ಹುಬ್ಬಳ್ಳಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕರ್ನಾಟಕ ಕಾಲೇಜ್ ಹಾಗೂ ಬೆಳಗಾವಿಯ ಲಿಂಗರಾಜ ಕಾಲೇಜ್ ಸ್ಥಾಪನೆಗೆ ಕಾರಣೀಭೂತರೂ ಭಾಷಾವಾರು ಪ್ರಾಂತ ರಚನೆಗೆ ಮುನ್ನುಡಿ ಬರೆದವರೂ ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡಬೇಕೆಂದು ಮೊದಲ ಪ್ರಸ್ತಾಪದ ಧ್ವನಿಯೆತ್ತಿದ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನಾಮಕರಣಮಾಡಬೇಕೆಂದು ಉಳಿವಿ ಶ್ರೀಚನ್ನಬಸವೇಶ್ವರ 196 ಅಡಿ ಎತ್ತರದ ಪುತ್ತಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಗಂಗಾಧರ ದೊಡವಾಡ ಆಗ್ರಹಿಸಿದರು .ನಗರದಲ್ಲಿಂದು
ಸರ್ ಸಿದ್ದಪ್ಪ ಕಂಬಳಿ ಅವರ ಜಯಂತಿ ಅಂಗವಾಗಿ ಪಾಲಿಕೆ ಆವರಣದ ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಪುತ್ತಳಿಗೆಶ್ರೀ ಉಳವಿ ಚನ್ನಬಸವೇಶ್ವರ ಪುತ್ತಳಿ ಪ್ರತಿಷ್ಠಾಪನಾ ಸಮಿತಿ ಹಾಗೂ ಹುಬ್ಬಳ್ಳಿ-ಧಾರವಾಡ ಪಂಚಮಸಾಲಿ ಯುವ ಘಟಕದ ವತಿಯಿಂದ ಏರ್ಪಡಿಸಿದ ಜಯಂತಿ ಕಾರ್ಯಕ್ರಮದಲ್ಲಿ ಮಾಲಾರ್ಪಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜಣ್ಣ ಕೊಟಗಿ , ಎಸ್ ಎಂ ಮುದಿಗೌಡ್ರ, ಎಸ್ ಕೆ ಕೊಟ್ರೇಶ್ ,ಶಿವಬಸಪ್ಪ ಗಚ್ಛಿನವರ, ಬಸವರಾಜ ಬಳಿಗಾರ, ಸಿದ್ದೇಶ ಕಬಾಡರ,ವೀರಭದ್ರ ಅಮ್ಮಿನಬಾವಿ, ಮಲ್ಲಿಕಾರ್ಜುನ ಹಿರೇಗೌಡರ, ಅನಿಲ್ ಇಜಾರದ, ಉಳವಪ್ಪ ಮಡ್ಡೆಣ್ಣವರ, ನವೀನ್ ಬೆಲ್ಲದ, ಮುಂತಾದವರು ಉಪಸ್ಥಿತರಿದ್ದರು
![](https://karnatakajunction.com/wp-content/uploads/2022/09/IMG_20220911_194620-1-660x330.jpg)