Breaking News

ಬಸವಾನಂದ ಸ್ವಾಮೀಜಿ ಹೇಳಿದ್ದೇನು ಗೊತ್ತಾ ನೋಡಿ

Spread the love

ಧಾರವಾಡ: ಚಿತ್ರದುರ್ಗದ ಮುರುಘಾ ಶರಣರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ ಆಡಿಯೋ ಒಂದು ವೈರಲ್ ಆಗಿದೆ. ಯಾವ ಮಠದಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ಲ. ಎಲ್ಲ ಮಠಾಧೀಶರೂ ಅವರೇ ಎಂದು ಸತ್ಯಕ್ಕ ಎಂಬ ಗೃಹಿಣಿಯೊಬ್ಬಳು ಹೇಳಿದ್ದು, ಆ ಆಡಿಯೋದಲ್ಲಿ ಇದೀಗ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಗಳ ಹೆಸರೂ ಪ್ರಸ್ತಾಪವಾಗಿದೆ. ಈ ಸಂಬಂಧ ಬಸವಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲೆ ಸತ್ಯಕ್ಕ ಮಾಡಿದ ಆರೋಪ ಸತ್ಯಕ್ಕೆ ದೂರವಾದದ್ದು. ಆಕೆ ಮನೋರೋಗಿ ಎಂದಿದ್ದಾರೆ.
ಹೌದು! ಚಿತ್ರದುರ್ಗ ಮುರುಘಾ ಶರಣರ ಘಟನೆ ನಂತರ ಒಂದೊಂದೆ ಪ್ರಕರಣಗಳು ಹೊರ ಬರುತ್ತಿವೆ. ಸತ್ಯಕ್ಕ ಹಾಗೂ ರುದ್ರಮ್ಮ ಎಂಬುವವರು ಫೋನಿನ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯಲ್ಲಿ ಸತ್ಯಕ್ಕ ವಿವಿಧ ಮಠಾಧೀಶರ ಹೆಸರನ್ನು ಪ್ರಸ್ತಾಪ ಮಾಡಿ ಇವರಾರೂ ಸರಿಯಿಲ್ಲ ಎಂದಿದ್ದಾಳೆ. ಸದ್ಯ ಮಠದಲ್ಲೇ ಆತ್ಮಹತ್ಯೆಗೆ ಶರಣಾದ ನೇಗಿನಹಾಳ ಮಠದ ಸ್ವಾಮೀಜಿಯ ಹೆಸರನ್ನೂ ಸತ್ಯಕ್ಕ ಪ್ರಸ್ತಾಪ ಮಾಡಿದ್ದಾಳೆ. ಹೀಗಾಗಿಯೇ ಮನನೊಂದು ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದರು ಎಂಬ ಸಂಶಯ ವ್ಯಕ್ತಪಡಿಸಲಾಗಿದೆ. ಸತ್ಯಕ್ಕ ಎಂಬಾಕೆ ಮಾಡಿದ ಆರೋಪದಲ್ಲಿ ಮನಗುಂಡಿಯ ಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಯ ಹೆಸರೂ ಇದ್ದು, ಈ ಆರೋಪವನ್ನು ಬಸವಾನಂದ ಸ್ವಾಮೀಜಿ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.ಇನ್ನು ಸತ್ಯಕ್ಕ ಮೂಲತಃ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದವಳೇ ಆಗಿದ್ದು, ಸದ್ಯ ತಮಿಳುನಾಡಿನಲ್ಲಿ ನೆಲೆಸಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಆಡಿಯೋದಿಂದಲೇ ಮನನೊಂದು ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಇದೇನು ಅಷ್ಟೊಂದು ಗುರುತರವಾದ ಆರೋಪವಾಗಿರಲಿಲ್ಲ. ಇದನ್ನು ಸ್ವಾಮೀಜಿಗಳು ಎದುರಿಸಬಹುದಿತ್ತು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಸವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.


Spread the love

About Karnataka Junction

    Check Also

    ತಾವು ಬೇಸಿಗೆಯ ರಜೆಗಾಗಿ ವಿಶೇಷ ರೈಲುಗಳ ಸಂಚಾರ ಮಾಹಿತಿ ಇಲ್ಲಿದೆ

    Spread the loveಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ …

    Leave a Reply

    error: Content is protected !!