Breaking News

ಬೆಣ್ಣೆ ಹಳ್ಳಕ್ಕೆ ಮೈತೊಬ್ಬ ಬೈಕ್ ಸವಾರ ಕೊಚ್ಚಿಕೊಂಡು ಗಂಗೆಯ ಪಾಲು, ಇನ್ನೋರ್ವ ಬಚಾವ್

Spread the love

ಧಾರವಾಡ; ನವಲಗುಂದ ತಾಲೂಕಿನ ಇಂಗಳಗಳ್ಳಿ ಗ್ರಾಮದಲ್ಲಿ ಇತ್ತೀಚೆಗೆ
ಬೆಣ್ಣೆ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡ ಹೋದ ಘಟನೆ ಮಾಸುವ ಮುನ್ನವೇ ಇನ್ನೊಬ್ಬ ಬೈಕ್ ಸವಾರಬೈಕ್ ಸಮೇತ ಕೊಚ್ಚಿಹೋದ ಓರ್ವ ವ್ಯಕ್ತಿ ಹೋಗಿದ್ದು ಮತ್ತೋರ್ವ ವ್ಯಕ್ತಿ ಅಪಾಯದಿಂದ ಪಾರಾದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ತಡಹಾಳ ಗ್ರಾಮದ ಹೊರವಲಯದಲ್ಲಿರುವ ಬೆಣ್ಣೆ ಹಳ್ಳದಲ್ಲಿ ಅವಘಡ ನಡೆದಿದ್ದು
ಗದಗ ಜಿಲ್ಲೆಯ ನರಗುಂದಕ್ಕೆ ಹೊರಟ್ಟಿದ್ದ ವೇಳೆ ಬೆಣ್ಣೆ ಹಳ್ಳ ದಾಟುವ ವೇಳೆ ಈ ಘಟನೆ ನಡೆದಿದ್ದು ತಡಹಾಳ ಗ್ರಾಮದ ಸದಾನಂದ ಪೂಜಾರ(೩೫) ನೀರು ಪಾಲಾದ ಬೈಕ್ ಸವಾರ ಆಗಿದ್ದು ಶರಣಯ್ಯ ಹಿರೇಮಠ ವ್ಯಕ್ತಿ ಪಾರಾಗಿದ್ದಾನೆ. ಸದಾನಂದನ ರಕ್ಷಣೆ ಮಾಡಲು ಮುದಾಂದ ಗ್ರಾಮಸ್ಥರು ಸಾಕಷ್ಟು ಹರಸಾಹಸ ಪಡುತಿದ್ದು
ಹಳ್ಳದ‌ ನೀರಿನ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ ರಕ್ಷಣೆಮಾಡುತ್ತಿದ್ದ ಗ್ರಾಮಸ್ಥರ ಕಣ್ಣೆದುರೆ ನೀರಿನಲ್ಲಿ ಕೊಚ್ಚಿ ಹೋದ ಸದಾನಂದನ್ನ ಮಾಡುವ ವಿಡಿಯೋ ಕರ್ಣಾಟಕ ಜಂಕ್ಷನ್ ಡಾಟ್ ಕಾಂಗೆ ಲಭ್ಯವಾಗಿವೆ. ಸ್ಥಳಕ್ಕೆ ಎನ್.ಡಿ.ಆರ್.ಎಫ್ ತಂಡ ದೌಡಾಯಿಸಿದ್ದುನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು ಈ ಬೆಣ್ಣೆ ಹಳ್ಳಕ್ಕೆ ಇನ್ನಷ್ಟು ಇನ್ನಷ್ಟು ಬಲಿಯಾಗಬೇಕು ಎಂದು ಸ್ಥಳೀಯರು ಜನಪ್ರತಿ‌ಧಿಗಳ ವಿರುದ್ಧ ಕೆಂಡಕಾರುತಿದ್ದಾರೆ‌.


Spread the love

About Karnataka Junction

    Check Also

    ರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ

    Spread the loveರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ ಹುಬ್ಬಳ್ಳಿ: ರಂಜಾನ್‌ ಹಬ್ಬದ ನಿಮಿತ್ತ …

    Leave a Reply

    error: Content is protected !!