲ್ಲಿ
ರಸ್ತೆಯ ಉಣಕಲ್ ರಾಮಲಿಂಗೇಶ್ವರ ದೇವಸ್ಥಾನದ CTS NO.3448 ರಲ್ಲಿರುವ ಜಾಗೆಯನ್ನು ಕೋರ್ಟ್ ಆದೇಶದ ಮೇರೆಗೆ ಹುಧಾ BRTS ಕಂಪನಿ ಒಡೆತನಕ್ಕೆ ಸೇರಿರುತ್ತದೆ ಎಂದು ತಮ್ಮ ಸುಪರ್ದಿಗೆ ತೆಗೆದುಕೊಂಡು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿ ನೋಟೀಸ್ ಲಗತ್ತಿಸಿದರು. ಈ ನಡುವೆ ಭದ್ರತೆ ದೃಷ್ಟಿಯಿಂದ ಬಿವಿಬಿ ಕಾಲೇಜಿನಲ್ಲಿ ಹಾಗು ಭೈರಿದೇವರಕೊಪ್ಪದ ದರ್ಗಾ ಹತ್ತಿರ ತಲಾ ಒಂದು ಪೊಲೀಸ್ ವಾಹನ ಹಾಗೂ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಸಾರ್ವಜನಿಕರು ನೋಟೀಸ್ ಲಗತ್ತಿಸುವ ವೇಳೆ ಯಾವ ತೊಂದರೆಯನ್ನೂ ಮಾಡಲಿಲ್ಲ. ಧಾರವಾಡದ ಕೃಷಿ ಮೇಳದ ನಂತರ ದೇವಸ್ಥಾನದ ಕಟ್ಟಡ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಬಿಆರ್ ಟಿಎಸ್ ಮೂಲಗಳು ತಿಳಿಸಿವೆ. ಇನ್ನು ಹುಬ್ಬಳ್ಳಿ ಧಾರವಾಡ ನಡುವೆ ಇರುವ ಬೈರಿದೇವರಕೊಪ್ಪದ ದರ್ಗಾ ತೆರವು ಯಾವಾಗ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತಿದ್ದಾರೆ.