Breaking News

ಲೋಕಾಯುಕ್ತಕ್ಕೆ ಅಧಿಕಾರ, ಅಗತ್ಯ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ಸಲಾಂ ಮಾಡುವೆ- ಹೆಗ್ಗಡೆ

Spread the love

ಧಾರವಾಡ; ಲೋಕಾಯುಕ್ತಕ್ಕೆ ಮಾತ್ರ ಈಗ ಭಷ್ಟಾಚಾರ ವಿರುದ್ಧದ ವಿಚಾರಣೆ ಅಧಿಕಾರ ಇದ್ದು ಲೋಕಾಯುಕ್ತ ಇಲಾಖೆಗೆ ಅಗತ್ಯ ಸೌಲಭ್ಯ ನೀಡಬೇಕು ಎಂದು ಧಾರವಾಡದಲ್ಲಿ ನಿ‌ವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಹೇಳಿದರು.
ಸುದ್ದಿಗಾರರ ಜೊತೆಗೆ ಮಾತನಾಡಿ ದ ಅವರು, ಲೋಕಾಯುಕ್ತಕ್ಕೆ ಪುನಃ ಅಧಿಕಾರ ಹಿನ್ನೆಲೆಯ ಒಳ್ಳೆಯ ನಿರ್ಧಾರವಾಗಿದ್ದು,
ಲೋಕಾಯುಕ್ತಕ್ಕೆ ಸರ್ಕಾರ ಸೂಕ್ತ ಸಿಬ್ಬಂದಿ ಕೊಡಬೇಕು ಸೂಕ್ತ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ನಾ ಸಲಾಂ ಹೇಳುವೆ ಎಂದ ಅವರು
ಈಗಾಗಲೇ ಅನೇಕ ಕೊರತೆಗಳ ನಡುವೆ ಅದು ಕೆಲಸ ಮಾಡುತಿದ್ದು
ಅದಕ್ಕೆ ಬೇಕಾದ ಸಿಬ್ಬಂದಿ ಕೊಡಬೇಕು ಎಂದು ಆಗ್ರಹಿಸಿದರು.
ಕೆಲವು ಲೋಕಾಯುಕ್ತ ಕಾಯಿದೆಗಳಿಗೆ ತಿದ್ದುಪಡಿಯಾಗಬೇಕು
ಈ ಹಿಂದೆ ಇದ್ದ ಅಧಿಕಾರಗಳನ್ನು ಪುನಃ ಕೊಡಬೇಕು ಆದರೆ ಯಾವುದೇ ಕಾರಣಕ್ಕೋ
ನಾನು ಪುನಃ ಲೋಕಾಯುಕ್ತಕ್ಕೆ ಬರೋದಿಲ್ಲ ಈಗಾಗಲೇ ನನ್ನ‌ ಕರ್ತವ್ಯ ನಾನು ಐದು ವರ್ಷ ಮಾಡಿದ್ದೇನೆ ಈಗ ನನಗೆ ಈಗ 83 ವರ್ಷ ವಯಸ್ಸಾಯಿತು ಹೀಗಾಗಿ ನನಗೆ ಈಗ ಯಾವುದೇ ಅಧಿಕಾರ ಬೇಡ ಯಾವ ಹುದ್ದೆ, ಅಧಿಕಾರಕ್ಕೆ ನಾನು ಈಗ ಕಾಯೋದಿಲ್ಲ ಎಂದ ಅವರು ನಾನು ಸಾಕಷ್ಟು ಕೆಲಸ ಮಾಡಿದ್ದೇನೆ ಆದರೆ ಲೋಕಾಯುಕ್ತ ತಿದ್ದುಪಡಿಗೆ ಸಲಹೆ ಕೇಳಿದರೆ ಕೊಡುವೆ ಯಾವುದೇ ಸಂದರ್ಭದಲ್ಲಿ ಸಹಾಯ ಕೇಳಲಿ ಕೊಡುವೆ ಎಂದು ಸಂತೋಷ ಹೆಗಡೆ ಅವರು, ಸರ್ಕಾರ ನನ್ನ ಸಹಾಯ ಅವರು ಕೇಳೋದಿಲ್ಲ ಒಂದು ವೇಳೆ ಕೇಳಿದರೆ ಕೊಡುವೆ ಎಂದರು.
1983ರಲ್ಲಿ ಜನತಾ ಪಕ್ಷ ಲೋಕಾಯುಕ್ತವನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು
ಅಂದು ಬಲಿಷ್ಠವಾದ ಲೋಕಾಯುಕ್ತ ಸಂಸ್ಥೆ ಕಟ್ಟಿದ್ದರು ಆದರೆ ಮೊದಲಿನ ಹತ್ತು ವರ್ಷ ಏನೂ ನಡೆದಿರಲಿಲ್ಲ ಅಂದು ಎನ್‌. ವೆಂಕಟಾಚಲಯ್ಯ ಲೋಕಾಯುಕ್ತದ ಶಕ್ತಿ ತೋರಿಸಿದ್ರು ನಂತರ ನಾನು ಯಾವುದೇ ಒತ್ತಡಕ್ಕೆ ಒಳಗಾಗದೇ ಆ ಬಳಿಕ ನಾನು ಅವರ ಕೆಲಸ ಮುಂದುವರೆಸಿಕೊಂಡು ಹೋಗಿದ್ದೆ
ಅದರ ಪರಿಣಾಮ ಬಹಳ ಆಯ್ತು ನಂತರ ಹೀಗಾಗಿ ಲೋಕಾಯುಕ್ತ ಅಧಿಕಾರ ಕಿತ್ತುಕೊಂಡರು ಎಂದ ಅವರುದುರ್ಬಲಗೊಳಿಸು ಪ್ರಯತ್ನ ಮಾಡಿದ್ರು ಯಾಕಂದ್ರೆ ಧೈರ್ಯ ಸರ್ಕಾರಕ್ಕೆ ಇರಲಿಲ್ಲ ನಂತರ ದುರ್ಬಲಗೊಳಿಸುವ ಯತ್ನ ಮಾಡಿದರು ಆದರೆ ಅದು ಸಫಲವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆಗ ಭ್ರಷ್ಟ ಅಧಿಕಾರಿಗಳನ್ನೆ ತಂದಿಟ್ಟಿದ್ದರುಆದೂ ಆಗದೇ ಇದ್ದಾಗ ಎಸಿಬಿ ಕಟ್ಟಿದ್ದರು ಎಸಿಬಿ ಸೃಷ್ಟಿ ಮಾಡಿದ್ದೆ ಭ್ರಷ್ಟಾಚಾರ ವಿರುದ್ಧ ಹೋರಾಟ ಅಂತ್ಯ‌ಕೊಡಲು ಆದರೆ ಈಗ ಎಸಿಬಿ ಹೋಗಿ ಪುನಃ ಲೋಕಾಯುಕ್ತ ಬಂತು ಎಂದು ಇದೇ ವೇಳೆ ಅವರು ಹೇಳಿದರು.
*ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟರೆ ಸಾಲದು*
ಕೇವಲ ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟರೆ ಸಾಲದು ಬೇಕಾದ ಸಿಬ್ಬಂದಿ ಕೊಡಲೇಬೆಕು. ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ಸಲಾಂ ಮಾಡುವೆ ಎಂದು ಅವರು ಪದೇ ಪದೇ ಪುನರ್ ಉಚ್ಛಾರ ಮಾಡಿದರು.


Spread the love

About Karnataka Junction

    Check Also

    ರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ

    Spread the loveರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ ಹುಬ್ಬಳ್ಳಿ: ರಂಜಾನ್‌ ಹಬ್ಬದ ನಿಮಿತ್ತ …

    Leave a Reply

    error: Content is protected !!