Breaking News

ಕಂದಮ್ಮನನ್ನು ಅಂಧಕಾರಕ್ಕೆ ನೂಕಿದ ಸುಣ್ಣ- ಮರು ಜೀವ ನೀಡಿದ ಡಾ.ಎಂ.ಎಂ.ನೇತ್ರ ವಿಜ್ಞಾನ ಸಂಸ್ಥೆ

Spread the love

ಹುಬ್ಬಳ್ಳಿ; ಅದು ಹಾಲುಗಲ್ಲದ ಮಗು ಎಳೆ ವಯಸ್ಸಿನಲ್ಲೇ ತಂದೆ ತಾಯಿ ಮಡಿಲಿಲ್ಲನಲ್ಲಿ ಆಟವಾಡಿ ನಕ್ಕು ನಲಿಯುವ ವಯಸ್ಸು. ಆದರೆ ಯಾರು ಮಾಡಿದ ತಪ್ಪಿಗೆ ಅದು ಶಿಕ್ಷೆ ಅನುಭವಿಸಬೇಕಾಗಿತ್ತು. ಆದರೆ ಈ ಮಗುವಿನ ಸಂತಸ ಮತ್ತು ಭವಿಷ್ಯ ಹಾಳಾಗಬಾರದು ಎಂಬ ನಿಟ್ಟಿನಲ್ಲಿ ಈ ಮಗುವಿಗೆ ನಗರದ ಹೊಸೂರಿನಲ್ಲಿನ ಡಾ.ಎಂ.ಎಂ.ನೇತ್ರ ವಿಜ್ಞಾನ ಸಂಸ್ಥೆಯ ಸಿಬ್ಬಂದಿ ಯಶಸ್ವಿಯಾಗಿ ಚಿಕಿತ್ಸೆ ಮೂಲಕ ಯಶಸ್ವಿಯಾಗಿದೆ.ಈ ಮಗು
ಎರಡು ದಿನಗಳ ಹಿಂದೆ 11 ತಿಂಗಳ ಮಗುವೊಂದು ಆಡುತ್ತಿರುವಾಗ ತನ್ನ ಅಜ್ಜಿ ಬಳಸುತ್ತಿದ್ದ ಚುನ್ನಂಬು ( ಸುಣ್ಣ) ಪ್ಲಾಸ್ಟಿಕ್ ಪ್ಯಾಕೆಟ್ (ಡಬ್ಬಿ)ಯನ್ನ ಆಕಸ್ಮಿಕವಾಗಿ ಮಗುವಿನ ಕೈಗೆ ಸಿಕ್ಕು, ಆ ಪ್ಲಾಸ್ಟಿಕ್ ಪ್ಯಾಕೇಟ್ ಹರಿದು ಸುಣ್ಣದ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್) ಪುಡಿ ಮಗುವಿನ ಬಲಗಣ್ಣಿಗೆ ಹಾರಿ, ಅದು ಅಸಹನೀಯವಾಗಿ ಉರಿಯಿತು.
ನಂತರ ತಂದೆ ತಾಯಿ ಹಾಗೂ ಸಂಬಂದಿಕರು ಕೂಡಲೇ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ಮಗುವನ್ನು ತಪಾಸಣೆಗೆಂದು ಕರೆತಂದಾಗ ತಿಳಿದಿದ್ದು ಮಗುವಿನ ಸಂಪೂರ್ಣ ದೃಷ್ಟಿಗೆ ಹಾನಿಯಾಗಿದೆ ಎಂದು. ಭವಿಷ್ಯದಲ್ಲಿ ದೃಷ್ಟಿಯು ಮರಳಿ ಬರುವ ಸಾಧ್ಯತೆಗಳು ಕೂಡ ಕಡಿಮೆ ಎಂಬುದು ಬೇಸರದ ಸಂಗತಿ ತಿಳಿದಿದ್ದು. ನಂತರ ಕಾರ್ಯನಿರತವಾದ ಡಾ‌.ಎಂ.ಎಂ.ಜೋಶಿ ವೈದ್ಯಕೀಯ ತಂಡ ಅತ್ಯಂತ ಸೂಕ್ಷ್ಮ ಹಾಗೂ ಚಾಲೆಂಜ್ ಎಣಿಸಿದ ಈ ಮಗುವಿನ ನೇತ್ರದಲ್ಲಿನ ಸುಣ್ಣ ತೆಗೆಯುವಲ್ಲಿ ಯಶಸ್ವಿಯಾದರು.
ಸಾಮಾನ್ಯವಾಗಿ ವೀಳ್ಯದೆಲೆಗೆ ಮಸಾಲೆ ಹಾಕಲು ಅಥವಾ ಸುಣ್ಣ ಬಣ್ಣ ಬಳಿಯಲು ಬಳಸುವ ಸುಣ್ಣ, ಪ್ರತಿ ವರ್ಷ ಹತ್ತಾರು ಮಕ್ಕಳಲ್ಲಿ ಕಣ್ಣಿನ ಗಾಯಗಳನ್ನು ಉಂಟು ಮಾಡುತ್ತದೆ ಎಂಬುದು ಆಘಾತಕಾರಿ ವಿಷಯ ಹಾಗೂ ಈ ವಿಷಯದ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲದೇ ಜನ ತಮ್ಮ ದೃಷ್ಟಿಗೆ ಹಾನಿ ಮಾಡಿಕೊ ಳ್ಳುತ್ತಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ.
ಪ್ರತಿ ವರ್ಷ ಈ ರೀತಿ ಸುಮಾರು ಪ್ರಕರಣಗಳು ದೇಶಾದ್ಯಂತ ಸಂಭವಿಸುತ್ತಿವೆ, ಹಾಗೂ ಇದೆ ಪ್ರಸ್ತುತ ವರ್ಷ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಕಂಡು ಬಂದ 10 ನೇ ಪ್ರಕರಣ ಇದಾಗಿದೆ, ಕಳೆದೆರಡು ವರ್ಷಗಳಲ್ಲಿ ಈ ತರಹದ 52 ಪ್ರಕರಣಗಳು ಸಂಭವಿಸಿವೆ. ಅದರಲ್ಲೇ ಕೇವಲ 11 ತಿಂಗಳ ಮಗುವಿನ ದೃಷ್ಟಿ ಹಾನಿ ತುಂಬಾ ಬೇಸರಪಡಿಸುವಂತಹದು ಎಂದು
ಡಾ.ಎಂ.ಎಂ.ನೇತ್ರ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಡಾ. ಶ್ರೀನಿವಾಸ ಜೋಶಿ ಹೇಳುತ್ತಾರೆ.
ಹಳ್ಳಿ ಹಾಗೂ ಪಟ್ಟಣದಲ್ಲಿ ಸಾಕಷ್ಟು ಜನ ಚುನ್ನಂಬು ( ಸುಣ್ಣ) ಪ್ಲಾಸ್ಟಿಕ್ ಪ್ಯಾಕೆಟ್ ನ್ನು ಬಳಸುತ್ತಿದ್ದು ಈ ಪ್ಲಾಸ್ಟಿಕ್ ಪ್ಯಾಕೆಟ್ಗಳು ತುಂಬಾ ತೆಳುವಾಗಿ ಅತಿ ಸುಲಭವಾಗಿ ಹರಿದು ಬಿಡುವಂತಹುವಾಗಿವೆ.
ಇಂತಹ ಪ್ಯಾಕೆಟ್ ಗಳು ಮಕ್ಕಳ ಕೈಗೆ ಸುಲಭವಾಗಿ ಸಿಗುವಂತೆ ಇಡುವುದು, ಇದಲ್ಲದೆ ಮಕ್ಕಳನ್ನು ಸುಣ್ಣ ತರಲು ಅಂಗಡಿಗೆ ಕಳುಹಿಸುವುದು ಮಕ್ಕಳು ಅವುಗಳೊಂದಿಗೆ ಆಟವಾಡುತ್ತ ಬರುವಾಗ ಈ ತರಹದ ಪ್ರಕರಣಗಳು ಸಂಭವಿಸುತ್ತಿವೆ.
ಹಾಗೂ ಈ ದೃಷ್ಟಿ ಹಾನಿ ಪ್ರಕರಣಗಲಿಂದಾದ ದೃಷ್ಟಿ ಹಾನಿಯನ್ನು ಮರಳಿ ಪಡೆಯುವುದು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯನ್ನು ತಗೆದುಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸವುದು ಬಹಳ ಮುಖ್ಯ
ಈ ರೀತಿಯ ಗಾಯವು ಕ್ಷಣಾರ್ದದಲ್ಲಿ ಕುಟುಂಬವನ್ನು ತೊಂದರೆಗೆ ತಳ್ಳುತ್ತದೆ. ಇದು ಮಕ್ಕಳ ಶಾಲಾ ಶಿಕ್ಷಣ, ಜೀವನೋಪಾಯಕ್ಕೂ ಅಡ್ಡಿಪಡಿಸುತ್ತದೆ ಮತ್ತು ಜೀವನಪರ್ಯಂತ ಮಗು ಮತ್ತು ಪೂರ್ಣ ಕುಟುಂಬ ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ.
ಕಣ್ಣಿನ ಸ್ಪಷ್ಟತೆಗೆ ಕಾರ್ನಿಯ ಅತಿ ಮುಖ್ಯವಾಗಿದ್ದು ಕಣ್ಣಿಗೆ ಸುಣ್ಣದಿಂದ ಆದ ಹಾನಿಯು ತುಂಬಾ ವ್ಯಾಪಕವಾಗಿ ಕಣ್ಣಿನ ಕಾರ್ನಿಯಾ ಮೇಲ್ಪದರನ್ನು ಮತ್ತು ಪೂರ್ಣ ಕಾರ್ನಿಯವನ್ನು ನಾಶಪಡಿಸಿ ದೃಷ್ಟಿಗೆ ಹಾನಿಮಾಡುವಂತಹುದಾಗಿದೆ, ಇದರಿಂದ ಉಂಟಾದ ದೃಷ್ಠಿ ಹಾನಿಯು ಮರಳಿ ಬರುವದು ತುಂಬಾ ಕಠಿಣ.
ಇದರ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವುದೇ ಇಂದಿನ ಒಂದು ದೊಡ್ಡ ಸಮಸ್ಯೆಯಾಗಿದೆ. ಈ ರಾಸಾಯನಿಕ ಎಷ್ಟು ಅಪಾಯಕಾರಿ ಎಂಬುದನ್ನು ಪಾಲಕರಷ್ಟೇ ಅಲ್ಲದೆ ಎಲ್ಲ ಜನರು ಅರಿತುಕೊಳ್ಳಬೇಕು. ಸರಿಯಾದ ಶೇಖರಣೆ ಕಂಟೈನರ್ಗಳಲ್ಲಿ ಅದನ್ನು ಪ್ಯಾಕ್ ಮಾಡಲಾಗಿದೆಯೇ ಮತ್ತು ಮಾರಾಟ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸಹ ತುಂಬಾ ನಿರ್ಣಾಯಕವಾಗಿದೆ.
ಈ ಬಗ್ಗೆ ಅರಿವು ಮೂಡಿಸುವುದು ಹಾಗೂ ಜನರನ್ನು ಜಾಗೃತರನ್ನಾಗಿ ಮಾಡುವದು ನಮ್ಮ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಮುಖ್ಯ ಉದ್ದೇಶ. ಈ ರೀತಿಯ ಪ್ರಕರಣಗಳು ಮತ್ತೆ ಮರುಕಳಸದಿರುವಂತೆ ಮಾಡಲು ಕೇವಲ ಸರಿಯಾದ ಮಾಹಿತಿ ಮತ್ತು ಮಕ್ಕಳ ಕೈಗೆ ಅತಿ ಸುಲಭವಾಗಿ ಸುಣ್ಣದ ಪ್ಲಾಸ್ಟಿಕ್ ಪ್ಯಾಕೆಟ್ ಗಳಾಗಲಿ, ಸುಣ್ಣದ ಟೂಬ್ ಗಳಾಗಲಿ ಸಿಗದಂತೆ ಇಡುವದು ಹಾಗೂ ಸುಣ್ಣವನ್ನು ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲಿಡದಂತೆ ಸರಿಯಾದ ರೀತಿಯಲ್ಲಿ ಡಬ್ಬಗಳಲ್ಲಿ ಪ್ಯಾಕ್ ಮಾಡಿ ಲಾಕ್ ಮಾಡುವಂತ ವಿಧಾನಗಳನ್ನು ಬಳಸುವಂತೆ ಮಾಡುವದರಿಂದ ಇಂತಹ ಪ್ರಕರಣಗಳನ್ನು ತಡೆಗಟ್ಟಬಹುದು ಎಂಬುದು ನಮ್ಮ ಸಂಸ್ಥೆಯ ಮನವಿಯಾಗಿದೆ ಎಂದು ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಯ ವೈದ್ಯರು ಮಾಹಿತಿ ನೀಡಿದರು.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!