ಧಾರವಾಡ; ಗಣೇಶ ಹಬ್ಬದಲ್ಲಿ ಡಿಜೆ ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸಲು ಏನಾದರೂ ಮಾರ್ಗ ಇದಿಯಾ ಎಂಬ ಕುರಿತು ಅಥವಾ ಪರಿಹಾರದ ದಾರಿ ಇದೆಯಾ ನೋಡುತ್ತೇವೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಗಣೇಶ ಹಬ್ಬಕ್ಕೆ ಡಿಜೆ ನಿರ್ಬಂಧ ವಿಚಾರ ಕುರಿತು ಸಾಕಷ್ಟು ಚರ್ಚೆ ನಡೆಸಲಾಗುತ್ತದೆ.
ಡಿಜೆ ಅನುಮತಿ ಪಡೆಯೊಲ್ಲ ಎಂಬ ಮುತಾಲಿಕ್ ಹೇಳಿಕೆ ವಿಚಾರ ಸಹ ಗಮನಕ್ಕೆ ಬಂದಿದ್ದು
ಈ ಡಿಜೆ ಬಗ್ಗೆ ಯಾರು ಏನೇ ಹೇಳಿರಲಿ ಆ ಬಗ್ಗೆ ನಾನು ನಾನು ಹೆಚ್ಚಿಗೆ ಪ್ರತಿಕ್ರಿಯೆ ನೀಡಲಾರೆ ಎಂದ ಅವರು, ಈ ವಿಚಾರದಲ್ಲಿ
ಪೊಲೀಸರು ಡಿಜೆ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ ಅದು ಕ್ರಮ ತೆಗೆದುಕೊಳ್ಳುತ್ತೇವೆ ಅಂತಲ್ಲ ಅದು ವಿಷಯ ಅಲ್ಲಾ ಮನವಿ ಮಾಡಿಕೊಂಡಿದ್ದಾರೆ ಅಷ್ಟೇ.
ಈಗಾಗಲೇ ಸುಪ್ರೀಂಕೋರ್ಟ್ ಮಾರ್ಗಸೂಚಿ ಹಿನ್ನೆಲೆ ಮನವಿ ಮಾಡಿಕೊಂಡಿದ್ದಾರೆ ಕಾರಣ
ಇತಿ ಮಿತಿಯಲ್ಲಿ ಮಾಡಿ ಅಂತಾ ಪೊಲೀಸರು ಹೇಳಿದ್ದಾರೆ ಆದ್ದರಿಂದ
ಇದಕ್ಕೇ ಪರಿಹಾರದ ದಾರಿ ಇದೆಯಾ ನೋಡುತ್ತೇವೆ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಹಬ್ಬ ಮಾಡಬೇಕಿದೆ ಇದು ದೊಡ್ಡ ಹಬ್ಬ ಆಗಿದೆ. ಮೂರು ವರ್ಷದ ಬಳಿಕ ಹಬ್ಬಕ್ಕೆ ಅವಕಾಶ ಸಿಕ್ಕಿದ್ದು
ಹೀಗಾಗಿ ಶಾಂತಿ, ಸೌಹಾರ್ದತೆಯಿಂದ ಹಬ್ಬ ಮಾಡಬೇಕಾಗಿದೆ
ಇದಕ್ಕೆ ಸಂಬಂಧಿಸಿದವರೊಂದಿಗೆ ಶೀಘ್ರವೇ ಸಭೆ ಮಾಡುತ್ತೇವೆ ಈ ಸಮಸ್ಯೆಗೆ ಒಂದು ಪರಿಹಾರ ಹುಡುಕುತ್ತೇವೆ ಎಂದರು.
