Breaking News

ಹುಬ್ಬಳ್ಳಿ ನಗರ; ಲಾಕ್ ಡೌನ್ ಮೊದಲ ಹಂತ ಸಡಿಲಿಕೆ ಸಹಜ ಸ್ಥಿತಿಯತ್ತ ಹುಬ್ಬಳ್ಳಿ ನಗರ

Spread the love

https://youtu.be/D4htQYQufK8
ಹುಬ್ಬಳ್ಳಿ.-ಕೋವಿಡ್ ಎರಡನೇ ತಡೆಯಲು ಜಾರಿ ಮಾಡಲಾಗಿದ್ದ ಲಾಕ್ ಡೌನ್ ಜೂ.14 ರಿಂದ ಮೊದಲ ಹಂತದಲ್ಲಿ ತೆರವಾಗಿದ್ದು ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತಿದೆ
ಕಳೆದ ಒಂದು 35 ಲಾಕ್ ಡೌನ್ ನಿಂದ ಕಳೆಗುಂದಿದ್ದ ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಬರಲಿದ್ದು, ಇದರಿಂದ ವ್ಯಾಪಾರ ವಹಿವಾಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಲಾಕ್ ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಅನ್ ಲಾಕ್ ಮೊದಲ ಹಂತದಲ್ಲಿ ಆಹಾರ, ಹಣ್ಣು, ತರಕಾರಿ, ಮಾಂಸ, ಮೀನು, ಡೈರಿ ಪ್ರಾಡೆಕ್ಟ್, ದಿನಸಿ ಅಂಗಡಿಗಳನ್ನು ತೆರೆಯಲು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದ್ದು, ಇದರಿಂದ ದಿನಬಳಕೆಯ ವಸ್ತುಗಳ ಖರೀದಿಗೆ ಜನರಿಗೆ ಅನುಕೂಲವಾಗಲಿದೆ.
ಆಟೋ, ಟ್ಯಾಕ್ಸಿಯಲ್ಲಿ ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಆಟೋ, ಟ್ಯಾಕ್ಸಿ ಚಾಲಕರಿಗೆ ಇದರಿಂದ ಸ್ವಲ್ಪ ಮಟ್ಟಿಗೆ ಉಸಿರಾಡುವಂತಾಗಿದೆ. ಆಟೋ, ಟ್ಯಾಕ್ಸಿಗಳು ಎಂದಿನಂತೆ ಓಡಾಟ ಆರಂಭಿಸಿದ್ದು ಪ್ರಯಾಣಿಕರಿಗೂ ಇದರಿಂದ ಅನುಕೂಲವಾಗಲಿದೆ.ಎಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಇದರಿಂದ ಜನ ಸರ್ಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ. ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ವಾಯುವಿಹಾರಕ್ಕಾಗಿ ಪಾರ್ಕ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಲಾಕ್ ಡೌನ್ ನಿಂದಾಗಿ ಹೊರಗೆ ಓಡಾಡಲು ಆಗದೆ ಮನೆಯಲ್ಲಿಯೇ ಕುಳಿತು ಬೋರಾಗಿದ್ದವರು ಇನ್ನು ಮುಂದೆ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ವಾಯುವಿಹಾರಕ್ಕಾಗಿ ಪಾರ್ಕ್ ಗಳಿಗೆ ಜನರು ಕಂದು ಬಂದರು. ವಾರಾಂತ್ಯದಲ್ಲಿ (ಶನಿವಾರ, ಭಾನುವಾರ) ಕಠಿಣ ಕರ್ಫ್ಯೂ ಇರುವುದರಿಂದ ಅಗತ್ಯ ಓಡಾಟಕ್ಕೆ ಕಡಿವಾಣ ಬೀಳಲಿದೆ.
ಲಾಕ್ ಡೌನ್ ತೆರವಿನಿಂದ ಜನರ ಓಡಾಟ ಹೆಚ್ಚಾಗಲಿದ್ದು, ಇದರಿಂದ ಕೋವಿಡ್ ಸೋಂಕು ಹೆಚ್ಚಾಗುವ ಸಾಧ್ಯೆತೆಗಳೂ ಇವೆ. ಹೀಗಾಗಿ ಜನ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದರ ಮೂಲಕ ಸೋಂಕು ಹರಡದಂತೆ ತಡೆಯಲು ಮುಂದಾಗಬೇಕಿದೆ.


Spread the love

About Karnataka Junction

[ajax_load_more]

Check Also

ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ

Spread the loveಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ …

Leave a Reply

error: Content is protected !!