Breaking News

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸುತ್ತಿದೆ

Spread the love

ಹುಬ್ಬಳ್ಳಿ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸುತ್ತಿದೆ ಎಂದು ಮಣಿಪಾಲ ಗ್ಲೋಬಲ್ ಎಜ್ಯುಕೇಷನ್ ಚೇಮನ್ ಟಿ.ವಿ.ಮೋಹನ್‌ದಾಸ್ ಪೈ ಅಭಿಪ್ರಾಯ ಪಟ್ಟರು.
ನಗರದ ಗೋಕುಲ ರಸ್ತೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಎಲಿವೇಟ್ ವುಮೇನ್ ಸ್ಪಾಟ್ ಅಪ್ ಮೀಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐದಾರು ವಷಗಳ ಹಿಂದೆ ಮೊಬೈಲ್ ಗೆ ಬಳಸುವ ಡಾಟಾ ದರ ಹಾಗೂ ಈಗ ಬಳಸುತ್ತಿರುವ ಡಾಟಾ ದರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಭಾರತದಲ್ಲಿ ಶೀಘ್ರವೇ 5 ಜಿ ತರಂಗಾಂತರ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಡಿಜಿಟಲ್ ಕ್ಷೇತ್ರದಲ್ಲಿ ಆದು ಊಹಿಸಲಾಗದಷ್ಟು ಬದಲಾವಣೆ ತರಲಿದೆ ಎಂದರು.
5ಜಿ ತರಂಗಾತಂರಗ ಬಂದಾಗ ಇನ್ನುಷ್ಟು ಅಂಗವಾಗಬಹುದು. ಇಂಟರನೆಟ್‌ನಲ್ಲಿ ಈಗ ಸಾಗುವ ಕೆಲಸಕ್ಕಿಂತ ಐದಾರುಪಟ್ಟು ವೇಗದಲ್ಲಿ ಕೆಲಸವಾಗಲಿದೆ, ಸ್ವಾತಂತ್ರ್ಯ ಪೂರ್ವದಿಂದಲೂ ಭಾರತ ಸಂಪದಭರಿತ ರಾಷ್ಟ್ರ. ವ್ಯಾಪಾರದ ನೆಪದಲ್ಲಿ ಬಂದ ವಿದೇಶಿಗರು ಇಲ್ಲಿನ ಸಂಪತ್ತು ಲೂಟಿ ಹೊಡೆದರು. ಅದರೂ ಇಲ್ಲಿನ ಸಂಪತ್ತಿಗೆ ಬರವಿಲ್ಲ. ಕೈಗಾರಿಕೆಗೆ ಅಗತ್ಯವಾದ ಎಲ್ಲ ಬಗೆಯ ಕಚ್ಚಾವಸ್ತುಗಳೂ ನಮ್ಮಲ್ಲಿ ಲಭ್ಯವಿದೆ. ಅವುಗಳ ಸರ್ಮಪಕ ಬಳಕೆಯಿಂದ ಜಾಗತಿಕ ಮಾರುಕಟ್ಟೆಯನ್ನೇ ಸೃಷ್ಠಿಸಬಹುದು. ಅದಕ್ಕೆ ಪೂರಕವಾಗಿ ಡಿಜಿಟಲ್ ವೇದಿಕೆ ಬಳಕೆ ಮಾಡಿಕೊಳ್ಳಬೇಕು.ನವೋದ್ಯಮಿಗಳಿಗೆ ಸರಕಾರ ಅರ್ಥಿಕ ನೆರವು ನೀಡುತ್ತಾ ತರಬೇತಿ ಯನ್ನು ಸಹ ನೀಡುತ್ತಿದೆ. ಯುವ ಸಮುದಾಯ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಂದಿನ 10 ವರ್ಷಗಳಲ್ಲಿ ಏಷ್ಯಾ ಖಂಡ ಜಗತ್ತಿನಲ್ಲಿಯೇ ನಿರ್ಣಾಯಕ ಸ್ಥಾನದಲ್ಲಿ ಇರಲಿದೆ. 2030 ರಲ್ಲಿ ಚೀನಾ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ. ಭಾರತ ಮೂರನೇ ಸ್ಥಾನಕ್ಕೆ ಬರಲಿದೆ. ಭಾರತದಲ್ಲಿ ಸಿದ್ದವಾಗುವ ಸಾಪ್ಟವೇರ್‌ಗಳಿಗೆ ವಿದೇಶಗಳಲ್ಲಿ ದೊಡ್ಡ ಮಾರುಕಟ್ಟೆ ತೆರದುಕೊಳ್ಳುತ್ತದೆ. ಕೈಗಾರಿಕೆ, ತಂತ್ರಜ್ಞಾನ, ವಿಜ್ಞಾನ ಅವಿಷ್ಕಾರ ಹೀಗೆ ಪ್ರತಿಯೊಂದು ಕ್ಷೇತ್ರವು ಅಭಿವೃದ್ದಿಯತ್ತ ಸಾಗುತ್ತಾ. ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಳವಾಗಲಿದೆ.ಮಹಿಳೆಯರು ಸಹ ಎಲ್ಲೆಡೆ ಪ್ರಾತಿನಿಧ್ಯ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವರೇ ನಿರ್ಣಾಯಕರಾಗಲಿದ್ದಾರೆ ಎಂದು ಹೇಳಿದರು. ಇನ್ನು 4 ಜಿಯಲ್ಲಿಯೇ ಭಾರತ ಸಾಕಷ್ಟು ಶರವೇಗದಲ್ಲಿ ಬೆಳದಿದೆ ಇನ್ನು ಕೇಲವೇ ದಿನಗಳಲ್ಲಿ 5 ಜಿ ತರಾಂಗತರ ಬಂದರೆ ಊಹಿಸದಷ್ಟು ಬದಲಾವಣೆಯಾಗುತ್ತದೆ. ವಿಶ್ವದಾದ್ಯಂತ ಈಗ ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧನೆ ಭಾರತ ಸಾಧನೆ ಮಾಡುತ್ತಿದ್ದು ಇನ್ನೂ ಕೇಲವೇ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದರು.
ಉದ್ಯಮಿ ಸಂಜೀವ ಗುಪ್ತಾ,ಕಾಲೇಜು ಪ್ರಾಚಾರ್ಯ ಬಸವರಾಜ ಅನಾಮಿ, ರಾಜಶೇಖರ ಇದ್ದರು‌. ಕೆ.ಎಲ್ .ಸಂಸ್ಥೆಯ ಪ್ರೋ ಶಾಂತಾ ಕಲ್ಲೂರು ಕಾರ್ಯಕ್ರಮ ನಿರೂಪಿಸಿದರು‌.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!