ಹುಬ್ಬಳ್ಳಿ; ಹೈಕೋರ್ಟ್ ನಿಂದ ಮಧ್ಯ ರಾತ್ರಿ ಅನುಮತಿ ಪಡೆದು, ಹುಬ್ಬಳ್ಳಿ ಈದ್ಗಾ ಮೈದಾನಲ್ಲಿ ನೂತನ ಇತಿಹಾಸ ಬರೆದು, ಪ್ರತಿಷ್ಠಾಪನೆಗೊಂಡಿದ್ದ ಗಜಾನನ ಇಂದು ಅದ್ದೂರಿಯಾಗಿ ವಿಸರ್ಜನೆಗೊಂಡಿದ್ದಾನೆ. ಸಂಘಟನೆ ಶಾಂತಿಯುತ ಹೆಜ್ಜೆ, ಪೊಲೀಸರ ಸರ್ಪಗಾವಲಿನಲ್ಲಿ ನಗರದಲ್ಲಿ ಸವಾರಿ ನಡೆಸಿದ ಗಜಾನನ ಯಾವುದೇ ವಿಘ್ನವಿಲ್ಲದೆ ತೆರಳಿದ್ದಾನೆ…
ಇಡೀ ರಾಜ್ಯದ ತುಂಬಾ ಸುದ್ದಿ ಮಾಡಿ,ಹತ್ತಾರು ಸಂಘಟನೆಗಳಿಂದ ಸತತ ಪ್ರತಿಭಟನೆ, ಪರ ಮತ್ತು ವಿರೋಧದಿಂದ ಹೈಕೋರ್ಟ್ ಮೆಟ್ಟಿಲೇರಿ, ಮಧ್ಯ ರಾತ್ರಿಯಲ್ಲಿ ಅನುಮತಿ ಪಡೆದುಕೊಂಡು, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡು ನೂತನ ಇತಿಹಾಸ ಬರೆದ ಗಣಪ, ಭಕ್ತರಿಂದ ಶಾಂತಿಯುತ, ಅರ್ಥಪೂರ್ಣವಾಗಿ ಮೂರು ದಿನ ಸೇವೆ ಮಾಡಿಸಿಕೊಂಡು, ಇಂದು ನಿಯಮದಂತೆ ವಿಸರ್ಜನೆ ಗೊಂಡಿದ್ದಾನೆ. ಐದರಿಂದ ಆರು ತಾಸು ಹುಬ್ಬಳ್ಳಿ ನಗರದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವಿನಾಯಕನನ್ನು ಹಿಂದೂಪರ ಸಂಘಟನೆಗಳು ಕಳುಹಿಸಿ ಕೊಟ್ಟಿದ್ದಾರೆ. ಪಾಲಿಕೆ ನೀಡಿದ ಅನುಮತಿಯ ಕರಾರಿನಂತೆ ಇಂದು ಬೆಳಗ್ಗೆ 12 ಗಂಟೆಗೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕೊನೆಯಾಗಿತ್ತು. ಪಾಲಿಕೆ ನಿಯಮಕ್ಕೆ ಗೌರವ ಕೊಟ್ಟ ಉತ್ಸವ ಸಮಿತಿ 12ಕ್ಕೆ ಸರಿಯಾಗಿ ಗಣೇಶ ಮೂರ್ತಿಯ ಮೆರವಣಿಯನ್ನು ಆರಂಭಿಸಲಾಯಿತು. ಮೆರವಣಿಗೆಯಲ್ಲಿ ಭಗ್ವ ಧ್ವಜಗಳು ರಾರಾಜಿಸಿದವು. ಜೈ ಶ್ರೀರಾಮ ಘೋಷಣೆ, ಗಜಾನನ ಜಯಘೋಷಗಳನ್ನು ಮೊಳಗಿಸಿ, ಸ್ಪೀಕರಗಳಲ್ಲಿ ಬನಾಯೇಗೆ ಮಂದಿರ ಹಾಡು ಹಾಕಿ, ಸಾವಿರು ಹಿಂದೂ ಕಾರ್ಯಕರ್ತರು ಹೆಜ್ಜೆ ಹಾಕಿ ಸಂಭ್ರಮಪಟ್ಟರು. ಇನ್ನೂ ಬೃಹತ್ ಗಾತ್ರದ ಗೊಂಬೆಗಳು, ಜಾಂಜ್ ಮೇಳ, ಡೋಲು ವಾದ್ಯಗಳು ಮೆರವಣಿಗೆಯೂದ್ದಕ್ಕೂ ಗಣಪನಿಗೆ ಸಾಥ್ ನೀಡಿದವು. ಇದರ ಜೊತೆಗೆ ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿರುವ ಸಾವರ್ಕರ್ ಭಾವ ಚಿತ್ರ ಪ್ರದರ್ಶನ ಜೊತೆಗೆ ಅವರ ಜಯಘೋಷವನ್ನು, ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲ ಯುವಕರು ಮಾಡಿದರು. ಇದಕ್ಕೂ ಮೊದಲು ಶ್ರೀರಾಮಸೇನೆಯ ಪರವಾಗಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಗಣೇಶನಿಗೆ ವಿದಾಯದ ಪೂಜೆ ಸಲ್ಲಿಸಿ, ವಾದ್ಯಗಳಿಗೆ ಹೆಜ್ಜೆ ಸಂಭ್ರಮಿಸಿದರು.
ಇನ್ನೂ ಮೆರವಣಿಗೆಯಲ್ಲಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಜೊತೆಗೆ, ಜಿಲ್ಲಾ ಬಿಜೆಪಿ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮರಾಠ ಸಂಘಟನೆಗಳ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿದವು. ಇನ್ನೂ ಮೂರು ದಿನ ಇಷ್ಟು ಶಾಂತಿ ರೀತಿಯಲ್ಲಿ ಗಣೇಶ ಉತ್ಸವ ನೆರವೇರಲು ಪೊಲೀಸರ ಮತ್ತು ಪ್ಯಾರಾ ಮಿಲಿಟರಿ ಪಡೆಯ ಶ್ರಮ ಅಪಾರಾವಾಗಿದೆ. ಕೊನೆಯ ದಿನವೂ ಮೈದಾನ ಸೇರಿದಂತೆ ಮೆರವಣಿಗೆಯೂದ್ದಕ್ಕೂ ಖಾಕಿಪಡೆ ಬೀಗಿ ಭದ್ರತೆಯಲ್ಲಿ ಸವಾರಿ ನಡೆಸಿದ ಗಣಪತಿ, ಇಂದಿರಾ ಗಾಂಧಿ ಗ್ಲಾಸ್ ಹೌಸ್ ಉದ್ಯಾನವನದ ಕೆರೆಯಲ್ಲಿ ವಿಸರ್ಜನೆಯಾದ್ದಾನೆ.
ಒಟ್ಟಿನಲ್ಲಿ ವಿರೋಧದಿಂದ ಇತಿಹಾಸವಾಗಿ ಎಂಟ್ರಿ ನೀಡಿದ ಗಣಪತಿ ಶಾಂತಿಯುತವಾಗಿ ಮರಳಿದ್ದಾನೆಂಬುವುದು ಸಂತಸದ ವಿಷಯ..
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …