https://youtu.be/3Jvya0Q8JyY
ಹುಬ್ಬಳ್ಳಿ; ಸಾರ್ವಜನಿಕ ಸಾರಿಗೆ ಆರಂಭವಾಗದ ಇಂತಹ ಸಂದರ್ಭದಲ್ಲಿ ಶಿಕ್ಷಕರು ಶಾಲೆಗಳಿಗೆ ತೆರಳಲು ಅನಾನುಕೂಲ ಇದೆ ಇನ್ನಷ್ಟು ದಿನ ಶಿಕ್ಷಕರಿಗೆ ಮನೆಯ ಮುಖಾಂತರವೇ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ ಮನವಿ ಮಾಡಿದ್ದಾರೆ.
ನಗರದಲ್ಲಿ ಹೇಳಿಕೆ ನೀಡಿದ ಅವರು,ಸಾಕಾಷ್ಡು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಕ್ಷಕರಿಗೆ ವ್ಯಾಕ್ಸೀನ್ ಹಾಕಿಲ್ಲ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೋವಿದ ಪಾಸಿಟಿವ್ ಪ್ರಕರಣಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಸಂದರ್ಭದಲ್ಲಿ ಶಾಲೆ ಆರಂಭ ಮಾಡಿದರೇ ತೀವ್ರ ಸ್ವರೂಪದ ತೊಂದರೆ ಆಗುತ್ತದೆ. ಕೋವಿಡ್ -19 ಎರಡನೇ ಅಲೆಯ ಪ್ರಭಾವದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಹಾಗೂ ಕೆಲವೆಡೆ ಸೆಮಿ ಲಾಕ್ ಡೌನ್ ಇದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನಾಳೆಯಿಂದಲೇ ಶಿಕ್ಷಕರು ಶಾಲೆಗೆ ಹಾಜರಾಗಿ ಶೈಕ್ಷಣಿಕ ಪೂರ್ವ ತಯಾರಿ ಮಾಡಿಕೊಳ್ಳಲು ಮಾಧ್ಯಮದ ಮೂಲಕ ಹೇಳಲಾಗಿದೆ. ಆದ್ದರಿಂದ ಈಗ ಶಾಲೆಯ ಮುಖಾಂತರ ಕೆಲಸ ಬೇಡಾ ಎಂದು ಆಗ್ರಹಿಸಿದ್ದಾರೆ.
