ಹುಬ್ಬಳ್ಳಿ; ಸರ್ಕಾರ ಅನೇಕ ಯೋಜನೆಗಳನ್ನು ಜನರಿಗೆ ಸದುಪಯೋಗವಾಗಲಿ ಅಂತಾ ಜಾರಿಗೆ ತರುತ್ತಾರೆ ಆದರೆ ಅದರಲ್ಲಿ ಅಧಿಕಾರಿಗಳು ಹಾಗೂ ಕೇಲ ಜನಪ್ರತಿನಿಧಿಗಳು ಸೇರಿಕೊಂಡು ಆ ಇಡೀ ಯೋಜನೆ ಯಾವುದೇ ರೀತಿಯ ಉಪಯೋಗಕ್ಕೆ ಬಾರದೇ ಹಾಳಾಗುವಂತೆ ಮಾಡುವ ಅನೇಕ ಉದಾಹರಣೆಗಳಲ್ಲಿ ಇದು ಒಂದು. ರಾಜ್ಯ ಸರ್ಕಾರ
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಅಮೃತ ಸರೋವರ ಯೋಜನೆ ಮೂಲಕ ಕೆರೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಪ್ರತಿ ಕೆರೆಗೆ 39 ಲಕ್ಷ ರೂ. ಬಿಡುಗಡೆಗೊಳಿಸಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲ್ಲಾಪುರ ಕೆರೆ ಅಭಿವೃದ್ಧಿಗೊಳಿಸದೆ 26 ಲಕ್ಷ ರೂ. ಸಾಮಗ್ರಿ ವೆಚ್ಚ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೆರೆಗಳು ಅಭಿವೃದ್ಧಿಗೊಂಡರೆ ಅಂತರ್ಜಲಮಟ್ಟ ಹೆಚ್ಚಿ ರೈತರಿಗೆ-ಸಾರ್ವಜನಿಕರಿಗೆ ಅನುಕೂಲವಾಗು ತ್ತದೆ. ಈ ದೃಷ್ಟಿಕೋನದಿಂದ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಮೃತ ಸರೋವರ ಯೋಜನೆಯ ಅನುದಾನ ತಾಲೂಕಿನಲ್ಲಿ ನುಂಗು ಬಾಕರ ಪಾಲಾಗುತ್ತಿದೆ ಎಂಬ ಆರೋಪ ದಟ್ಟವಾಗುತ್ತಿದೆ. ಆಗಷ್ಟ್
15ರಂದು ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಲ್ಲಿ ಧ್ವಜಾರೋಹಣ ಮಾಡಬೇಕೆಂಬುದು
ಮುಖ್ಯಮಂತ್ರಿಗಳ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ
ಕನಸಾಗಿತ್ತು. ಅದರಂತೆ ಈಗಾಗಲೆ ಈ ಗ್ರಾಮದಲ್ಲಿ ಅರೆಬರೆ ಕೆಲಸ ಮಾಡಿ ಎನ್‌ಎಂಆರ್ ನಲ್ಲಿ ಈಗಾಗಲೆ ಕೂಲಿ ಮೊತ್ತ 1,49,247 ರೂ. ಖರ್ಚು ಹಾಕಲಾಗಿದೆ. ಅದರಂತೆ ಸಾಮಗ್ರಿಗಳ ಮೊತ್ತ 26 ಲಕ್ಷ ರೂ.ಗಳನ್ನು ಖರ್ಚು ಹಾಕಿದ್ದಾರೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಹಣವನ್ನು ಖರ್ಚು ಹಾಕಿರುವುದು ಬೆಳಕಿಗೆ ಬಂದಿದೆ. ಕುಂದಗೋಳ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ಡಾ. ಮಹೇಶ ಕುರಿಯವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಟಿಎಇ ಅವರಿಗೆ ಈ ವಿಷಯ ಕುರಿತು ಉತ್ತರ ನೀಡುವಂತೆ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಆರ್‌ಇಡಿ ಸಹಾಯಕ ಅಧಿಕಾರಿ ಎಸ್.ಆರ್. ವೀರಕರ ಅವರನ್ನು ಮಾತನಾಡಿಸಿದಾಗ, ಈ ವಿಷಯ ಕುರಿತು ಯಾವುದೇ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಜಾರಿಕೊಳ್ಳುವ ಯತ್ನ ನಡೆಸಿದ್ದಾರೆ.ಇದು ಸಹ ಗ್ರಾಮ ಪಂಚಾಯತಿ ಅಧ್ಯಕ್ಷ ಚಿದಾನಂದ ಕುಸುಗಲ್ ಅವರ ಗಮನಕ್ಕೆ ತರದೇ
ಪಿಡಿಓ ಹಾಗೂ ಎನ್‌ಆರ್‌ಜಿ ತಾಂತ್ರಿಕ ಸಹಾಯಕ ಅಧಿಕಾರಿಗಳುಈ ರೀತಿ ಖರ್ಚು ಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸರ್ಕಾರ ಅಂತರ್ಜಲ ಮಟ್ಟ ವೃದ್ಧಿಸಲು ಅಮೃತ ಯೋಜನೆಯಡಿ ಕೆರೆಗಳ ಅಭಿವೃದ್ಧಿªಗೆ ಸಾವಿರಾರು ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇದು ಎಷ್ಟರಮಟ್ಟಿಗೆ ಸದುಪಯೋಗವಾಗುತ್ತಿದೆ, ಸದ್ಬಳಕೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದ್ದು, ಸೂಕ್ತ ಮೇಲುಸ್ತುವಾರಿಯಾಗಬೇಕಿದೆ.
ಇದರಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಕೈವಾಡ ಇರದೇ ಇರದು .ಆದ್ದರಿಂದ ಈಗಾಗಲೇ ಗ್ರಾಮ ಪಂಚಾಯತಿ ಸದಸ್ಯರಾದ ಚಿದಾನಂದ ಪೂಜಾರ ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಿಗಳಾದ ಡಾ. ಸುರೇಶ ಇಟ್ನಾಳ ಅವರಿಗೆ ಈ ಕುರಿತು ದೂರು ಸಹ ನೀಡಿದ್ದಾರೆ. ಇನ್ನು ಹಿರಿಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆದಾಗ ಇಂತಹ ಭ್ರಷ್ಟಾಚಾರಕ್ಕೆ ಸ್ವಲ್ಪ ಕಡಿವಾಣ ಹಾಕಬಹುದು.
ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು; ಇನ್ನು ಯಾವುದೇ ರೀತಿಯ ಕಾಮಗಾರಿ ಅಂದಾಜು ಪತ್ರ ತಯಾರಿಲ್ಲ ಯಾವುದೇ ಕಾಮಗಾರಿ ಪರವಾನಗೆ ಇಲ್ಲ ಏಕಾಏಕಿ ಕಾಮಗಾರಿ ನಡೆಸಲು ಇಂಜಿನಿಯರ್ , ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಏಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಗ್ರಾಮಕ್ಕೆ ಅಧಿಕಾರಿಗಳನ್ನು ಕರೆದುಕೊಂಡು ಪ್ರಶ್ನೆ ಸಹ ಮಾಡಿದ್ದಾರೆ.
