Breaking News

ಎನ್ ‌ಎಚ್. ಕೋನರಡ್ಡಿ ಯಾವತ್ತಿಗೂ ಇನ್ನೊಬ್ಬರ ಒಲೈಕೆಗಾಗಿ ರಾಜಕಾರಣ ಮಾಡಿಲ್ಲ ಮಾಡಲ್ಲ- ರಮೇಶ ನವಲಗುಂದ

Spread the love

ಧಾರವಾಡ: ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡ ಎನ್.ಹೆಚ್ ಕೋನರಡ್ಡಿ ಅವರು ಹೋರಾಟವನ್ನು ಮಾಡುತ್ತಾ ಇರೋದು ರೈತರ ಪರವಾಗಿ, ರೈತರಿಗೆ ನ್ಯಾಯ ಕೊಡಿಸುವುದಕ್ಕಾಗಿ ಸರ್ಕಾರದ ಕಣ್ಣು ತೆರೆಸುವುದಕ್ಕಾಗಿ ಹೊರತು ಯಾವುದೇ ಸ್ವಹಿತಾಶಕ್ತಿ ಅಲ್ಲ. ಕೇಲವರು ಇನ್ನೊಬ್ಬರ ಒಲೈಕೆಗೆ ಇಲ್ಲ ಸಲ್ಲದ ಆರೋಪ ಮಾಡುತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಮೇಶ ನವಲಗುಂದ ಹೇಳಿದ್ದಾರೆ. ಮಾಜಿ ಶಾಸಕ
ಕೋನರಡ್ಡಿ ಅವರ ಉದ್ದೇಶ ಜನರ ಹಿತ ಕಾಯುವ ಸಲುವಾಗಿಯೇ ಹೊರತು ಬೇರೆ ಯಾವ ಉದ್ದೇಶವಲ್ಲ. ಅತಿಯಾದ ಮಳೆಯಿಂದ ನವಲಗುಂದ ಕ್ಷೇತ್ರದ ರೈತರು ತಮ್ಮ‌ ಜೀವ ಉಳಿಸಿಕೊಳ್ಳಲು ಪರದಾಡುತ್ತಾ ಇದ್ದಾರೆ, ನವಲಗುಂದ ವಿಧಾನ ಸಭಾ
ಕ್ಷೇತ್ರದಲ್ಲಿ ಮಳೆ‌ ಹಾಗೂ ಪ್ರವಾಹದಿಂದ ಇಷ್ಟೆಲ್ಲ ಅವಾಂತರಗಳು ನಡೆದರೂ ಕೂಡ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಣ್ತೆರೆದು ನೋಡುತ್ತಿಲ್ಲ. ಆದಕಾರಣ ಮಾಜಿ‌ಶಾಸಕರಾದ ಎನ್ ಎಚ್ ಕೋನರಡ್ಡಿ ಅವರು ರೈತರ ಕಷ್ಟಕ್ಕೆ ನಾವು ನಿಮ್ಮ ಜೊತೆ ಇದ್ದೆವೆ ಎನ್ನುವುದರ ಮೂಲಕ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾತ್ರ‌ ಅವರು ಮಾಡುತ್ತಿದ್ದಾರೆ.
ಇನ್ನು ಸಾವಿನ ಮನೆಯಲ್ಲಿ ರಾಜಕಾರಣ ಮಾಡುವಷ್ಟು ಸಣ್ಣತನ ನಮ್ಮಕೋನರೆಡ್ಡಿ ಅವರ ಹತ್ತಿರ ಇಲ್ಲಾ, ಅದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರ ಒಲೈಕೆಗೆ ಆರೋಪ ಸರಿಯಲ್ಲ
ಯಾರೋ ಒಬ್ಬ ವ್ಯಕ್ತಿ ಇದನ್ನು ಅಪಪ್ರಚಾರ ಮಾಡೊದು ಸೂಕ್ತವಲ್ಲ. ಕೋನರಡ್ಡಿಯವರ ಸಹೋದರನ ಸಾವಿನ ವಿಚಾರಗಳನ್ನು ತೆಗೆದು ಅವರ ಮನಸ್ಸಿಗೆ ಮತ್ತೇ ನೋವನ್ನುಂಟು ಮಾಡಬಾರದು. ಅವರು ಇಂದಿಗೂ ಸಹೋದರನ ಅಗಲಿಕೆಯ ನೋವಿನಲ್ಲಿ ಇದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.


Spread the love

About Karnataka Junction

    Check Also

    ಮಹದಾಯಿ ಯೋಜನೆ ಜಾರಿಗೆ ಬಿಜೆಪಿ ಸಿದ್ಧ-‌ಪ್ರಲ್ಹಾದ್ ಜೋಶಿ

    Spread the loveಹುಬ್ಬಳ್ಳಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಭಾರತೀಯ ಜನತಾ ಪಕ್ಷ ಯಾವಾಗಲೂ ಸಿದ್ಧವಿದ್ದು ಈ …

    Leave a Reply

    error: Content is protected !!