ಟಾಸ್‌ ಗೆದ್ದ ಕೀವಿಸ್‌ ತಂಡ ಫೀಲ್ಡಿಂಗ್‌ ಆಯ್ಕೆ ,ಭಾರತ 17 ಓವರ್ ನಷ್ಟಕ್ಕೆ 53, 2 ವಿಕೇಟ್ ಪತನ

Spread the love

ಹುಬ್ಬಳ್ಳಿ: ಭಾರತ ‘ಎ’ ಹಾಗೂ ನ್ಯೂಜಿಲೆಂಡ್ ’ಎ‘ ತಂಡಗಳ ನಡುವಣ ನಾಲ್ಕು ದಿನಗಳ ‘ಟೆಸ್ಟ್’ ಪಂದ್ಯ ಶುಕ್ರವಾರ ಆರಂಭ ಗೊಂಡಿದ್ದು ಭಾರತದ ಎ ತಂಡ 17 ಓವರ್ ಗಳ ನಷ್ಟಕ್ಕೆ 57 ರನ್ ಗಳಿಸಿತು.
ಭಾರತ ಎ ತಂಡ ಒಂದು ವಿಕೇಟ್ ನಷ್ಟಕ್ಕೆ ಅರ್ಧ ಶತಕ ಗಳಿಸಿದೆ.
ಬೆಳಿಗ್ಗೆ 10.10ಕ್ಕೆ ಟಾಸ್‌ ಹಾಕಲಾಗಿದ್ದು ಟಾಸ್ ಗೆದ್ದ ನ್ಯೂಜಿಲೆಂಡ್‌ ತಂಡದ ನಾಯಕ ಟಾಮ್‌ ಬ್ರೂಸ್‌, ಫೀಲ್ಡಿಂಗ್‌ ಆಯ್ದುಕೊಂಡರು.
ಭಾರತ ’ಎ‘ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ ಹಾಗೂ ಅಭಿಮನ್ಯು ಈಶ್ವರನ್‌ ಬ್ಯಾಟಿಂಗ್‌ ಗೆ ಪೀಲ್ಡ್ ಗೆ ಇಳಿದಾಗ ಅಭಿಮನ್ಯ್ ಈಶ್ವರನ್ 22 ರನ್ ಗಳಿ ಔಟ್ ಆದರೆ ಋತುರಾಜ್ ಗಾಯಕವಾಡ ರನ್ ಪಡೆದು ಪೆವಿಲಿನ್ ಗೆ ತೆರಳಿದರು. ಆದರೂ ಇನ್ನು ಪ್ರಿಯಾಂಕ ಪಾಂಚಾಲ್ 18ರನ್ ಗಳಿಸಿದ್ದು ಆಟ ಮುಂದುವರಿಸಿದ್ದಾರೆ.
ಕಿವೀಸ್‌ ತಂಡದ ಜಾಕೊಬ್ ಡಫಿ ಮೊದಲ ಓವರ್‌ ಬೌಲಿಂಗ್‌ ಮಾಡಿದರು. ಅತ್ಯಂತ ಪಂದ್ಯ ತುರುರಿಸಿನಿಂದ ಕೂಡಿದ್ದು ನ್ಯೂಜಿಲ್ಯಾಂಡ್ ಎ ತಂಡ ಭಾರೀ ಪೀಲ್ಡ್ ಂಗ್ ಟೈಟ್ ಮಾಡಿದ್ದು ಭಾರತ ಎ ತಂಡ ಆಟಗಾರರು ಚಾಲೆಂಜ್ ಆಗಿ ಆಟ ಆಡುತಿದ್ದು ಗಮನ ಸೆಳೆಯಿತು.
ಬೆಳಿಗ್ಗೆ 9.30ಕ್ಕೆ ಶುರುವಾಗಬೇಕಿದ್ದ ಪಂದ್ಯವು ಕ್ರೀಡಾಂಗಣದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ ಬೆಳಿಗ್ಗೆ 10.30ಕ್ಕೆ ಆರಂಭಗೊಂಡಿತು.
ಕರ್ನಾಟಕದ ಆಟಗಾರ ಪ್ರಸಿದ್ಧ ಕೃಷ್ಣ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಮಹಾರಾಷ್ಟ್ರದ ಆಟಗಾರ ಶಾರ್ದೂಲ್‌ ಠಾಕೂರ್, ಅಂತಿಮ 11ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗುರುವಾರ ಆರಂಭವಾಗಿದ್ದ ಪಂದ್ಯದ ಮೊದಲ ದಿನದಾಟವು ಕ್ರೀಡಾಂಗಣದ ತೇವ ಆರದ ಕಾರಣ ರದ್ದುಗೊಳಿಸಲಾಗಿತ್ತು.
ಮೂರು ’ಟೆಸ್ಟ್‘ಗಳ ಸರಣಿಯ ಮೊದಲ ಪಂದ್ಯವು ಬೆಂಗಳೂರಿನಲ್ಲಿ ನಡೆದಿತ್ತು. ಸಾಕಷ್ಟು ರನ್‌ಗಳ ಹೊಳೆ ಹರಿದರೂ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತ್ತು.


Spread the love

About gcsteam

    Check Also

    ಕಳಚಿದ ಕ್ರಿಕೆಟ್ ಲೋಕದ ಮಹಾನ ಕೊಂಡಿ

    Spread the loveನವದೆಹಲಿ : ಕ್ರಿಕೆಟ್‌ ಜಗತ್ತಿನಲ್ಲಿ ಅದ್ಭುತ ಅಂಪೈರ ಆಗಿ ಕಾರ್ಯ ನಿರ್ವಹಿಸಿದ್ದ ರೂಢಿ ಕೋರ್ಟ್ಜನ್ ಇನ್ನೂ ನೆನಪು …

    Leave a Reply